Skip to product information
1 of 1

Girimane Shyamarao

ಮಧುರವಾಗಲಿ ದಾಂಪತ್ಯ

ಮಧುರವಾಗಲಿ ದಾಂಪತ್ಯ

Publisher - ಗಿರಿಮನೆ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಯಾವ ರೀತಿಯ ಮದುವೆ ಎನ್ನುವುದಕ್ಕಿಂತ ಯಾವ ರೀತಿಯ ದಾಂಪತ್ಯ ಎನ್ನುವುದು ಮುಖ್ಯ ಅದು ನಿರ್ಧಾರವಾಗುವುದು ನಮ್ಮ ಹುಟ್ಟುಗುಣಗಳ ಪ್ರಭಾವ, ಆಡುವ ಮಾತು ಮತ್ತು ಹೊಂದಾಣಿಕೆಯ ಮನೋಭಾವದೊಳಗೆ! ಹುಟ್ಟುಗುಣಕ್ಕೆ ಪೂರಕವಾಗಿ ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳು ಹೊರಬರುವುದು ಮಾತಿನ ಮೂಲಕ ಮನಸ್ಸು ಸುಸ್ಥಿತಿಯಲ್ಲಿರಬೇಕಾದರೆ ಇಷ್ಟವಾಗದ ವಿಚಾರ, ಅನಿಷ್ಟ ಕೆಲಸಗಳು, ಬೇಡದ ಘಟನೆಗಳು ನಡೆಯಬಾರದು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬೇಡದ ಮಾತನ್ನು ಆಡಲೇಬಾರದು! ಎಲ್ಲಾ ನಮ್ಮ ಕೈಯಲ್ಲೇ ಮಾತು, ಮನಸ್ಸು ಮತ್ತು ದಾಂಪತ್ಯ ಈ ಮೂರರದು ಬಿಟ್ಟೂ ಬಿಡದ ಅವಿನಾಭಾವ ಸಂಬಂಧ!

ಎಷ್ಟೇ ಆಧುನಿಕತೆ ಬೆಳೆದರೂ ಮನುಷ್ಯರ ಗುಣಸ್ವಭಾವಗಳು ಬದಲಾಗದೆ ಅವಕ್ಕೆ ಪೂರಕವಾಗಿಯೇ ವರ್ತಿಸುತ್ತವೆ. ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬ ಹಿನ್ನೆಲೆಯಲ್ಲಿ ನಮ್ಮ-ನಿಮ್ಮ, ಆಚೀಚಿನ ಬದುಕು ನೋಡಿ, ಅನುಭವವನ್ನೂ ಸೇರಿಸಿ ಬರೆದ ಸುಖದಾಂಪತ್ಯಕ್ಕೆ ಅಗತ್ಯವಾದ ಕೆಲವು ವಿಚಾರಗಳು ಇಲ್ಲಿವೆ. ಬರೆಯಲು ಸಿಕ್ಕದೆ ಹೋಗಿರುವುದು ಅದೆಷ್ಟೋ.

ಲೇಖಕ
View full details