Jogi
ಮಸಾಲೆ ದೋಸೆಗೆ ಕೆಂಪು ಚಟ್ನಿ - ಅಂಕಣ ಬರಹಗಳು
ಮಸಾಲೆ ದೋಸೆಗೆ ಕೆಂಪು ಚಟ್ನಿ - ಅಂಕಣ ಬರಹಗಳು
Publisher -
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಕಾಡಲ್ಲಿದ್ದುಕೊಂಡು ಪ್ರಾಣಿಗಳನ್ನು ಕಲ್ಲಲ್ಲಿ ಜಜ್ಜಿ ಹಸಿಹಸಿಯಾಗಿ ತಿನ್ನುತ್ತಿದ್ದ ಮನುಷ್ಯ, ಒಂದು ಕಡೆ ನೆಲೆ ನಿಂತು, ಬತ್ತ ಬೆಳೆದು, ಅದನ್ನು ಕುಟ್ಟಿ ಅಕ್ಕಿ ಮಾಡಲು ಕಲಿತು, ಅದನ್ನು ರುಬ್ಬಿ ತೆಳ್ಳಗೆ ಬೇಯಿಸಿ, ಅದಕ್ಕೆ ಆಲೂಗಡ್ಡೆ ಮತ್ತು ಈರುಳ್ಳಿಯ ಪಲ್ಯ ಬೆರೆಸಿ ತಿನ್ನಬಹುದೆಂದು ಕಲಿತದ್ದು ಮನುಕುಲದ ಅತಿದೊಡ್ಡ ಆವಿಷ್ಕಾರಗಳಲ್ಲಿ ಒಂದು. ಇಂಥ ತರಲೆ ಮತ್ತು ಹೊಟ್ಟೆ ತುಂಬಿಸುವ ಉಪಾಯಗಳನ್ನು ಅಭಿರುಚಿಯನ್ನಾಗಿ ಮಾಡಿಕೊಂಡಾಗ, ಮಸಾಲೆದೋಸೆಗೆ ಕೆಂಪು ಚಟ್ಟಿ ಸವರಿದರೆ ಕಲಾತ್ಮಕವಾಗಿರುತ್ತೆ ಎಂದು ಅದ್ಯಾರಿಗೋ ಹೊಳೆದಿರಬೇಕು. ಹೊಟ್ಟೆಪಾಡನ್ನು ಹೀಗೆ ಕಲೆಗಾರಿಕೆಯನ್ನಾಗಿ ಮಾಡಿಕೊಳ್ಳುವ ನಮ್ಮ ಪ್ರಯತ್ನದಲ್ಲೇ ಬದುಕಿನ ಸಾರ್ಥಕತೆ ಇದೆ ಅನ್ನಿಸುತ್ತದೆ. ನಾವು ಏಕಕಾಲಕ್ಕೆ ಬದುಕಲೂ ಬೇಕು, ಜೀವಿಸಲೂ ಬೇಕು. ನಮಗೆ ಜೀವಶಾಸ್ತ್ರವೂ ಬೇಕು, ಭಾವಶಾಸ್ತ್ರವೂ ಬೇಕು. ಇಲ್ಲಿರುವ ಬರಹಗಳು ಬದುಕೆಂಬ, ಮಸಾಲೆದೋಸೆಗೆ ಕೆಂಪು ಚಟ್ಟಿ ಇದ್ದಂತೆ!
ಪ್ರಕಾಶಕರು - ಅಂಕಿತ ಪುಸ್ತಕ
Share

Subscribe to our emails
Subscribe to our mailing list for insider news, product launches, and more.