Skip to product information
1 of 2

Dr. Chandrashekhara Damle

ಮಹಾಭಾರತದ ಮಹಾಪಾತ್ರಗಳು

ಮಹಾಭಾರತದ ಮಹಾಪಾತ್ರಗಳು

Publisher -

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 136

Type - Paperback

Gift Wrap
Gift Wrap Rs. 15.00

ಬಹಳ ಸಂಪದ್ಭರಿತವಾದ ಹಳೆಗನ್ನಡ ಸಾಹಿತ್ಯವು ಇಂದಿನ ಶೈಕ್ಷಣಿಕ ವಲಯದಲ್ಲಿ ಗಣನೆಗೆ ಬಾರದಿರುವುದು ಒಂದು ಆತಂಕದ ವಿದ್ಯಮಾನ. ಇದರಿಂದಾಗಿ ಜನರ ಆಡುಮಾತಿನಲ್ಲಿ ಹಾಡುಗಬ್ಬವಾಗಿ ಪ್ರವಹಿಸುತ್ತಿದ್ದ ಹಳೆಗನ್ನಡ ಸಾಹಿತ್ಯದ ಸೊಲ್ಲುಗಳ ಹರಿವು ಇಂದು ತೀರಾ ದುರ್ಬಲವಾಗಿದೆ. ಅದು ಬತ್ತಿದ ಜಲವಾಗಬಾರದು ಎಂಬ ಕಾಳಜಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅನೇಕ ಕಾರ್ಯಕ್ರಮಗಳನ್ನು ಯೋಜಿಸಿದೆ.

ಈ ಯೋಜನೆಗೆ ಇನ್ನೊಂದು ರೂಪ ಕೊಟ್ಟು ಜನಸಾಮಾನ್ಯರಿಗೆ ಸಾಹಿತ್ಯದ ಸವಿಯನ್ನು ಉಣ ಬಡಿಸುವ ಸಾಧ್ಯತೆ ಕಂಡದ್ದು ಯಕ್ಷಗಾನ ಕಲಾ ಮಾಧ್ಯಮದಲ್ಲಿ.

ಪೌರಾಣಿಕ ಪ್ರಸಂಗಗಳ ಪ್ರಸ್ತುತಿಯಲ್ಲಿ ಕಲಾವಿದರು ಸ್ವಯಂ ಸ್ಫೂರ್ತಿಯಿಂದ ಮಾತಾಡುವ ಅರ್ಥಗಾರಿಕೆಗೆ ಆಧಾರವಾಗಿ ಬಳಸುವುದು ಹಳೆಗನ್ನಡ ಕಾವ್ಯಗಳನ್ನೇ. ಅಂದರೆ ಯಕ್ಷಗಾನ ಅರ್ಥಗಾರಿಕೆಯಲ್ಲಿ ಕಾವ್ಯಗಳು ಪುನರ್ವ್ಯಾಖ್ಯಾನ ಹೊಂದುತ್ತವೆ ಹಾಗೂ ಪ್ರೇಕ್ಷಕರಿಗೆ ಕಲಾಸ್ವಾದನೆಯೊಂದಿಗೆ ಸಾಹಿತ್ಯದ ಸ್ಪರ್ಶವೂ ಸಿಗುತ್ತದೆ. ಈ ದೃಷ್ಟಿಯಿಂದ ಹನ್ನೊಂದು ದಿನಗಳಲ್ಲಿ ಸಂಪೂರ್ಣ ಮಹಾಭಾರತದ ಕಥಾನಕಗಳ ಸರಣಿ ಪ್ರದರ್ಶನಗಳನ್ನು ನಡೆಸುವ ಯೋಜನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಂದಿಟ್ಟವರು ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲಯವರು. ಹನ್ನೊಂದು ದಿನಗಳಲ್ಲಿಯೂ ದಿನಕ್ಕೆರಡು ಕಾಲಮಿತಿಯ ಯಕ್ಷಗಾನ ಪ್ರದರ್ಶನಗಳು ಹಾಗೂ ಅವುಗಳ ನಡುವೆ ಮಹಾಭಾರತದ ಪ್ರಮುಖ ಪಾತ್ರಗಳ ಕುರಿತು ಸಾಹಿತಿಗಳಿಂದ ಕಾವ್ಯಾಧಾರಿತವಾದ ಉಪನ್ಯಾಸಗಳನ್ನು ಏರ್ಪಡಿಸುವುದೂ ಈ ಯೋಜನೆಯ ಭಾಗವಾಗಿತ್ತು. ಪೌರಾಣಿಕ ಪಾತ್ರ ಚಿಂತನೆಯ ಈ ಉಪನ್ಯಾಸಗಳು ಉಪಯುಕ್ತ ಸಾಹಿತ್ಯವಾಗಿರುವುದು ನಮ್ಮ ಅನುಭವಕ್ಕೆ ಬಂತು. ಅವನ್ನು ಪ್ರಕಟಿಸಿದರೆ ಒಂದು ಉತ್ತಮ ಸಾಹಿತ್ಯಕ ಕೊಡುಗೆಯಾಗಬಹುದೆಂಬ ಚಿಂತನೆ ಮೂಡಿದ್ದರಿಂದ 'ಮಹಾಭಾರತದ ಮಹಾಪಾತ್ರಗಳು' ಎಂಬ ಈ ಕೃತಿ ಬೆಳಕು ಕಾಣುತ್ತಿದೆ.

ಡಾ. ಮುಖ್ಯಮಂತ್ರಿ ಚಂದ್ರು (ಮುನ್ನುಡಿಯಿಂದ)

View full details