Skip to product information
1 of 1

Mallepuram G. Venkatesha

ಶಂಕರ ಬಾಳದೀಕ್ಷಿತ ಜೋಶಿ

ಶಂಕರ ಬಾಳದೀಕ್ಷಿತ ಜೋಶಿ

Publisher -

Regular price Rs. 75.00
Regular price Sale price Rs. 75.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

`ಕರ್ಣಾಟ ಸಂಸ್ಕೃತಿಯ ಪೂರ್ವ ಪೀಠಿಕೆ' ಎಂಬ ತಮ್ಮ ಸಂಶೋಧನ ಗ್ರಂಥಕ್ಕಾಗಿ ೧೯೭೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದ ಶಂಕರ ಬಾಳದೀಕ್ಷಿತ ಜೋಶಿ (೧೮೯೬-೧೯೯೧) ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕನ್ನಡ ಮತ್ತು ಮರಾಠಿ ಭಾಷೆಗಳ ವಿಷಯದಲ್ಲಿ ಆಳವಾದ ಪಾಂಡಿತ್ಯವನ್ನು ಗಳಿಸಿದ್ದು, 'ಕಣ್ಮರೆಯಾದ ಕನ್ನಡ', 'ಕನ್ನಡದ ನೆಲೆ' ಮುಂತಾದ ಕನ್ನಡ ಗ್ರಂಥಗಳಿಂದಲೂ, 'ಮಹಾರಾಷ್ಟ್ರದ ಮೂಲ', 'ಮರಾಟ ಸಂಸ್ಕೃತಿ: ಕೆಲವು ಸಮಸ್ಯೆಗಳು' ಮುಂತಾದ ಮರಾಠಿ ಗ್ರಂಥಗಳಿಂದಲೂ ಸಂಶೋಧನ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು. ಅವರ ತೀರ್ಮಾನಗಳು ಎಲ್ಲರಿಗೂ ಒಪ್ಪಿಗೆಯಾಗದೆ ಹೋಗಬಹುದಾದರೂ, ಸಂಶೋಧನೆಯ ಬಗೆಗಿನ ಮೂಲ ಕಾಳಜಿ ಹಾಗೂ ಕಲೆ ಹಾಗಿರುವ ಮಾಹಿತಿಯ ಸತ್ಯತೆಯನ್ನು ಯಾರೂ ಸಂದೇಹಿಸುವಂತಿಲ್ಲ. ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಪ್ರಕಟವಾಗಿರುವ ಋಗ್ವದ ಸಾರ : ನಾಗಪ್ರತಿಮಾ ವಿಚಾರ' ಎಂಬ ಗ್ರಂಥವೂ ಮೌಲಿಕ ಚಿಂತನೆಗಳನ್ನು ಒಳಗೊಂಡಿದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರು ರಚಿಸಿದ್ದ ಲೇಖನಗಳನ್ನು ಮತ್ತು ಗ್ರಂಥಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಆರು ಸಂಪುಟಗಳಲ್ಲಿ ಪ್ರಕಟಿಸಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)