Devudu
ಮಹಾಕ್ಷತ್ರಿಯ
ಮಹಾಕ್ಷತ್ರಿಯ
Publisher - ಹೇಮಂತ ಸಾಹಿತ್ಯ
- Free Shipping Above ₹250
- Cash on Delivery (COD) Available
Pages -
Type -
ಮಹಾಕ್ಷತ್ರಿಯ
ದೇವುಡುರವರ ಸರ್ವ ಶ್ರೇಷ್ಠ ಕಾದಂಬರಿ ಮಹಾಕ್ಷತ್ರಿಯ. ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮಹಾನ್ ಕೃತಿ.
ದೇವಲೋಕವನ್ನು ಮೂವರು ಇಂದ್ರರು ಆಳಿರುವುದು ಬಹಳ ಓದುಗರಿಗೆ ಗೊತ್ತಿಲ್ಲ. ನಿತ್ಯ ಇಂದ್ರನಾದ ದೇವೇಂದ್ರ, ರಾಕ್ಷಸೇಂದ್ರನಾದ ವೃತ್ರಾಸುರ ಹಾಗೂ ನಹುಷ- ಇವರೇ ಆ ಮೂವರು ಇಂದ್ರರುಗಳು.
ಮಾನವೇಂದ್ರನಾದ ನಹುಷ ಚಕ್ರವರ್ತಿಯ ಕಥೆಯೇ ಮಹಾಕ್ಷತ್ರಿಯ. ನಹುಷನು ದೇವೇಂದ್ರನಾಗಿ ಕಾರ್ಯನಿರ್ವಹಿಸಿ ದೇವಲೋಕ ರಹಸ್ಯವನ್ನು ಹೊರಗೆಡವಿದ ಚಕ್ರವರ್ತಿ. ಸಪ್ತರ್ಷಿಗಳು ಇಂದ್ರನನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗುವ ಮೆರವಣಿಗೆಯೇ ಶಿಬಿಕೋತ್ಸವ. ಇದನ್ನು ಕಾರ್ಯಗತಗೊಳಿಸಲು ನಿತ್ಯೇಂದ್ರನು ಅರ್ಥಾತ್ ಮಹೇಂದ್ರನು ಅಂಜುತ್ತಿದ್ದುದುಂಟು. ಆದರೆ ಈ ಉತ್ಸವವನ್ನು ಕಾರ್ಯರೂಪಕ್ಕೆ ತಂದ ಪುರುಷೋತ್ತಮ ನಹುಷ. ಮಹಾಕ್ಷತ್ರಿಯನೆನಿಸಿಕೊಂಡ ನಹುಷ ಅತೀಂದ್ರನಾದ ಬಗೆ ಇದು. ಇಂದ್ರನನ್ನೂ ಮೀರಿಸಿ ತ್ರಿಲೋಕ ವಿಖ್ಯಾತನಾದವನೇ ನಹುಷ.
ದೇವುಡುರವರ ಈ ಪೌರಾಣಿಕ ಕಾದಂಬರಿಯನ್ನು ಪ್ರಯತ್ನಪೂರ್ವಕವಾಗಿ ಓದಬೇಕಾಗಿಲ್ಲ. ಇದರದು ತಾನಾಗಿ ಓದಿಸಿಕೊಂಡು ಹೋಗುವ ವಿಶೇಷಗುಣ. ಏಕಪತ್ನಿವ್ರತಸ್ಥನಾಗಿ ದೇವಲೋಕವನ್ನು ಮಾನವಲೋಕಕ್ಕೇ ಕೀರ್ತಿ ತಂದ ನಹುಷನ ಕತೆಯನ್ನು ದೇವುಡುರವರು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.
Share
Subscribe to our emails
Subscribe to our mailing list for insider news, product launches, and more.