Skip to product information
1 of 2

Dr. Be. Go. Ramesh

ಮಹಿಳಾ ಉದ್ಯಮಿಗಳು

ಮಹಿಳಾ ಉದ್ಯಮಿಗಳು

Publisher - ಸಪ್ನ ಬುಕ್ ಹೌಸ್

Regular price Rs. 95.00
Regular price Rs. 95.00 Sale price Rs. 95.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 124

Type - Paperback

Gift Wrap
Gift Wrap Rs. 15.00

 

ಭಾರತದ ಹತ್ತು ಟಾಪ್ ಮಹಿಳಾ ಉದ್ಯಮಿಗಳು ಸೇರಿದಂತೆ ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಇಂದು ಖ್ಯಾತಿವೆತ್ತ ಭಾರತೀಯ ಮಹಿಳಾ ಉದ್ಯಮಿಗಳಿದ್ದಾರೆ. ಇಂಥ ಮಹಿಳಾ ಉದ್ಯಮಿಗಳು ಹೆಚ್ಚಬೇಕು ಎಂಬ ಮಾತು ಕೇಳಿಬರುತ್ತಿದೆ. ಅದು ಆಗಬೇಕು ಕೂಡ. ಭಾರತದಲ್ಲಿ ಕ್ರಿಯಾಶೀಲ ಮಹಿಳೆಯರಿಗೆ ಕೊರತೆ ಇಲ್ಲ. ಆದರೆ ಬಂಡವಾಳ ಹೂಡಿಕೆ, ಅವಕಾಶಗಳು ಇಲ್ಲವಾಗಿ ಸಂಖ್ಯೆ ಹೆಚ್ಚುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಗಳು ಬೆಂಬಲಿಸಬೇಕಾಗಿದೆ.

ಪ್ರಸ್ತುತ ಭಾರತದಲ್ಲಿಯೇ ನೂರಕ್ಕೂ ಹೆಚ್ಚು ಪ್ರತಿಷ್ಠಿತ ಮಹಿಳಾ ಉದ್ಯಮಿಗಳನ್ನು ಕಾಣುತ್ತೇವೆ. ಇವರಲ್ಲಿ ಸುಮಾರು ಐವತ್ತು ವಿಶಿಷ್ಟ ಹೆಸರು ಮಾಡಿರುವ ಉದ್ಯಮಿಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ಸ್ವಂತ ಉದ್ಯಮಗಳನ್ನು ಕೈಗೊಳ್ಳುವ ಮಹಿಳೆಯರಿಗೆ ಒಂದು ಆಶಾಕಿರಣವಾಗಬೇಕೆಂಬುದೂ ಉದ್ದೇಶ.

ಈ ಉದ್ದೇಶ ಸಫಲಗೊಳ್ಳಲು ಸಪ್ನ ಬುಕ್ ಹೌಸ್‌ನ ಶ್ರೀ ನಿತಿನ್ ಷಾರವರು ಹಾಗೂ ಕನ್ನಡ ವಿಭಾಗದ ವ್ಯವಸ್ಥಾಪಕರಾದ ಶ್ರೀ ಆರ್. ದೊಡ್ಡಗೌಡರು ಕೈಜೋಡಿಸಿರುವುದು ಸಂತಸದ ಸಂಗತಿ. ಈ ಪುಸ್ತಕ ಪ್ರಕಟಣೆಗೆ ಮುಂದಾದ ಇಬ್ಬರಿಗೂ ನನ್ನ ಗೌರವ ಪೂರ್ವಕ ವಂದನೆಗಳು.

-ಬೆ. ಗೋ. ರಮೇಶ್
View full details