Skip to product information
1 of 2

To Kannada : Manjunath Chand

ಮಹಾತ್ಮನ ಮಗಳು

ಮಹಾತ್ಮನ ಮಗಳು

Publisher - ವೀರಲೋಕ ಬುಕ್ಸ್

Regular price Rs. 450.00
Regular price Rs. 450.00 Sale price Rs. 450.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 328

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನದಿಯ ಉದ್ವಿಗ್ನ ರಹಿತ ನಡಿಗೆ
ಮೀರಾ ಬೆಹನ್ ಅವರ ಆತ್ಮಕಥನ ಕೃತಿಯನ್ನು ಶ್ರೀ ಮಂಜುನಾಥ್ ಚಾಂದ್ ಅವರು ಕನ್ನಡಕ್ಕೆ ಭಾಷಾಂತರಿಸುವ ಮೂಲಕ ಒಂದು ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಹುಟ್ಟಿದ ಮೆಡಲಿನ್ ಪ್ಲೇಡ್ ಅವರು ಗಾಂಧಿಜೀ ಅವರ ವಿಚಾರ ಮತ್ತು ವ್ಯಕ್ತಿತ್ವಕ್ಕೆ ಮನಸಾರೆ ಸ್ಪಂದಿಸಿ ನಮ್ಮ ದೇಶಕ್ಕೆ ಬಂದು 'ಮೀರಾ ಬೆಹೆನ್' ಆದದ್ದು ಒಂದು ಅಸಾಧಾರಣ ಪಯಣ. ಇವರು ಇದ್ದಕ್ಕಿದ್ದಂತೆ ಇಲ್ಲಿಗೆ ಬರಲಿಲ್ಲ. ಗಾಂಧಿಜೀಯವರ ಬಳಿಗೆ ಬರಲು ಗಾಂಧಿ ಮಾದರಿಯ ಸಿದ್ಧತೆಗಳನ್ನು ಮಾಡಿಕೊಂಡದ್ದು ವಿಶೇಷ ಮಾದರಿಯಾಗಿತ್ತು. ನೇಯ್ದೆ ಕಲಿತರು. ಸಸ್ಯಾಹಾರ ರೂಢಿಸಿಕೊಂಡರು. ನೆಲದ ಮೇಲೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡರು. ಗಾಂಧಿಜೀ ಸಂಪಾದಿಸಿ ಪ್ರಕಟಿಸುತ್ತಿದ್ದ 'ಯಂಗ್ ಇಂಡಿಯಾ' ಪತ್ರಿಕೆಗೆ ಚಂದಾದಾರರಾದರು. ತನ್ಮೂಲಕ ತನ್ನೊಳಗೆ ಗಾಂಧಿ ಅವರನ್ನು ಅರ್ಥಪೂರ್ಣವಾಗಿ ಒಳಗೊಳ್ಳುತ್ತ ಹೋದರು. ಆನಂತರ ಗಾಂಧಿ ಆಶ್ರಮಕ್ಕೆ ಬಂದರು. ಇವರನ್ನು ಆಹ್ವಾನಿಸಿದ ಗಾಂಧಿ ಮೊದಲು ಹೇಳಿದ್ದು: 'ನೀನು ನನ್ನ ಮಗಳಾಗುವೆ' ನಿಜ: ಮೀರಾ ಬೆಹನ್ ಗಾಂಧಿಜೀಯವರ ಮಾನಸ ಮಗಳಾಗಿ ಇಡೀ ಬದುಕನ್ನು ಕಳೆದರು. ಗಾಂಧಿಜೀಯವರು ಮೀರಾ ಅವರನ್ನು ಮಗಳಂತೆ ಪೊರೆದರು. ಹೀಗಾಗಿ ಮಂಜುನಾಥ್ ಚಾಂದ್ ಅವರು ಈ ಅನುವಾದ ಕೃತಿಗೆ 'ಮಹಾತ್ಮನ ಮಗಳು' ಎಂದು ಹೆಸರು ಕೊಟ್ಟದ್ದು ಭಾವನಾತ್ಮಕ ಸಹಜ ನ್ಯಾಯದ ರೂಪಕವಾಗಿದೆ.
