Devudu
Publisher - ಹೇಮಂತ ಸಾಹಿತ್ಯ
- Free Shipping
- Cash on Delivery (COD) Available
Pages -
Type -
Couldn't load pickup availability
ಮಹಾಬ್ರಾಹ್ಮಣ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಸಂಪಾದಿಸಿಕೊಂಡಿರುವ ದೇವುಡು ನರಸಿಂಹಶಾಸ್ತ್ರಿಗಳು (1896 1962) .ಬಹುಮುಖ ಪ್ರತಿಭೆಯ ವಿದ್ವಾಂಸರು, ಸಾಹಿತ್ಯಕ್ಷೇತ್ರವಷ್ಟೇ ಅಲ್ಲದೆ, ಕರ್ನಾಟಕ ಏಕೀಕರಣ, ಮಕ್ಕಳ ಸಾಹಿತ್ಯ, ರಂಗಭೂಮಿ, ಪತ್ರಿಕೋದ್ಯಮ, ಅಕ್ಷರ ಪ್ರಚಾರ, ವಿದ್ಯಾಭ್ಯಾಸ, ಸ್ವಾತಂತ್ರ ಹೋರಾಟ - ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅಪೂರ್ವ ವ್ಯಕ್ತಿ. ದೇವುಡು ಅವರು ಅರವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚನೆ ಮಾಡಿದ್ದಾರೆ. ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ ಇವು ಕನ್ನಡ ಕಾದಂಬರಿ ನವಮನ್ವಂತರವನ್ನೇ ಸಾರಿದ ಅಪೂರ್ವ ಕೃತಿಗಳು.
"ಮಹಾಬ್ರಾಹ್ಮಣ" ದಲ್ಲಿ ವೇದಕಾಲೀನ ಜಗತ್ತನ್ನು ಸಮಕಾಲೀನ ಭಾಷೆಯಲ್ಲಿ ಅಪೂರ್ವವಾಗಿ ಕಟ್ಟಿ ನಿಲ್ಲಿಸಿರುವ, ವಿಶ್ವಾಮಿತ್ರನ ಮಹಾಜೀವನದ ಎಲ್ಲ ವಿವರಗಳನ್ನು ಬಿತ್ತರಿಸಲಾಗಿದೆ. ಪುರುಷ ಪ್ರಯತ್ನದ ಪರಾಕಾಷ್ಠೆ, ಅಹಂಭಾವದ ತ್ಯಾಜ್ಯದಿಂದಲೇ ಸಾಧ್ಯ ಎಂಬುದನ್ನು “ಮಹಾಬ್ರಾಹ್ಮಣ" ಪರಿಣಾಮಕಾರಿಯಾ ಧ್ವನಿಸುತ್ತದೆ. ಸಂಕಲ್ಪಸಿದ್ಧಿ, ಮೇಧಾಶಕ್ತಿ, ಸೃಜನಶಕ್ತಿಗಳು ಇದರಲ್ಲಿ ವಿನೂತನವಾಗಿ ಬೆರತು ಬಂದಿವೆ.
ಹೇಮಂತ ಸಾಹಿತ್ಯ
