ಡಾ. ಕೆ. ಶಿವರಾಮ ಕಾರಂತ
Publisher: ಸಪ್ನ ಬುಕ್ ಹೌಸ್
Couldn't load pickup availability
ನಮ್ಮ ಯೋಚನೆಗಳಿಗೂ ಮಾಡುವ ಕೆಲಸಗಳಿಗೂ ಹೊಂದಾಣಿಕೆ ಇದ್ದಾಗ ಮಾತ್ರ ಸಾರ್ಥಕತೆಯ ಭಾವ ನಮ್ಮನ್ನು ಕೈ ಹಿಡಿದೀತು. ಅಂದುಕೊಂಡ ಫಲಶ್ರುತಿ ದೊರಕೀತು. ಹೊರತು ನಮ್ಮ ಆಲೋಚನೆಗಳಿಗೂ ಕ್ರಿಯೆಗೂ ಕಾರ್ಯಕಾರಣ ಸೂತ್ರವಿರದೇ ಹೋದರೆ ಮಾಡುವ ಕೆಲಸವಿರಲಿ, ಬದುಕೇ ಗೋಜಲಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ನಮ್ಮ ಆಲೋಚನೆಗೂ, ಕ್ರಿಯೆಗೂ ಹೊಂದಾಣಿಕೆ ಹೇಗೆ ಬರುತ್ತದೆ? ಮೈಯ್ಯಿಗೂ ಮನಸ್ಸಿಗೂ ಇರುವ ಅವಿನಾಭಾವತೆಯಿಂದ! ಹೌದು ಫಲಶ್ರುತಿ ಮೆಚ್ಚುವಂಥದ್ದಾಗಿರಬೇಕಾದರೆ ಮೂಲಭೂತವಾಗಿ ನಮ್ಮ ಮೈ ಮತ್ತು ಮನಸ್ಸು ಹೊಂದಾವಣಿಕೆಯಾಗದೆ ಗತ್ಯಂತರವಿಲ್ಲ. ಇದನ್ನೇ ನಂಬುವ, ಸಾಧಿಸುವ ಹಂಬಲವುಳ್ಳ ಒಬ್ಬ ಮುಖ್ಯ ಪಾತ್ರಧಾರಿ ಅವಳು – ಮಂಜುಳ. ಆಕೆ ವೃತ್ತಿಯಲ್ಲಿ ವೇಶ್ಯೆ. ಆಕೆಯ ಕಥೆಯೇ ಈ "ಮೈ ಮನಗಳ ಸುಳಿಯಲ್ಲಿ". ಇದರ ಕರ್ತೃ ಡಾ. ಕೆ . ಶಿವರಾಮ ಕಾರಂತ.
ಕಾರಂತರು ಕೇವಲ ಕಥೆಯನ್ನೋ ಕಾದಂಬರಿಯನ್ನೋ ಕಥೆಗೆ ಎಷ್ಟು ಬೇಕೋ ಅಷ್ಟು ಹೇಳಿ ಸುಮ್ಮನಾಗುವರಲ್ಲ, ಜೊತೆಗೆ ಅದಕ್ಕೆ ತಕ್ಕುದಾದ ಪೂರಕ ಮಾಹಿತಿಯೂ ಕೊಡುತ್ತಾರೆ ಎನ್ನುವುದಕ್ಕೆ ಇಲ್ಲಿ ಅವರು ವೇಶ್ಯಾವಾಟಿಕೆ ಬಗ್ಗೆ ಸ್ಥೂಲವಾಗಿ ಅಲ್ಲದಿದ್ದರೂ ನಿರ್ದಿಷ್ಟ ಕಾರಣಗಳನ್ನು ಮುಂದಿಡುವುದೇ ಅದಕ್ಕೆ ಸಾಕ್ಷಿ.
