Skip to product information
1 of 2

M. L. Prasanna

ಮಲ್ಲಿ ಮಲ್ಲಿಗಿ...

ಮಲ್ಲಿ ಮಲ್ಲಿಗಿ...

Publisher - ವೀರಲೋಕ ಬುಕ್ಸ್

Regular price Rs. 210.00
Regular price Rs. 210.00 Sale price Rs. 210.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 176

Type - Paperback

Gift Wrap
Gift Wrap Rs. 15.00
ಆ ತಂಪಿರುಳಿನಲ್ಲಿ.. ಸುರಿವ ಬೆಳದಿಂಗಳ ಮಳೆಯಲ್ಲಿ... ಬಿಜಾಪುರದ ಬಾರಾಕಮಾನಿನ ಅಂಗಳದಲ್ಲಿ... ದನಿಯೆತ್ತಿ ಹಾಡಿಕೊಳ್ಳುತ್ತಾ ಮೈಮರೆತು ಇರುಳೆಲ್ಲ ಕಳೆಯಲು ಅವನು ಬಯಸಿದ್ದ. ಆದರೆ ಅವನಾಸೆಗೆ ಅಡ್ಡಿಯಾಗಿ ಬಂದಳು ಅವಳು...!

ಆ ಲೋಕನಿಂದಿತೆಯ ಎದೆಯಲ್ಲಿ ಅದೆಷ್ಟು ಪ್ರೀತಿ ಕನಸುಗಳ ಸಂಚಯವಿತ್ತು...! ಅದೆಷ್ಟು ನೋವುಗಳ ನಡುವೆ ಪುಟಿದೇಳುವ ಬದುಕಿನುತ್ಸಾಹವಿತ್ತು... ಆತ ಅವಳೆದುರು ಮನಸು ತೆರೆದುಕೊಂಡ... ಆಕೆ ಅವನೆದುರು ಹೊಸದೊಂದು ಲೋಕ ತೆರೆದಿಟ್ಟಳು...!

ಕಥೆಗಳಿಗೆ ಕಿವಿಯಾಗುವ ಅವನ ಹೃದಯಕ್ಕೆ... ಆಕೆ ದನಿಯಾದಳು..! ಇಬ್ಬರೂ ಕೂಡಿ... ನಕ್ಕರು ಅತ್ತರು... ಮತ್ತೆ ಮತ್ತೆ ನಕ್ಕರು. ಆ ರಾತ್ರಿ ಎಂದೂ ಮರೆಯಲಾಗದ ಅನುಭವಕ್ಕೆ ರಹದಾರಿಯಾಗಬೇಕೆಂದು ಬಯಸಿದರು... ಕೊನೆಗೊಮ್ಮಋಣಸಂದಾಯವಾಗಬೇಕಾದ ಕಾಲವೂ ಬಂದಿತ್ತು...!

ಆಗೊಂದು ನಿರ್ಧಾರ...

ಮತ್ತೊಂದು ಹೊಸಲೋಕವನ್ನೇ ಅಲ್ಲಿ ಅನಾವರಣಗೊಳಿಸಿತ್ತು..! ಅಲ್ಲಿಯವರೆಗೂ ಆತ ಕಂಡು ಕೇಳಿಲ್ಲದ.... ಕೋಟಿಗೊಬ್ಬರಿಗೂ ಸಿಗದ... ಅತ್ಯಂತ ಅಪರೂಪದ... ಒಂದು ಹೃದಯಂಗಮವಾದ... ಅನುಭವಕ್ಕೆ ಆತ ಸಾಕ್ಷಿಯಾಗಲಿದ್ದ... ಆದರೆ ಅದಕ್ಕಾಗಿ... ಅದಕ್ಕಾಗಿ ಆತ ತೆರಬೇಕಾದ ಬೆಲೆಯ ಬೆಲೆ ಅವನಿಗೆ ತಿಳಿದಿರಲಿಲ್ಲ !

ಮಲ್ಲಿ ಮಲ್ಲಿಗಿ...

ಹೃದಯಂಗಮವಾದ, ಅತ್ಯಂತ ಭಾವುಕವಾದ, ಅದ್ಭುತ ವ್ಯಕ್ತಿತ್ವಗಳ ರಸಪಾಕದಲಿ ಸೃಷ್ಟಿಯಾದ... ಮತ್ತೆ ಮತ್ತೆ ಹನಿವ ಮಳೆಯಾಗಿ ಕಾಡುವ... ಮನಮೋಹಕ ಕಥೆ !

ಭಾವನೆಗಳ ಮಳೆಯಲ್ಲಿ ಮಿಂದೇಳುವ, ನೋಯುವ, ನಗುವ, ಕಣ್ಣೀರಾಗುವ ಸುಖ... ನಿಮ್ಮದಾಗಲಿ !

-ಎಂ ಎಲ್ ಪ್ರಸನ್ನ
View full details