Chalam
Publisher - ಅಹರ್ನಿಶಿ ಪ್ರಕಾಶನ
- Free Shipping
- Cash on Delivery (COD) Available
Pages -
Type -
Couldn't load pickup availability
ಗುಡಿಪಾಟಿಯವರ 'ಮೈದಾನಂ' ಕಿರುಕಾದಂಬರಿಯನ್ನು ಪ್ರತಿಭಾವಂತ ಕವಿಗಳಲ್ಲಿ ಒಬ್ಬರಾದ ರಮೇಶ ಅರೋಲಿ ಆಪ್ತವೆನಿಸುವ ಭಾಷೆಯಲ್ಲಿ ಕನ್ನಡಿಸಿದ್ದಾರೆ. ಗಾಯಕರೊಬ್ಬರು ವಿವಿಧ ರಾಗಗಳಲ್ಲಿ ಸಂಗೀತವನ್ನು ನುಡಿಸುವಾಗ ಹೊಮ್ಮುವ ತನ್ಮಯತೆ ಮತ್ತು ಲಯಗಾರಿಕೆ ಈ ಕಾದಂಬರಿಗಿದೆ. ಇದು ಕನ್ನಡಕ್ಕೆ ತನ್ನ ವಸ್ತುವಿನ ದೃಷ್ಟಿಯಿಂದ ಹೊಸತು ಎನಿಸದಿರಬಹುದು, ಆದರೆ ಹುಟ್ಟಿದ ಕಾಲಘಟ್ಟದ ಹಿನ್ನೆಲೆಯಲ್ಲಿಟ್ಟು ನೋಡುವಾಗ, ಅದು ಎತ್ತುವ ಸವಾಲುಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಗಂಡು ಹೆಣ್ಣಿನ ಸಂಬಂಧಗಳನ್ನು ಇಷ್ಟೆಲ್ಲ ಪದರಗಳಲ್ಲಿ ನೋಡಬಹುದೇ ಎಂದು ಸೋಜಿಗ ಪಡುವಂತೆ ಚಲಂ ನಿರೂಪಿಸಿದ್ದಾರೆ. ಇಲ್ಲಿ ಗಾಢವಾದ ಅನುರಕ್ತಿಯನ್ನು ಮೀರಿದ ಮಮತೆ ಮತ್ತು ಊಹೆಗೂ ಮೀರಿದ ಕಕ್ಕುಲಾತಿಗಳು ಪ್ರಕಟವಾಗಿವೆ. ಮಹಿಳೆಯರ ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಸಮಾಜದಲ್ಲಿ ತಳವೂರಿರುವ ಮಡಿವಂತಿಕೆಯನ್ನು ಪ್ರಶ್ನಿಸುತ್ತಲೇ ಧಾರ್ಮಿಕ ಕಂದಾಚಾರವನ್ನು ಕೃತಿ ಬಯಲುಗೊಳಿಸುತ್ತದೆ. ರಾಜೇಶ್ವರಿ-ಅಮೀರ್-ಮೀರಾರ ತ್ರಿಕೋನ ಪ್ರೇಮವು ಪಡೆಯುವ ನಾಟಕೀಯ ಪಲ್ಲಟಗಳಿಂದ, ಕಥೆಯು ಓದುಗರನ್ನು ಹಿಡಿದಿಡಬಲ್ಲ ಮಾಂತ್ರಿಕತೆ ಸಾಧಿಸಿದೆ.
