Skip to product information
1 of 2

Shivananda Kalave

ಮೇಷ್ಟ್ರ ಗಿರಿ

ಮೇಷ್ಟ್ರ ಗಿರಿ

Publisher - ಸಾಹಿತ್ಯ ಭಂಡಾರ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 168

Type - Paperback

Gift Wrap
Gift Wrap Rs. 15.00

ನಿಸರ್ಗದ ಒಡನಾಟದಲ್ಲಿ ಬಾಲ್ಯ ಬೆಳೆಯಬೇಕು. ಓದಿನ ಒತ್ತಡದಲ್ಲಿ ಇಂದು ನಮ್ಮ ಮಕ್ಕಳು ಮರ, ನದಿ, ಗುಡ್ಡ, ಹುಲ್ಲು, ಚಿಟ್ಟೆ, ಹಕ್ಕಿ, ಮಣ್ಣು ಮುಂತಾದವುಗಳನ್ನು ಮರೆತು ಬಿಟ್ಟಿದ್ದಾರೆ. ಹಣವಿದ್ದರೆ ಆರೋಗ್ಯ ಖರೀದಿಸಬಹುದೆಂಬ ಭ್ರಮೆಯ ಲೋಕ ವಿಸ್ತರಿಸಿದೆ. ಜಲ ಕ್ಷಾಮ, ಬರಗಾಲ, ತಾಪಮಾನದ ಹೆಚ್ಚಳದ ಕಾರಣ ಆವಾಸದ ಅಂಗಳದಲ್ಲಿ ಕಾಯಿಲೆ ತುಂಬಿದೆ.

ಉಸಿರಾಡುವ ಗಾಳಿ, ಕುಡಿಯುವ ನೀರು, ಆಹ್ಲಾದಕರ ಪರಿಸರ ಹಾಳಾಗುತ್ತಿದೆ. ಭೂಮಿಯ ಭಾಗವಾದ ನಾವು ಪರಿಸರದ ಮಹತ್ವಗಳ ಕುರಿತು ತಿಳಿಯಬೇಕಾದದ್ದು ಹಲವಿದೆ. ನಾವು ಏನು ಓದಿದ್ದೇವೆ? ಈ ಜಗದಲ್ಲಿ ಎಂಥ ಸಾಧನೆ ಮಾಡಿದ್ದೇವೆಂಬುದಕ್ಕಿಂತ ನಿತ್ಯ ಜೀವನದಲ್ಲಿ ನೆಲ ಜಲ ಸಂರಕ್ಷಣೆಗೆ ಹೆಜ್ಜೆಯಿಟ್ಟಿದ್ದೇವೆಯೇ? ಎಂಬುದು ಅತ್ಯಂತ ಮುಖ್ಯ. ಕಾಲು ಬುಡದ ಕಾಡು ಯಾತ್ರೆಯ ಕೌತುಕದ ಕಲಿಕೆಗೆ ಬರಹಗಾರ ಶಿವಾನಂದ ಕಳವೆಯವರ ಪರಿಸರ ಶಿಕ್ಷಣ ದೇಸಿ ಮಾರ್ಗ 'ಮೇಷ್ಟ್ರ ಗಿರಿ' ಒಂದು ಅನನ್ಯ ಪ್ರಯತ್ನ.

-ಎಂ.ಎ. ಸುಬ್ರಹ್ಮಣ್ಯ

View full details