Skip to product information
1 of 1

Vasudhendra

ಮನೀಷೆ

ಮನೀಷೆ

Publisher - ಛಂದ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಸರಿಯಾಗಿ ಅದೇ ಸಮಯಕ್ಕೆ ಹಿತ್ತಲಿನಲ್ಲಿ ಸದ್ದಾಯ್ತು, ಯಾರೋ ಹಿತ್ತಲಿನ ಬೇಲಿಯ ಬಾಗಿಲನ್ನು ತೆರೆಯುತ್ತಿರುವಂತೆ ಭಾಸವಾಯ್ತು, ಕಮಲಕ್ಕ ಹಿತ್ತಲಿಗೆ ಹೋದಳು. ವಾಜಿಯೂ ಹಿಂಬಾಲಿಸಿದ. ಅಲ್ಲಿ ಬೆಳಿಗ್ಗೆ ವಾಜಿಯಿಂದ ಕಲ್ಲಿನೇಟು ತಿಂದ ಹಂದಿ ಗೇಟನ್ನು ನೂಕುತ್ತಿತ್ತು. ಕಮಲಕ್ಕಗೆ ಅದೇನನ್ನಿಸಿತೋ ಏನೋ, ಸೀದಾ ಹೋಗಿ ಗೇಟನ್ನು ತೆರೆದುಬಿಟ್ಟಳು. ಹಂದಿ ಒಳನುಗ್ಗಿ ಮಲ್ಲಿಗೆಯ ಹಂದರದ ಕೆಳಗೆ ಸ್ವಲ್ಪ ಮಣ್ಣು ಕೆದರಿ ಕುಳಿತುಕೊಂಡುಬಿಟ್ಟಿತು. ಕಮಲಕ್ಕ ಆ ಹಂದಿಯನ್ನು ನೋಡಿ, 'ರಾಯರೇ, ಹಂದಿ ಹಡವಣಿಗಿ ಸುಸೂತ್ರ 'ಆಗ್ಲಪ್ಪ ಅಂತ ಮನಸ್ಸಿನಲ್ಲೇ ಪ್ರಾರ್ಥಿಸಿ, ವಾಜಿಯ ಕೈ ಹಿಡಿದುಕೊಂಡು ಬಸ್‌ ನಿಲ್ದಾಣದ ಕಡೆ ಹೊರಟುಬಿಟ್ಟಳು. ಆದರೆ ಹಸಿವು ಮತ್ತು ಅವಮಾನಗಳಿಂದ ಕಂಗಾಲಾದ ವಾಜಿ ಈಗ ಬಸ್ಸಿನಲ್ಲಿ ಸೀಟನ್ನು ಹಿಡಿಯುತ್ತಾನೆಂಬುದು ಸಂಶಯದ ವಿಷಯ.
View full details