ಈ ಕೃತಿಯಲ್ಲಿ ಮೀರಾ ಅವರು ತಮ್ಮ ಬಾಲ್ಯದಿಂದ ಆರಂಭಿಸಿ ಗಾಂಧಿ ಹತ್ಯೆಯವರೆಗಿನ ಒಡನಾಟದ ಜೊತೆಗೆ ಅನಂತರದ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ಮೂರು ಹಂತಗಳಲ್ಲಿ ಈ ಕೃತಿಯನ್ನು ಕಂಡುಕೊಳ್ಳಬಹುದಾಗಿದೆ. ಬಾಲ್ಯದಿಂದ ಯೌವನದ ವರೆಗಿನ ಇಂಗ್ಲೆಂಡ್ ಜೀವನ, ಗಾಂಧಿಜೀ ಆಶ್ರಮಕ್ಕೆ ಬಂದು ಅವರ ಹತ್ಯೆಯವರೆಗಿನ ಭಾವನೆಗಳ ಯಾನ ಮತ್ತು ಗಾಂಧಿ ಹತ್ಯೆಯ ನಂತರ ಕೆಲವು ವರ್ಷಗಳ ಕಾಲ ಪಶುಸಂಗೋಪನೆಯ ಯೋಜನೆಗಳನ್ನು ಕೈಗೆತ್ತಿಕೊಂಡು ಇಲ್ಲಿಯೇ ಜೀವಿಸಿದ ಕಥನ ಈ ಮೂರೂ ಹಂತಗಳಲ್ಲಿ ಮೀರಾ ಬೆಹೆನ್ ಅವರ ಬದುಕಿನ ಹಾದಿಯನ್ನು ತೆರೆದಿಟ್ಟ ಈ ಕೃತಿಯು ಮನುಷ್ಯ ಸಂಬಂಧದ ಭಾವನಾತ್ಮಕ ಕಂಪನ 'ಮಹಾತ್ಯನ ಮಗಳು' ಶೀರ್ಷಿಕೆಯಲ್ಲಿ ಗಾಂಧಿ ಮತ್ತು ಮೀರಾ ಇಬ್ಬರೂ ಇರುವಂತೆಯೇ ಇಡೀ ಕೃತಿಯನ್ನು ಇಬ್ಬರೂ ಆವರಿಸಿಕೊಂಡಿದ್ದಾರೆ. ಅಪ್ಪ ಮಗಳ ಸೇತು ಸಂಬಂಧದಲ್ಲಿ ನಡೆಯುವ 'ಜೀವನ ಅನುಸಂಧಾನ'ವು ಇವರಿಬ್ಬರ ವ್ಯಕ್ತಿತ್ವಗಳನ್ನು ಕಟ್ಟುತ್ತಾ ಪಯಣಿಸುತ್ತದೆ. ಹೀಗಾಗಿ ಇದು ಮೀರಾ ಬೆಹನ್ ಅವರ ಆತ್ಮಕಥನವಷ್ಟೇ ಆಗದೆ, ಅವರ ದೃಷ್ಟಿಕೋನದ ಗಾಂಧಿ ವ್ಯಕ್ತಿತ್ವದ ವ್ಯಾಖ್ಯಾನವೂ ಆಗುತ್ತದೆ. ಅಲ್ಲಲ್ಲಿ ಅಲ್ಪಸ್ವಲ್ಪ ವರದಿಯಂತಹ ನಿರೂಪಣೆ ಇಣುಕಿದರೂ ಒಟ್ಟು ಕೃತಿಯನ್ನು ಒಂದು 'ಕರುಳ ಕಟ್ಟು' ಎಂದು ಕರೆಯಬಹುದಾಗಿದೆ.
'ಮಹಾತ್ಮನ ಮಗಳು' ಎನ್ನುವ ಕರುಳ ಕಟ್ಟನ್ನು ಕನ್ನಡದ್ದೇ ಕೃತಿ ಎಂಬಂತೆ ಭಾಷಾಂತರಿಸಿರುವ ಮಂಜುನಾಥ್ ಅವರ ಸೃಜನಶೀಲ ಮನಸ್ಸಿಗೆ ನನ್ನ ಮನಸ್ಸಿನ ಧನ್ಯವಾದಗಳು ಬೌದ್ಧಿಕ ವಾಗ್ವಾದಗಳಾಚೆಗಿನ 'ಮನಸ್ಸುಗಳು' ಪರಸ್ಪರ ನಡೆಸಿದ ಜೀವನ ಸಂವಾದವನ್ನು ನದಿಯ ಉದ್ವಿಗ್ನ ರಹಿತ ನಡಿಗೆಯಂತೆ ನಿರೂಪಿಸಿರುವ ಮೀರಾ ಬೆಹನ್ ಅವರ ಈ ಅತ್ಮಕಥನವು ಓದುಗರ ಮನಸ್ಸಿನ ಭಾಗವಾಗಲಿ ಎಂದು ಆಶಿಸುತ್ತೇನೆ.
-ಬರಗೂರು ರಾಮಚಂದ್ರಪ್ಪ

View full details

Talk about your brand

Share information about your brand with your customers. Describe a product, make announcements, or welcome customers to your store.