Skip to product information
1 of 2

B. S. Chandrashekar, B. R. Prabhakar

ಮಹಾನಾರಾಯಣ ಉಪನಿಷತ್ತು

ಮಹಾನಾರಾಯಣ ಉಪನಿಷತ್ತು

Publisher - ಸಾಹಿತ್ಯ ಭಂಡಾರ

Regular price Rs. 480.00
Regular price Rs. 480.00 Sale price Rs. 480.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 369

Type - Paperback

Gift Wrap
Gift Wrap Rs. 15.00
ಕೃಷ್ಣ ಯರ್ಜುವೇದದ ತೈತ್ತರೀಯ ಆರಣ್ಯಕದ ಭಾಗವಾದ ಮಹಾ ನಾರಾಯಣೋಪನಿಷತ್ತು ಅನೇಕ ಮಂತ್ರ, ಸೂತ್ರಗಳ ಬೃಹತ್ ಸಂಗ್ರಹ, ಈ ಉಪನಿಷತ್ತು ಜೀವ ಜಗತ್ತುಗಳ ಉಗಮದ ಬಗ್ಗೆ ತಿಳಿಸುವುದಲ್ಲದೆ ಕರ್ಮಾನುಷ್ಠಾನ, ಉಪಾಸನೆ ಹಾಗೂ ಆತ್ಮಜ್ಞಾನಗಳ ಸಾಧನೆಗೆ ಮಾರ್ಗದರ್ಶಿಯೂ ಹೌದು.

ಪ್ರಸ್ತುತ ಗ್ರಂಥದಲ್ಲಿ ಮಹಾನಾರಾಯಣೋಪನಿಷತ್ತಿನ ಸಂಸ್ಕೃತ ಮಂತ್ರಗಳು ಮತ್ತು ಅವುಗಳ ಅನುವಾದ ಮತ್ತು ವ್ಯಾಖ್ಯಾನ ಆಂಗ್ಲ ಭಾಷೆಯಲ್ಲಿದೆ. ಸಂಸ್ಕೃತದ ಮಂತ್ರಗಳನ್ನು ದೇವನಾಗರೀ ಲಿಪಿಯಲ್ಲೂ ಕನ್ನಡ ಲಿಪಿಯಲ್ಲೂ ಸ್ವರಸಹಿತವಾಗಿ ನೀಡಲಾಗಿದೆ. ಇಂಗ್ಲಿಷ್ ಅನುವಾದ ಹಾಗೂ ವ್ಯಾಖ್ಯಾನಗಳಲ್ಲದೆ ಇಡೀ ಉಪನಿಷತ್ತಿನ ಕನ್ನಡ ಪದ್ಯಾನುವಾದವೂ ಇಲ್ಲಿದ್ದು ಹಲವು ರೀತಿಗಳಿಂದ ವಿಶಿಷ್ಟವಾಗಿರುವ ಈ ಪುಸ್ತಕವು ಸ್ವಾಧ್ಯಾಯಿಗಳಿಗೆ ಸಹಾಯಕವಾಗಿದೆ. ಕೇವಲ ಕಣ್ಣು ಹಾಯಿಸಿದರೆ ಓದುಗರನ್ನು ಸೆಳೆಯಬಲ್ಲ, ಹೆಚ್ಚಿನ ಓದಿಗೆ ಪ್ರೇರಿಸಬಲ್ಲ ಕೃತಿಯಿದು.

ಗಣಿತಶಾಸ್ತ್ರ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರ, ನಿವೃತ್ತ ಬ್ಯಾಂಕ‌ರ್ ಶ್ರೀ ಬಿ.ಎಸ್. ಚಂದ್ರಶೇಖರ್ ಕವಿಯಾಗಿ ಗುರುತಿಸಲ್ಪಟ್ಟವರು. ಕನ್ನಡ, ಸಂಸ್ಕೃತಗಳಲ್ಲಿ ಪರಿಣತರಾದ ಶ್ರೀಯುತರು ಬ್ಯಾಂಕಿಂಗ್, ವೈಚಾರಿಕ ಹಾಗೂ ಕಾವ್ಯ ಕೃತಿಗಳನ್ನು ರಚಿಸಿರುವುದಲ್ಲದೆ ಸಾಹಿತ್ಯ, ಬ್ಯಾಂಕಿಂಗ್, ಅದ್ವೈತ ಮತ್ತು ಜ್ಯೋತಿಷ ಕುರಿತ ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಕೆಲವು ಕೃತಿಗಳಿಗೆ ಪ್ರಶಸ್ತಿಗಳು ಲಭಿಸಿದ್ದು, ಸವಿಗನ್ನಡ ಸ್ತೋತ್ರ ಚಂದ್ರಿಕೆ ಸಂಸ್ಕೃತ ಸ್ತೋತ್ರ, ವೇದಭಾಗಗಳ ಕನ್ನಡ ಪದ್ಯಾನುವಾದವಾಗಿ ಗಮನ ಸೆಳೆದಿದೆ.

ಎಚ್.ಎ.ಎಲ್‌.ನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಬಿ.ಆರ್. ಪ್ರಭಾಕರ್ (ಬಿ.ಎಸ್ಸಿ, ಎಸ್.ಸಿ.ಎಂ.ಎ.) ಅವರು ಐ.ಸಿ.ಎ.ಐ.ನ ದಕ್ಷಿಣ ವಲಯದ ಅಧ್ಯಕ್ಷರಾಗಿದ್ದವರು. ಸಂಸ್ಕೃತ, ಸಂಗೀತ ಹಾಗೂ ವೈದಿಕ ಸಾಹಿತ್ಯವನ್ನು ಚೆನ್ನಾಗಿ ಬಲ್ಲ ಶ್ರೀಯುತರು ರಾಮಾಯಣ, ಅರ್ಥಶಾಸ್ತ್ರ, ಡಿ.ವಿ.ಜಿ, ಸಾಹಿತ್ಯ ಮುಂತಾದ ವಿಷಯಗಳನ್ನು ಕುರಿತು ವಿದ್ವತ್ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ವ್ಯವಸ್ಥಾಪನ ಸಂಬಂಧಿ ವಿಷಯಗಳಲ್ಲಿ ಸಲಹೆಗಾರರೂ ಸಂಪನ್ಮೂಲ ವ್ಯಕ್ತಿಯೂ ಆಗಿ ಮುಂದುವರೆದಿದ್ದಾರೆ.
View full details