Vinayaka Aralasurali
ಮರ ಹತ್ತದ ಮೀನು
ಮರ ಹತ್ತದ ಮೀನು
Publisher - ಸಾಹಿತ್ಯ ಲೋಕ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 136
Type - Paperback
Couldn't load pickup availability
ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗ ಬೇಕಾಗುತ್ತದೆ. ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ. ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ ಅರಳಸುರಳಿ ಅವರು ಅನುಭವಿಸಿದ್ದಾರೆ. ಅದರ ಪರಿಣಾಮ ಈ ಸಂಕಲನದ ಕಥೆಗಳಲ್ಲಿ ಢಾಳಾಗಿ ಕಾಣಿಸುತ್ತದೆ. ಒಂದೊಂದು ಕಥೆಯನ್ನು ಓದಿ ಮುಗಿಸಿದಾಗಲೂ, ಇಂಥದೇ ಪ್ರಸಂಗ ಅಲ್ಲೆಲ್ಲೋ ನಡೆದಿತ್ತಲ್ಲವಾ ಎಂದು ಯೋಚಿಸುವಂತಾಗುತ್ತದೆ. ಹತ್ತು ಕಥೆಗಳ ಈ ಸಂಕಲನದಲ್ಲಿ ಮನುಷ್ಯನ ಅಹಮಿಕೆ, ಅನುಮಾನ, ದರ್ಪ, ಅಸಹಾಯಕತೆ, ತಣ್ಣಗಿನ ಕ್ರೌರ್ಯ, ತಲೆಮಾರು ಕಳೆದರೂ ತಣಿಯದ ದ್ವೇಷ, ಮತ್ತೊಬ್ಬರ ಏಳಿಗೆಯನ್ನು ಕಂಡಾಗ ಇದ್ದಕ್ಕಿದ್ದಂತೆ ಉಂಟಾಗುವ ಅಸಹನೆ, ಪದೇ ಪದೇ ಸುಳ್ಳಾಗಿ ಹೋಗುವ ನಿರೀಕ್ಷೆಗಳು, ಯಾರಿಗೂ ಕಾಯದೆ ಹೋಗಿ ಬಿಡುವ ಪ್ರಾಣ.. ಹೀಗೆ ಮುನುಷ್ಯನ ಮಿತಿಗಳಿಗೆ ಪುರಾವೆ ಒದಗಿಸುವ ಪ್ರಸಂಗಗಳು ಎಲ್ಲಾ ಕಥೆಗಳಲ್ಲೂ ಬರುತ್ತವೆ. ಪ್ರತಿಯೊಂದು ಕಥೆಯೂ ತನ್ನದೇ ರೀತಿಯಲ್ಲಿ ಮುಗಿದು ಲೈಫು ಇಷ್ಟೇನೇ! ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ.
-ಮಣಿಕಾಂತ್ ಎ. ಆರ್.
Share

Subscribe to our emails
Subscribe to our mailing list for insider news, product launches, and more.