Dr. Geetha Krishnamurthy
ಮಹಿಳೆ ಸಮಾಜ ಕಾನೂನು
ಮಹಿಳೆ ಸಮಾಜ ಕಾನೂನು
Publisher -
- Free Shipping Above ₹250
- Cash on Delivery (COD) Available
Pages -
Type -
ಮಹಿಳೆಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕೌರ್ಯ, ಹೆಣ್ಣುಭ್ರೂಣಹತ್ಯೆ, ಉದ್ಯೋಗ ಸ್ಥಳದಲ್ಲಿ ಕಿರುಕುಳ – ಇವನ್ನು ಮಹಿಳೆಯರು ಈವರೆಗೆ ಅಸಹಾಯಕತೆಯಿಂದ ಸಹಿಸುತ್ತ ಬಂದಿದ್ದ ದಿನಗಳು ಹಿಂದೆ ಸರಿಯುತ್ತಿವೆ. ಪುರುಷರಿಗೆ ಸರಿಸಮವಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಈಗ ಸಾಕಷ್ಟು ಜಾಗೃತಳಾಗಿದ್ದಾಳೆ. ತನ್ನ ಹಕ್ಕುಗಳಿಗಾಗಿ ದನಿಯೇರಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಬಗ್ಗೆ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ತಿಳಿವಳಿಕೆ ಮೂಡಬೇಕು ಎಂಬುದು ಈ ಕೃತಿಯ ಆಶಯ.
ಇದನ್ನು ರಚಿಸಿರುವ ಗೀತಾ ಕೃಷ್ಣಮೂರ್ತಿ ಪತ್ರಿಕೆಗಳಲ್ಲಿ ಮಹಿಳಾ ವಿಷಯಕ ಲೇಖನಗಳನ್ನು ಬರೆಯುವ ಮೂಲಕ ಖ್ಯಾತರಾಗಿದ್ದಾರೆ. 'ಮಹಿಳೆ, ಕಾನೂನು ಮತ್ತು ನ್ಯಾಯ' - ಈ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಇವರು, ಕರ್ನಾಟಕ ಸರ್ಕಾರದ ಭಾಷಾಂತರ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. 'ಮಹಿಳೆ, ಕಾನೂನು ಮತ್ತು ರಾಜಕಾರಣ' ಹಾಗೂ 'ಮಹಿಳಾ ಹಕ್ಕುಗಳು - ಮಾನವ ಹಕ್ಕುಗಳ ನೆಲೆಯಲ್ಲಿ' - ಎಂಬ ಇವರ ಕೃತಿಗಳನ್ನು ಕನ್ನಡ ವಿಶ್ವವಿದ್ಯಾಲಯವು ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮತ್ತು ಎಂ. ಎ. ತರಗತಿಗಳಿಗೆ ಆಕರ ಪುಸ್ತಕಗಳಾಗಿ ನಿಗದಿಪಡಿಸಿದೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
Share
Subscribe to our emails
Subscribe to our mailing list for insider news, product launches, and more.