Skip to product information
1 of 1

Madhu Mangesha Karnika

ಮಹೀಮ ಖಾರಿ

ಮಹೀಮ ಖಾರಿ

Publisher -

Regular price Rs. 80.00
Regular price Sale price Rs. 80.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಮಾಹೀಮ ಖಾರಿ ಒಂದು ಕತ್ತಲೆಯ ಜಗತ್ತು ದೇಶದ ಬೇರೆ ಬೇರೆ ಭಾಗಗಳಿಂದ ಬದುಕು, ಅರಸುತ್ತ ಬಂದ ಸಾಮಾನ್ಯ ಜನರು ನೆಲಸಿರುವ ಸಾವಿರಾರು ಜೋಪಡ ಪಟ್ಟಿಗಳು ತುಂಬಿ ತುಳುಕುವ ಒಂದು ಗಭೀರ ಜಗತ್ತು ಅವರವರ ಪಾಡು, ಬಾಳು ಅವರವರಿಗೆ ಇದೆಂಥ ನಿಕೃಷ್ಟ ಬದುಕು ಎಂದು ಬೇಸರದಿಂದ ಅವರು ಉಸಿರಾಡಲು ಮರೆತವರಲ್ಲ, ಕತ್ತಲೆಯಲ್ಲಿ ತಡಕಾಡುತ್ತಲೆ, ಎಡವಿ ಮುಗ್ಗರಿಸುತ್ತ ಬದುಕುವ ಬೆಳಕಿನತ್ತ ಕತ್ತು ತಿರುಗಿಸುವ ಜನ ಅವರು.

ಮಾಹೀಮ ಖಾರಿಯಲ್ಲಿ ಬದುಕುತ್ತಿರುವ ಮಂದಿ ಕೆಲವು ಸಂದರ್ಭಗಳಲ್ಲಿ ಪಾಪ-ಪುಣ್ಯ, ನೈತಿಕತೆ - ಅನೈತಿಕತೆ ಎಂದೆಲ್ಲ ವಿವೇಚಿಸುವ ಶಕ್ತಿ ಕಳೆದುಕೊಂಡವರೂ ಆಗಿರುತ್ತಾರೆ. ಅಲ್ಲಿ ನಡೆಯುವ ಘಟನೆಗಳು ಕೆಲವೊಮ್ಮೆ ತಮಾಷೆಯಾಗಿರುತ್ತವೆ. ಕುತೂಹಲಕಾರಿಯಾಗಿರುತ್ತವೆ, ಅಮಾನುಷವೆನ್ನಿಸುತ್ತವೆ. ಅವುಗಳ ಭೀಕರತೆಯಿಂದ ಮೈಮೇಲೆ ಮುಳ್ಳುಗಳೇಳುವಂತೆ ಮಾಡುತ್ತವೆ. ಅವರ ಈ ಬದುಕಿಗೆ ಕಾರಣಗಳು ಓದುಗರಿಗೆ ಮನವರಿಕೆಯಾಗುತ್ತವೆ.

ಮಧು ಮಂಗೇಶ ಕರ್ಣಿಕ ಅವರು ಮರಾಠಿಯಲ್ಲಿ ಬರೆದಿರುವ 'ಮಾಹೀಂಚಿ ಖಾಡಿ' ಕೃತಿಯ ಕನ್ನಡಾನುವಾದ ಇದು. ಮಹಾರಾಷ್ಟ್ರ ಉತ್ಕೃಷ್ಟ ಸಾಹಿತ್ಯ ಪುರಸ್ಕಾರ (ಹರಿಭಾವು ಆಷ್ಟೆ ಪ್ರಶಸ್ತಿ) ಪಡೆದ ಕೃತಿ. ಇದನ್ನು ಪ್ರೊ| ಚಂದ್ರಕಾಂತ ಪೋಕಳೆ ಅವರು ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)