A. R. Manikanth
ಮನಸು ಮಾತಾಡಿತು
ಮನಸು ಮಾತಾಡಿತು
Publisher - ವಸಂತ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 176
Type - Paperback
ಈ ಪುಸ್ತಕದಲ್ಲಿರುವ ಎಲ್ಲಾ ಲೇಖನಗಳನ್ನು ಸಾಕ್ಷ್ಯಚಿತ್ರಗಳನ್ನಾಗಿಸಬಹುದು. ಅಷ್ಟೇಕೆ, ಸರ್ಕಾರ ಮನಸ್ಸು ಮಾಡಿದರೆ ಕಾಲೇಜುಗಳಿಗೆ ಇದನ್ನು ಪಠ್ಯಪುಸ್ತಕವನ್ನಾಗಿಸಬಹುದು. ಐಕಾನ್ ಗಳಿಲ್ಲದೇ ದಾರಿತಪ್ಪಿರುವ ಇಂದಿನ ಪೀಳಿಗೆಗೆ ಈ ಪುಸ್ತಕದಲ್ಲಿರುವ ಪಾತ್ರಗಳು ಮಾದರಿಯಾಗಬಹುದು. ಯುವಜನಾಂಗದಲ್ಲಿ ಜೀವನೋತ್ಸಾಹ ಬೆಳೆಸುವ, ಸ್ಫೂರ್ತಿಯನ್ನು ತುಂಬುವ ಕೆಲಸವನ್ನು ಈ ಪುಸ್ತಕ ಮಾಡಬಹುದು.
ಈ ಪುಸ್ತಕದ ಬರಹಗಳೆಲ್ಲವೂ ವ್ಯಕ್ತಿಕೇಂದ್ರಿತವಾದದ್ದು. ತಿರುಕನ ಕನಸೊಂದು ನಿಜವಾಗುವ ವಿಸ್ಮಯದಂತೆ ಕಾಣಿಸುವಂಥದ್ದು. ಮಣಿಕಾಂತ್ ತಮ್ಮ ಲೇಖನಕ್ಕಾಗಿ ಆಯ್ದುಕೊಳ್ಳುವ ವ್ಯಕ್ತಿಗಳು ಯಾರೂ ಪ್ರಸಿದ್ಧರಲ್ಲ, ಅವರೆಲ್ಲರೂ ಸಮಾಜದ ಕೆಳಸ್ತರದಿಂದ ಬಂದವರು, ಶೋಷಿತರು, ಅತ್ಯಾಚಾರಕ್ಕೊಳಗಾದವರು, ಕಡುಬಡವರು, ಅಂಗವಿಕಲರು, ಮಾನಸಿಕ ಅಸ್ವಸ್ಥರು. ಹಾಗಂತ ಅವರ್ಯಾರೂ ತಮ್ಮ ಗತಿಸ್ಥಿತಿಗೆ ಕೊರಗುವ ಜಾಯಮಾನದವರಲ್ಲ, ತಮ್ಮ ಪಾಲಿಗೆ ದಕ್ಕಿದ್ದಿಷ್ಟೇ ಎಂದು ಸುಮ್ಮನೇ ಕೂರುವ ಅಲ್ಪತೃಪ್ತರೂ ಅಲ್ಲ. ಅವರು ನಮಗಿಂತ ದೊಡ್ಡ ಕನಸು ಕಾಣುತ್ತಾರೆ, ತಮ್ಮ ಮಿತಿಯನ್ನು ಮೀರಿ ನಿಲ್ಲುತ್ತಾರೆ. ಅಸಾಧ್ಯ ಅನ್ನುವುದನ್ನು ಸಾಧಿಸಿ ತೋರಿಸುತ್ತಾರೆ, ನಾರ್ಮಲ್ ಆಗಿರುವ ನಮ್ಮ ನಿಮ್ಮಂಥವರಿಗೆ ಮಾದರಿಯಾಗುತ್ತಾರೆ. ತಮ್ಮ ಸೋಲಿಗೆ ಇನ್ನೆಲ್ಲೋ ಕಾರಣಗಳನ್ನು ಹುಡುಕಿ ಸಂತೃಪ್ತರಾಗುವ ಸೋಂಬೇರಿಗಳು ನಾಚುವಂತೆ ಮಾಡುತ್ತಾರೆ.
ಹಳೆಯ ರಾಜ್‌ಕುಮಾರ್ ಚಿತ್ರಗಳಲ್ಲಷ್ಟೇ ಕಾಣಿಸುವ ಅತಿಯಾದ ಆದರ್ಶ ಮತ್ತು ಭಾವುಕತೆಯನ್ನೇ ನೆಚ್ಚಿಕೊಂಡು ಮಣಿಕಾಂತ್ ಬರೆಯುತ್ತಿದ್ದಾರೆ ಎಂದು ಕೆಲವೊಮ್ಮೆ ನಿಮಗೆ ಅನಿಸಬಹುದು. ಆದರೆ, ಬದಲಾದ ಕಾಲಘಟ್ಟದಲ್ಲಿ ಇಂಥಾ ಬರವಣಿಗೆಯ ಅಗತ್ಯ ನಮಗಿದೆ. ನಮ್ಮನ್ನು ಕಾಡುತ್ತಿರುವ ಸಿನಿಕತನದಿಂದ ಪಾರಾಗುವುದಕ್ಕಾದರೂ ಇಂಥಾ ಲೇಖನಗಳನ್ನು ಓದಬೇಕಾಗಿದೆ. ಪಿಯುಸಿಯಲ್ಲಿ ಅಂದುಕೊಂಡಷ್ಟು ಅಂಕಗಳು ಸಿಗಲಿಲ್ಲ ಎಂಬ ಕಾರಣಕ್ಕೆ ನೇಣುಹಾಕಿಕೊಂಡು ಸಾಯುವ ಹುಡುಗಿಯ ಕೈಗೆ ಇಂಥದ್ದೊಂದು ಪುಸ್ತಕ ಸಿಕ್ಕಿದ್ದರೆ, ಆಕೆ ಮನಸ್ಸು ಬದಲಾಯಿಸುತ್ತಿದ್ದಳೇನೋ ಅನ್ನುವ ಆಶಾವಾದ ನನ್ನದು. ಯಾಕೆಂದರೆ, ಇಲ್ಲಿರುವ ಎಲ್ಲಾ ಪಾತ್ರಗಳೂ ನಾವು ಜೀವನದಲ್ಲಿ ಅತ್ಯಂತ ಬೇಸತ್ತ ಕ್ಷಣಗಳಲ್ಲಿ ನೆನಪಾಗಬೇಕಾದ ಪಾತ್ರಗಳೇ.
- ಉದಯ ಮರಕಿಣಿ (ಹಿರಿಯ ಪತ್ರಕರ್ತರು)
Share
Subscribe to our emails
Subscribe to our mailing list for insider news, product launches, and more.