Srinivasa K Desai
ಮರುಳ ಮುನಿಯನ ಕಗ್ಗ ದರ್ಶನ
ಮರುಳ ಮುನಿಯನ ಕಗ್ಗ ದರ್ಶನ
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹350
- Cash on Delivery (COD) Available*
Pages - 196
Type - Paperback
Couldn't load pickup availability
ವಿದ್ವಾನ್ ಶ್ರೀ ಎನ್. ರಂಗನಾಥ ಶರ್ಮರು ಗೈದ ಅಪೂರ್ವ ಸಂಪಾದನೆಯಿಂದ 'ಮರುಳ ಮುನಿಯನ ಕಗ್ಗ' ಮುದ್ರಣ ಭಾಗ್ಯ ಪಡೆದ ಕಾವ್ಯಗ್ರಂಥವಾಯಿತು. 'ಇದು ಮಂಕುತಿಮ್ಮನ ಕಗ್ಗದ ಮುಂದುವರಿದ ಭಾಗ ಅಥವಾ ಎರಡನೇ ಭಾಗ ಅಂದರೂ ಸಲ್ಲುವುದು' ಎಂಬ ಶ್ರೀ ಎನ್. ರಂಗನಾಥ ಶರ್ಮರ ನುಡಿಯಲ್ಲಿ ಸತ್ಯವುಂಟು. 'ಮಂಕುತಿಮ್ಮನ ತಮ್ಮನಾದರೂ ಅಣ್ಣನಿಗೆ ಸರಿದೊರೆಯಾಗಿ ನಿಲ್ಲುತ್ತಾನೆ; ಕೆಲವೆಡೆ ಅವನನ್ನು ಮೀರಿಸುತ್ತಾನೆ' ಎಂದು ಲಿಖಿತಪಡಿಸಿರುವ ಶ್ರೀ ರಂಗನಾಥ ಶರ್ಮರು ಮರುಳ ಮುನಿಯನ ಕಗ್ಗದ ಹಿರಿಮೆಯನ್ನು ಎತ್ತಿತೋರಿದ್ದಾರೆ.
ಕಾಸರಗೋಡಿನ ಶ್ರೀ ಎ. ನರಸಿಂಹ ಭಟ್ಟರು ಪೂಜ್ಯ ಡಿ.ವಿ.ಜಿ. ಅವರ ಆರಾಧಕರು. ಅನುವಾದ ಕೈಂಕರ್ಯದಲ್ಲಿ ಉಭಯರೂಪದಲ್ಲಿ ನಿಷ್ಣಾತರಾಗಿದ್ದರು; ಕನ್ನಡದಿಂದ ಇಂಗ್ಲಿಷ್ಗೆ ಹಾಗೂ ಇಂಗ್ಲಿಷಿನಿಂದ ಕನ್ನಡಕ್ಕೆ. ಎರಡೂ ಕಗ್ಗಗಳು ಶ್ರೀ ನರಸಿಂಹ ಭಟ್ಟರಿಂದ ಇಂಗ್ಲಿಷ್ ಭಾಷೆಯಲ್ಲಿ ಕಾವ್ಯರೂಪವಾಗಿ ಅನುವಾದವಾಗಿವೆ. ಅಲ್ಲದೆ, ಎರಡೂ ಕಗ್ಗಗಳಿಗೆ ಶ್ರೀ ನರಸಿಂಹ ಭಟ್ಟರು ತಮ್ಮ ಸಂಪೂರ್ಣ ವೃದ್ಧಾಪ್ಯ ವಯಸ್ಸಿನಲ್ಲಿ ಭಾಷ್ಯರೂಪದ ವಿಸ್ತೃತ ಗದ್ಯ ಗ್ರಂಥಗಳನ್ನು ರಚಿಸಿ ಧನ್ಯತೆ ಪಡೆದಿದ್ದಾರೆ.
'ಸತ್ಯಾರ್ಥಿಯ ಹೃದ್ಗೀತೆ' ಮರುಳ ಮುನಿಯನ ಕಗ್ಗದ ಕುರಿತು ಬರೆದ ಗದ್ಯಗ್ರಂಥದಿಂದ ಅನ್ವಯ-ಅನುವಾದಗಳ ನೆರವು ಪಡೆದು 'ಮರುಳ ಮುನಿಯನ ಕಗ್ಗ ದರ್ಶನ' ಸಿದ್ಧಪಡಿಸಲಾಗಿದ್ದು, ಇದು ಶ್ರೀ ನರಸಿಂಹ ಭಟ್ಟರಿಗೆ ಸಂದ ಗೌರವವಾಗಿದೆ.
Share

Subscribe to our emails
Subscribe to our mailing list for insider news, product launches, and more.