Dr. D. M. Ganesh
ಮಹಾಬೆಳಕು
ಮಹಾಬೆಳಕು
Publisher - Beechi Prakashana
- Free Shipping Above ₹350
- Cash on Delivery (COD) Available*
Pages - 135
Type - Paperback
Couldn't load pickup availability
ಚಿಕ್ಕಮಗಳೂರು ಮಹಾನಗರದಲ್ಲಿ 2005 ಫೆಬ್ರವರಿ 5ರಿಂದ ಮಾರ್ಚ್ 13ರವರೆಗೆ ನಡೆದ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಉಪನ್ಯಾಸ ಮಾಲಿಕೆಯನ್ನು ಆಲಿಸಿದ ಶ್ರೀ ಗಣೇಶ್ ಅವರು ಸ್ವಾಮಿಗಳ ಮಾತುಗಳ ಸಾರವನ್ನು ಯಥಾವತ್ತಾಗಿ ಹಿಡಿದಿಡುವ ಸಾಹಸವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಅದರಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿರುವ ಗಣೇಶ್ ಸಾಹಿತ್ಯ ಪ್ರೇಮಿಗಳು. ಕೇಳಿದ್ದನ್ನು ಕರಗತ ಮಾಡಿಕೊಂಡು ಯಥಾವತ್ತಾಗಿ ಅಕ್ಷರಗಳಲ್ಲಿ ಹಿಡಿದಿಡುವ ಗುಣ ಅವರಲ್ಲಿದೆ. ಅವರ ಸ್ಮರಣಶಕ್ತಿ ಅದ್ಭುತವಾದುದು. ಅವರ ಸ್ಮರಣ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ ಈ ಕೃತಿ. ಇದೊಂದು ಸಾಮಾನ್ಯ ಕೃತಿಯಲ್ಲ: ಅಧ್ಯಾತ್ಮದ ರಸಪಾಕ. ಇದನ್ನು ಓದುತ್ತಿದ್ದರೆ ಸಿದ್ದೇಶ್ವರ ಸ್ವಾಮಿಗಳ ಉಪನ್ಯಾಸವನ್ನು ನೇರವಾಗಿ ಕೇಳಿದ ಅನುಭವವಾಗುವುದು. ಆ ನಿಟ್ಟಿನಲ್ಲಿ ಗಣೇಶ್ ಅವರ ಸಾಧನೆ, ಶ್ರಮ ಸ್ತುತ್ಯರ್ಹವಾದುದು. ಅವರು ಸ್ವಾಮೀಜಿಯವರ ಭಾವನೆಗಳನ್ನು ಅಚ್ಚುಕಟ್ಟಾಗಿ ಸಂಪಾದನೆ ಮಾಡಿದ್ದಾರೆ. ಅದಕ್ಕಾಗಿ ಗಣೇಶ್ ಅವರಿಗೆ ಅಭಿನಂದನೆಗಳು. ಅವರಿಂದ ಈ ರೀತಿಯ ಹಲವು ಕೃತಿಗಳು ಹೊರಬಂದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲಿ ಎಂದು ಹೃದಯ ತುಂಬಿ ಹಾರೈಸುತ್ತೇವೆ.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಸಾಣೇಹಳ್ಳಿ
Share

Subscribe to our emails
Subscribe to our mailing list for insider news, product launches, and more.