Ramesh Aroli
ಮಧುಬಾಲ
ಮಧುಬಾಲ
Publisher -
- Free Shipping Above ₹350
- Cash on Delivery (COD) Available*
Pages - 140
Type - Paperback
Couldn't load pickup availability
"ಒಮ್ಮೆ ನನ್ನವರೇ ನನ್ನನ್ನು ಹೊಡೆದರು, ಮತ್ತೊಮ್ಮೆ ಅಲ್ಲದವರು ಹೊಡೆದರು; ಒಮ್ಮೆ ಪರಿಸ್ಥಿತಿ ಹೊಡೆಯಿತು, ಮತ್ತೊಮ್ಮೆ ಹಣೆಬರಹ ಹೊಡೆಯಿತು. ಆದರೆ, ಇಷ್ಟೆಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ನಿಸರ್ಗ ಹೊಡೆದು ಉರುಳಿಸಿತು!"
ಹೌದು, ಆಕೆಯ ಬದುಕು ಚಿಕ್ಕದಾದರೂ ಕತೆ ದೊಡ್ಡದು! ಯಾಕೆಂದರೆ ಪ್ರಕೃತಿ ಹುಟ್ಟಿನಿಂದಲೇ ಮಧುಬಾಲಾಳ ಹೃದಯದಲ್ಲಿ ರಂಧ್ರವೊಂದನ್ನು ಕೊರೆದಿತ್ತು. ಅದಕ್ಕೆ ಅಂದು ಚಿಕಿತ್ಸೆಯೇ ಇಲ್ಲವಾಗಿತ್ತು. ಯಾವುದೋ ವಿಷಯವಾಗಿ ಸಲಹೆ ಕೇಳಲು ದಿಲೀಪ್ ಕುಮಾರ್ ಅವರನ್ನು ಕರೆಯಿಸಿಕೊಂಡು, "ತಾನು ಚೇತರಿಸಿಕೊಂಡ ಮೇಲೆ ತನ್ನೊಂದಿಗೆ ಸಿನಿಮಾ ಮಾಡಲು ಇಷ್ಟ ಪಡ್ತೀರಾ?" ಅಂತ ಕೇಳಿದ್ದಳು. ಅದಕ್ಕೆ ಉತ್ತರಿಸಿದ ದಿಲೀಪ್ ಕುಮಾರ್, "ನಿನಗೇನು ಆಗಿಲ್ಲ, ನೀನು ಹುಷಾರಾಗ್ತೀಯಾ; ಖಂಡಿತಾ ಮತ್ತೆ ನಾವಿಬ್ಬರೂ ಒಂದು ಸಿನಿಮಾ ಮಾಡೋಣ" ಅಂತ ಭರವಸೆ ನೀಡಿದ್ದರು.
ಆಕೆಯ ಆ ಸ್ಥಿತಿಯನ್ನು ಕಣ್ಣಾರೆ ಕಂಡ ದಿಲೀಪ್ ಕುಮಾರ್, ತಾನು ಜೀವಂತ ಇರುವವರೆಗೂ ಆಕೆಯನ್ನು ಪ್ರೀತಿಸುತ್ತಲೇ ಇರುತ್ತೇನೆ ಎಂದು ಸಾರ್ವಜನಿಕವಾಗಿ ಕೋರ್ಟಿನಲ್ಲಿ ಘೋಷಿಸಿದ್ದರು. ಆಕೆಯ ಗೆಳೆಯ, ಪ್ರಿಯತಮನ ದುಃಖವನ್ನು ಗಮನಿಸಿದ ಅನೇಕರು, ಅವರಿಬ್ಬರು ಒಂದಾಗಿದ್ದರೆ ಆಕೆಗೆ ಒಂದಷ್ಟು ಆಯುಷ್ಯವನ್ನಾದರೂ ಆತ ಕೊಡಬಹುದಿತ್ತು ಅಂದುಕೊಂಡರು. ವೈದ್ಯಕೀಯ ಲೋಕದಲ್ಲಿ ಹೃದಯದ ರಂಧ್ರಕ್ಕೆ ಸಮರ್ಪಕ ಚಿಕಿತ್ಸೆ ಇನ್ನು ಕಂಡುಹಿಡಿಯದ ಆ ದಿನಗಳಲ್ಲಿ, "ಮುಝೆ ನಹೀ ಮರ್ನಾ ಹೈ, ಮುಝೆ ಜೀನಾ ಹೈ..." (ನನಗೆ ಸಾಯಲು ಇಷ್ಟವಿಲ್ಲ, ನನಗೆ ಬದುಕಬೇಕಿದೆ...) ಅಂತ ಅತ್ತು ಅತ್ತು ಅಂಗಲಾಚುತ್ತಿದ್ದ ಆಕೆಯ ಮಾತಿಗೆ ಉತ್ತರ ಯಾರಲ್ಲಿತ್ತು?
ಮನುಷ್ಯ ಜಗತ್ತಿನ ಎಷ್ಟೋ ಸಂಬಂಧಗಳು ತಾವಾಗಿಯೇ ಮುದುಡಿ ಹೋಗುವುದಿಲ್ಲ. ಘಾಸಿಗೊಂಡ ಎರಡು ಮನಸ್ಸುಗಳ ನಡುವೆ ಆದ ಒಪ್ಪಂದ, ಮುಚ್ಚಳಿಕೆ ಕೇವಲ ಒಂದೇ ಒಂದು 'ಕ್ಷಮಿಸು' ಅಥವಾ 'ಪರವಾಗಿಲ್ಲ ಬಿಡು' ಎಂಬೆರಡು ಪದಗಳಿಂದಲೂ ಸರಿಹೋಗಬಹುದು. ಆದರೆ ನಮ್ಮ ಅಹಂನ ಕಾರಣ, ಅದೆಂದೂ ಪಂಕ್ಚರ್ ಆಗದ ಸೈಕಲ್ ಟ್ಯೂಬ್ನಂತೆ ಬೊಕ್ಕೆಗಳಾಗಿ, ನೀರುಣಿಸದ ಸಸಿಗಳಂತೆ ಒಣಗಿಬಿಡುತ್ತದೆ. ಮಧುಬಾಲಾ ಮತ್ತು ದಿಲೀಪ್ ಕುಮಾರ್ ನಡುವೆ ಆಗಿದ್ದೂ ಇದೇ.
Share

Subscribe to our emails
Subscribe to our mailing list for insider news, product launches, and more.