Asha Raghu
ಮಾರ್ಕೋಲು
ಮಾರ್ಕೋಲು
Publisher -
- Free Shipping Above ₹350
- Cash on Delivery (COD) Available*
Pages - 136
Type - Paperback
Couldn't load pickup availability
ಅಧ್ಯಯನದ ಅರಿವನ್ನು ಅಂತರಂಗದ ಸಂವೇದನೆಯಾಗಿಸಿಕೊಳ್ಳುವುದು ಸುಲಭದ ಪ್ರಕ್ರಿಯೆಯಲ್ಲ. ಇದು ಚಿಂತನಶೀಲತೆ ಮತ್ತು ಸಂವೇದನಾಶೀಲತೆಗಳನ್ನು ಒಂದಾಗಿಸುವ ಸವಾಲು. ಈ ಸವಾಲನ್ನು ಸ್ವೀಕರಿಸಿರುವ ಲೇಖಕಿ, ವಾಸ್ತವಿಕತೆ ಮತ್ತು ಕಲ್ಪಕತೆಗಳೊಂದಾದ ಕಾದಂಬರಿಯನ್ನು ಆಡುಭಾಷೆಯಲ್ಲಿ ನಿರೂಪಿಸಿ ಭಾಷಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮುಖ್ಯವಾಗಿಸಿದ್ದಾರೆ. ವಸ್ತು ಮತ್ತು ವಿನ್ಯಾಸದ ದೃಷ್ಟಿಯಿಂದ ಕನ್ನಡಕ್ಕೆ ಚಿಂತನಾರ್ಹ ಕೃತಿಯೊಂದನ್ನು ಕೊಟ್ಟಿದ್ದಾರೆ.
-ಡಾ. ಬರಗೂರು ರಾಮಚಂದ್ರಪ್ಪ
ಈ ಕೃತಿಯಲ್ಲಿ ವಸ್ತುವಿನಷ್ಟೇ ಮಹತ್ವ ಅದರ ಭಾಷೆಗೂ ಪ್ರಾಪ್ತವಾಗಿದೆ. ಗತ ಮತ್ತು ಪ್ರಸ್ತುತಗಳನ್ನು ಲೋಲಕದ ಮಾದರಿಯಲ್ಲಿ ಸ್ಪರ್ಶಿಸುತ್ತ ಸಾಗುವ ಇದರ ನಿರೂಪಣಾ ಕ್ರಮವು ಕೆಲವೆಡೆ ಮೇಲ್ನೋಟಕ್ಕೆ ಏಕರೇಖಾತ್ಮಕವೆನ್ನಿಸಿದರೂ, ಅಗತ್ಯಕ್ಕನುಗುಣವಾಗಿ ಅಲ್ಲಲ್ಲಿ ತಂತು ಮಾದರಿ ನಿರೂಪಣೆಯನ್ನೂ ಬಳಸಿಕೊಂಡಿದೆ. ನಡಿಗೆಯ ಈ ವಿಧಾನವು ಅಲ್ಲಲ್ಲಿ ವಡ್ಡಾರಾಧನೆಯ ಜನ್ಮಾಂತರದ ಕಥೆಗಳನ್ನು ನೆನಪಿಸುತ್ತದೆ.
-ಡಾ. ಚಿದಾನಂದ ಸಾಲಿ
ಜಾನಪದ ಕಥೆಗಳಿಂದ ಸ್ಫೂರ್ತಿ ಪಡೆದು ಹುಟ್ಟಿದ ಈ ಮಾರ್ಕೋಲು ಕುತೂಹಲಭರಿತವಾಗಿ ಓದಿಸಿಕೊಂಡು ಹೋಗುವ ಕೃತಿ. ಅನೇಕ ಅಲೌಕಿಕ ಘಟನೆಗಳ ಕುರಿತು ಅಧ್ಯಯನ ನಡೆಸಿದ ಆಶಾ ರಘು ಶ್ರದ್ಧೆಯಿಂದ ಹೆಣೆದು ಈ ಕೃತಿಯನ್ನು ಕಟ್ಟಿದ್ದಾರೆ. ಮನುಷ್ಯನ ಪ್ರಯತ್ನದಿಂದ ಯುಕ್ತಿಯಿಂದ ಹಣೇಬರವನ್ನೂ ಮೀರಬಹುದು ಎನ್ನುವ ದ್ಯಾಮವ್ವಳ ಮಾತು ಇಲ್ಲಿ ಹೆಚ್ಚು ಪ್ರಸ್ತುತ.
-ಶ್ರೀಮತಿ ಸುನಂದಾ ಕಡಮೆ
ಅನೇಕ ಕಥೆ-ಉಪಕಥೆಗಳು, ಸ್ವಾರಸ್ಯಕರ ಪಾತ್ರಗಳು ಸನ್ನಿವೇಶಗಳು ಕಾದಂಬರಿಯ ಹೂರಣದಲ್ಲಿ ಅಡಕಗೊಂಡಿವೆ. ಒಂದು ಓದಿಗೆ ದಕ್ಕದಷ್ಟು ವಿವರಗಳು ದಟ್ಟವಾಗಿ ಕೃತಿಯ ಹರಹಿನಲ್ಲಿ ತುಂಬಿಕೊಂಡಿವೆ. ಕೃತಿಯನ್ನು ಕಟ್ಟಿಕೊಟ್ಟಿರುವ ಕುಶಲತೆಗೆ, ಸೂಕ್ಷ್ಮ ಸಂವೇದನಾಶೀಲ ಕಥಾಭಿತ್ತಿಯೊಂದನ್ನು ಸಮರ್ಥವಾಗಿ ಕಡೆದು ಕೊಟ್ಟಿರುವ ಜಾಣಿಗೆ, ಭಾಷಾ-ವಸ್ತುಗಳ ವೈವಿಧ್ಯತೆ ಹಾಗೂ ಪ್ರಯೋಗಶೀಲತೆಗಳಿಗೆ, ಖಚಿತ ಆರೋಗ್ಯಕರ ನಿಲುವುಗಳಿಗೆ ಲೇಖಕಿ ಆಶಾ ರಘು ಅವರನ್ನು ಮನಸಾರೆ ಅಭಿನಂದಿಸುತ್ತೇನೆ.
-ಶ್ರೀ ಶ್ರೀನಿವಾಸ ಪ್ರಭು
Share

Subscribe to our emails
Subscribe to our mailing list for insider news, product launches, and more.