Gururaj Desai
ಮರಕಂಬಿ
ಮರಕಂಬಿ
Publisher -
- Free Shipping Above ₹350
- Cash on Delivery (COD) Available*
Pages - 64
Type - Paperback
Couldn't load pickup availability
ದಲಿತರ ಮೇಲಿನ ದೌರ್ಜನ್ಯಗಳು ಒಂದೇ ಸಮನೆ ಸಂಭವಿಸುತ್ತಿವೆ. ಜಾತಿ ವ್ಯವಸ್ಥೆಯ ಭೀಕರ ಪರಿಸ್ಥಿತಿಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಜಾತಿ ನಿರ್ಮೂಲನಾ ಆಂದೋಲನದಲ್ಲಿ ಸಮ ಸಮಾಜದ ಆಶೋತ್ತರಗಳನ್ನು ಈಡೇರಿಸಲು ಮುಖ್ಯವಾದ ಕೆಲಸಗಳನ್ನು ನಾವೆಲ್ಲರೂ ಮಾಡಬೇಕಾಗಿದೆ.
ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರನ್ನೂ ಜಾಗೃತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮರಕುಂಬಿ ಪ್ರಕರಣ ನಡೆಯುವ ಸಂದರ್ಭದಲ್ಲಿ ಅಲ್ಲಿದ್ದು ವಾಸ್ತವಾಂಶ ಬಲ್ಲ ಎಸ್.ಎಫ್.ಐ ನಾಯಕರಾಗಿದ್ದ ಗುರುರಾಜ ದೇಸಾಯಿ ಅವರ ಪ್ರಯತ್ನ ಮಹತ್ವದ್ದು ಮೆಚ್ಚುವಂತದ್ದು. ಜನಜಾಗೃತಿ ಸಮರಕ್ಕೆ ನೆರವಾಗಬಲ್ಲದು.
ಗೋಪಾಲಕೃಷ್ಣ ಹರಳಹಳ್ಳಿ, ರಾಜ್ಯಾದ್ಯಕ್ಷರು, ದಲಿತ ಹಕ್ಕುಗಳ ಸಮಿತಿ
ಕೊಪ್ಪಳ ಜಿಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಶೋಷಿತ ಸಮುದಾಯದ ಮೇಲೆ ನಡೆದ ದೌರ್ಜನ್ಯ, ಅದನ್ನು ಖಂಡಿಸಿ ಅವರು ನಡೆಸಿದ ಹೋರಾಟ, ಹೀಗೆ ಹಲವಾರು ವಾಸ್ತವ ವಿಚಾರಗಳನ್ನು ತೆರೆದಿಡುವ ಪುಸ್ತಕ ಇದಾಗಿದೆ.
ಮರಕುಂಬಿ ಗ್ರಾಮವು ನೀರಾವರಿಗೆ ಒಳಪಟ್ಟ ಪ್ರದೇಶ. ಅಲ್ಲಿನ ಭೂಮಾಲಿಕ ಜಮೀನ್ದಾರರ ವಿರುದ್ಧ ಸೆಟೆದು ನಿಲ್ಲಲು ಸಾಧ್ಯವಿಲ್ಲದ ಪ್ರದೇಶದಲ್ಲಿ ಮಾದಿಗ ಸಮುದಾಯದವರು ತಮ್ಮ ಹಕ್ಕುಗಳಿಗಾಗಿ ಹೇಗೆ ಹೋರಾಡಿದರು ಎಂಬ ವಿವರಗಳಿವೆ.
ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕಟ್ಟುವ ಮೂಲಕ ತಮ್ಮ ಮೇಲೆ ನಡೆದ ಜಾತಿ ತಾರತಮ್ಯ ವಿರುದ್ಧ ಮೆಟ್ಟಿ ನಿಂತು ಶೋಷಣೆಗೆ ಮುಕ್ತಿ ದೊರೆಯಲು ಸಂಘವೇ ನಮಗೆ ಆಧಾರಸ್ತಂಭ ಎಂಬ ನಂಬಿಕೆಯ ಮೇಲೆ ಹೋರಾಟ ನಡೆಸಿದರೆ ಗೆಲುವು ದಕ್ಕಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಭೂಮಿ, ವಸತಿ, ನೀರು, ಶೌಚಾಲಯ, ರಸ್ತೆ ಇತ್ಯಾದಿ ಮೂಲಭೂತ ಹಕ್ಕುಗಳಿಗಾಗಿ ಮರಕುಂಬಿಯ ಮಾದಿಗ ಸಮುದಾಯದವರು ನಡೆಸಿದ ಹೋರಾಟಗಳನ್ನು ಪುಸ್ತಕ ರೂಪದಲ್ಲಿ ತಂದ ಗುರುರಾಜ ದೇಸಾಯಿ ಅವರಿಗೆ ಅಭಿನಂದನೆಗಳು.
ಚಂದ್ರಪ್ಪ ಹೊಸ್ತೇರಾ
ರಾಜ್ಯ ಪ್ರಧಾನ ಕಾರ್ಯದರ್ಶಿ, ಕೃಷಿ ಕೂಲಿಕಾರರ ಸಂಘ
Share

Subscribe to our emails
Subscribe to our mailing list for insider news, product launches, and more.