Dr. Aruna Yadiyal
ಮನವೆಂಬ ಮಾಯಾಮೃಗ
ಮನವೆಂಬ ಮಾಯಾಮೃಗ
Publisher - ಹರಿವು ಬುಕ್ಸ್
- Free Shipping Above ₹400
- Cash on Delivery (COD) Available*
Pages - 181
Type - Paperback
Couldn't load pickup availability
ಮನಸ್ಸು ಎಂಬುದೊಂದು ದಟ್ಟ ಕಾನನ. ಅಲ್ಲಿ ವೈವಿಧ್ಯವಾದ ಭಾವ ಜೀವಿಗಳ ವಾಸ. ಕೆಲವೊಮ್ಮೆ ಅದ್ಯಾವುದೋ ವಿಶಿಷ್ಟ ಭಾವನೆ ಮಾಯಾಜಿಂಕೆಯಂತೆ ಮಿಂಚಿ ಮಾಯವಾಗುತ್ತೆ. ಈ ಭಾವನೆಗಳೇ ಅತಿರೇಕವಾಗಿ, ವಿಚಿತ್ರ ರೂಪ ತಾಳಿ, ಮನಸ್ಸೇ ಮಾಯಾಮೃಗವಾಗಿ, ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ವಾಸ್ತವಿಕ ಹಾಗು ನೈತಿಕ ನೆಲೆಗಳ ಎಲ್ಲೆ ಮೀರಿ ಹೋಗುವಂತೆ ಮಾಡಿಬಿಡುತ್ತದೆ. ಮನೋವ್ಯಾಕುಲತೆಗಳು ಮನವನ್ನು ಕಾಡಿದಾಗ, ಹೀಗಾಗುವುದು ನಿರೀಕ್ಷಿತವೇ! ಈ ಹಿನ್ನಲೆಯಲ್ಲಿ, ಎಲ್ಲರ ಅಚ್ಚು ಮೆಚ್ಚಿನ ಮನೋತಜ್ಞೆಯಾದ, ಡಾ ಮಯೂರಿ, ತನ್ನದೇ ಆಪ್ತವಲಯದಲ್ಲಿದ್ದ ವ್ಯಕ್ತಿಗಳಿಗೆ ಈ ಮನೋರೋಗ ಕಾಡಿದಾಗ, ಅದನ್ನು ಹೇಗೆ ನಿರ್ವಹಿಸುತ್ತಾಳೆ? ಮನೋರೋಗದ ಹಿಡಿತದಿಂದ ಬಳಲಿರುವ ಮನಸ್ಸುಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ? ಮನೋರೋಗಗಳನ್ನು, ಮನೋರೋಗಿಗಳನ್ನು, ಮನುಷ್ಯ ಸ್ವಭಾವವನ್ನು, ಮನೋವೈದ್ಯಕೀಯ ಕನ್ನಡಿಯಲ್ಲಿ ತೋರಿಸುವ ಆಶಯದೊಂದಿಗೆ ಬರೆದ ಈ ಎರಡು ಕಿರು ಕಾದಂಬರಿಗಳು (ಮನವೆಂಬ ಮಾಯಾಮೃಗ ಹಾಗು ಮನೋವ್ಯೂಹ) ಈ ಪ್ರಶ್ನೆಗಳಿಗೆ ಕಥಾರೂಪದಲ್ಲಿ ಉತ್ತರ ನೀಡುತ್ತದೆ. ಓದಿ ನೋಡಿ. ನಮ್ಮ ನಿಮ್ಮೊಳಗೇ ಇದ್ದು, ಮಾಯೆಯಂತೆ ಕಾಡುವ, ಕೆಲವೊಮ್ಮೆ ಮೃಗದಂತೆ ವರ್ತಿಸುವ, ಈ ಮನವನ್ನು ಒಂದಿಷ್ಟು ನಿರುಕಿಸಿ ಅರುಹಿ.
-ಡಾ ಅರುಣಾ ಯಡಿಯಾಳ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.