Shylaja suresh
ಮನೆಯೇ ಮಂತ್ರಾಲಯ
ಮನೆಯೇ ಮಂತ್ರಾಲಯ
Publisher -
- Free Shipping Above ₹250
- Cash on Delivery (COD) Available
Pages - 177
Type -
ಲೇಖಿಕಾ ಸಾಹಿತ್ಯ ವೇದಿಕೆ 2000 ದಲ್ಲಿ ಅವಕಾಶ ವಂಚಿತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಥಾಪಿತವಾಯಿತು. ಯಾವುದೇ ಸರಕಾರಿ ಅನುದಾನ ಇಲ್ಲದೆ, ಇಲ್ಲಿನ ಸಮಾನ ಮನಸ್ಥ ಲೇಖಕಿಯರು ತಮ್ಮದೇ ಹಣದಿಂದ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ ಸಾವಿರಾರು ಪ್ರತಿಭಾವಂತ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಹಲವಾರು ಸಾಹಿತ್ಯ ಸ್ಪರ್ಧೆಗಳನ್ನು ಆಯೋಜಿಸುತ್ತಾ ಉತ್ತಮ ಬರಹಗಾರರನ್ನು ಗುರುತಿಸಿ ಬಹುಮಾನ ನೀಡುತ್ತಾ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ಬಹುಮಾನಿತ ಹಾಗೂ ಉತ್ತಮ ಕಥೆಗಳನ್ನು ಒಗ್ಗೂಡಿಸಿ ಹತ್ತಾರು ಕಥಾಸಂಕಲನಗಳನ್ನು ಹೊರ ತಂದಿದ್ದಾರೆ. ಈ ಸಂಘಟನೆಯ ರೂವಾರಿಯಾಗಿರುವ ಶೈಲಜಾ ಸುರೇಶ್ ಅವರು ತಾವೂ ಬರೆಯುತ್ತಾ ಇತರರಿಗೂ ಬರೆಯಲು ಪ್ರೋತ್ಸಾಹಿಸುತ್ತಿರುವ ಅಪರೂಪದ ಲೇಖಕಿ, ಬರವಣಿಗೆಯ ಸಾಧನೆಯ ಹಾದಿಯಲ್ಲಿ ಕಥೆ, ಕಾದಂಬರಿ, ರೂಪಕ, ಅಂಕಣ, ದೂರದರ್ಶನ, ಆಕಾಶವಾಣಿ ಹೀಗೇ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಛಾಪು ಮೂಡಿಸಿರುವ ಶೈಲಜಾ ಸುರೇಶ್‌ರವರು ಇದೀಗ ಪತ್ರಿಕಾರಂಗಕ್ಕೂ ಕಾಲಿಟ್ಟಿದ್ದಾರೆ. "ಸಾಹಿತ್ಯ ಸಚಿ" ಎನ್ನುವ ಮಹಿಳಾ ಸಾಹಿತ್ಯ ಪ್ರಧಾನ ತ್ರೈಮಾಸಿಕ ಪತ್ರಿಕೆಯ ಸಂಪಾದಕಿಯಾಗಿ ತಮ್ಮದೇ ಮಹಿಳಾ ತಂಡದ ಮೂಲಕ ಮಹಿಳಾ ಸಾಹಿತ್ಯದ ಹಾದಿಯ ಮೈಲುಗಲ್ಲುಗಳನ್ನು ಗುರುತಿಸುವ ಮತ್ತು ಸಮಾಜಕ್ಕೆ ತಲುಪಿಸುವ ಅತ್ಯಂತ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದೀಗ "ವಾಣಿ ಕೌಟುಂಬಿಕ ಕಥಾಸ್ಪರ್ಧೆ 2024" ರ ಸಾಲಿನ ಬಹುಮಾನಿತ ಮತ್ತು ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಂಡು “ಮನೆಯೇ ಮಂತ್ರಾಲಯ" ಶೀರ್ಷಿಕೆಯಲ್ಲಿ ಹರಿವು ಬುಕ್ಸ್ ಮೂಲಕ ಕೌಟುಂಬಿಕ ಕಥೆಗಳ ಕಥಾಸಂಕಲನವನ್ನು ಹೊರತರುತ್ತಿದ್ದಾರೆ. ಕೌಟುಂಬಿಕ ಮೌಲ್ಯ ಹಾಗೂ ಸಾಮಾಜಿಕ ಮೌಲ್ಯವನ್ನು ಒಳಗೊಂಡಿರುವ ಉತ್ತಮ ಕಥೆಗಳು ಇಲ್ಲಿವೆ. ಸಾಮಾಜಿಕ ನೈತಿಕ ಪ್ರಜ್ಞೆಯನ್ನು ಜಾಗೃತಗೊಳಿಸುವ ಈ ಕಥಾಸಂಕಲನ ಹರಿವು ಬುಕ್ಸ್‌ನ ಹೆಮ್ಮೆಯ ಕೊಡುಗೆ.
Share
Subscribe to our emails
Subscribe to our mailing list for insider news, product launches, and more.