Girimane Shyamarao
ಮಲೆನಾಡಿನ ರೋಚಕ ಕತೆಗಳು ಭಾಗ-1
ಮಲೆನಾಡಿನ ರೋಚಕ ಕತೆಗಳು ಭಾಗ-1
Publisher - ಗಿರಿಮನೆ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
ಬಟ್ಟ ಬಯಲಿನಂತಲ್ಲ ಮಲೆನಾಡು. ಇಲ್ಲಿನ ಜಡಿಗುಟ್ಟಿ ಸುರಿವ ಮಳೆಯ ರುದ್ರ ನರ್ತನ, ಮೊಗೆವ ಹಸಿರಿನ ಮೇಲೆ ಹಾಸುವ ಮಂಜು, ಬೆಟ್ಟ-ಗುಡ್ಡಗಳ ಮೇಲಿನ ಎಳೆಬಿಸಿಲ ಚೇತೋಹಾರಿ ನೋಟ, ಹನ್ನೆರಡು ತಿಂಗಳ ವೈವಿಧ್ಯಮಯವಾದ ಪ್ರಕೃತಿ ಸೌಂದರ್ಯ ಇನ್ನೆಲ್ಲೂ ಸಿಗದು. ಭತ್ತ, ಏಲಕ್ಕಿ, ಕಾಫಿ, ಕಿತ್ತಳೆ, ಕಾಳುಮೆಣಸಿನ ಪರಿಮಳದ ಇಲ್ಲಿನ ಸಂಘರ್ಷದ ಬದುಕಿನ ಜೊತೆಗೆ ತುಳುಕು ಹಾಕಿಕೊಂಡ ಪ್ರಾಣಿ-ಪಕ್ಷಿಗಳ ಚಿತ್ರ ವಿಚಿತ್ರ ಘಟನೆಗಳು ಕೂಡ ಬೆರುಗ ಹುಟ್ಟಿಸುವಂಥದ್ದೇ. ಹಾವು-ಮುಂಗುಸಿ ವೈರ, ದೈತ್ಯ ಆನೆಯ ಶಕ್ತಿಪ್ರದರ್ಶನ, ಹೆಜ್ಜೇನುಗಳ ಮಾರಕ ದಾಳಿ, ಮೊಸಳೆ ಭಯ, ಕಳ್ಳಭಟ್ಟಿಯ ದುರಂತ, ಕೃಷಿಕನ ಕಷ್ಟ-ನಷ್ಟಗಳು, ಹಾದರದ ವ್ಯಥೆ, ಎಲ್ಲದರಲ್ಲಿಯೂ ಅವುಗಳದ್ದೇ ಆದ ರೋಚಕತೆ ಇದೆ. ಮಲೆನಾಡಿಗೆ ಸಾಟಿ ಮಲೆನಾಡು ಮಾತ್ರ! ಅನುಭವ ಇಲ್ಲದವರು ಅದನ್ನು ಓದಿಯೂ ಅನುಭವಿಸಬಹುದು.
Share
ಮಲೆನಾಡಿನ ರೋಚಕ ಕತೆಗಳು ಭಾಗ-1
ಮಲೆನಾಡಿನ ರೋಚಕ ಕತೆಗಳು ಭಾಗ-1
Excellent book
ಮಲೆನಾಡಿನ ರೋಚಕ ಕತೆಗಳು ಭಾಗ-1
ಪುಸ್ತಕ ತುಂಬಾ ಅದ್ಭುತವಾಗಿದೆ . ಹೆಸರಲ್ಲಿ ರೋಚಕ ಕತೆಗಳು ಅಂತ ನೋಡಿ ಇಮ್ಪ್ರೆಸ್ ಆಗಿ ಖರೀದಿಸಿದ ಪುಸ್ತಕ ಇದು .
ಮೊದಲನೆ ಕತೆ ಓದೊಕ್ ಶುರು ಮಾಡಿದಾಗ ಲೇಖಕರು ಏನೋ ಅವರ ಮನೆ ಮತ್ತು ಊರಿನ ಬಗ್ಗೆ ಮಾತಾಡ್ತಿದ್ದಾರೆ ಇದರಲ್ಲಿ ರೋಚತೆ ಇದ್ಯಾ ಅಂತ ಅನಿಸಿದ್ದೂ ನಿಜ....ಆದರೆ ಮುಂದೆ ಓದ್ತಾ ಓದ್ತಾ ನಮಗೇ ತಿಳಿಯದಂತೆ ನಾವು ಕತೆಯಲ್ಲಿ ಕಳೆದುಹೋಗುತ್ತೇವೆ , ಪುಸ್ತಕ ನಿಜಕ್ಕೂ ರೋಚಕವಾಗಿದೆ.
ಒಟ್ಟಾರೆ ಒಂದು ಅದ್ಭುತವಾದ ಓದು.
Subscribe to our emails
Subscribe to our mailing list for insider news, product launches, and more.