ಮಾವೋನ ಕೊನೆಯ ನರ್ತಕ

ಮಾವೋನ ಕೊನೆಯ ನರ್ತಕ

ಮಾರಾಟಗಾರ
ಲೀ ಶ್ವಿನ್‌ಶಿಂಗ್ | ಕನ್ನಡಕ್ಕೆ: ಜಯಶ್ರೀ ಭಟ್
ಬೆಲೆ
Rs. 250.00
ಕೊಡುಗೆಯ ಬೆಲೆ
Rs. 250.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಇದೊಂದು ತುಂಬಾ ಪ್ರಾಮಾಣಿಕವಾಗಿರುವ, ನಾಟಕೀಯವಾಗಿರುವ, ಸ್ವಾರಸ್ಯಕರವಾಗಿರುವ ಲೀ ಶ್ವಿನ್‌ಶಿಂಗ್‌ ಆತ್ಮಕಥೆ. ಇದನ್ನು ಓದುವಾಗ ಒಂದು ಕಡೆ ಕಾರಂತರ 'ಮೊಗ ಪಡೆದ ಮನ' ನೆನಪಿಗೆ ಬರುತ್ತಿದ್ದರೆ, ಮತ್ತೊಂದು ಕಡೆ ಶ್ರೇಷ್ಠ ಭಾರತೀಯ ಸಾಧಕರಾದ ಉದಯಶಂಕರ, ಮಾಯಾ ರಾವ್ ಮುಂತಾದವರ ಕಥೆಯಂತೆಯೂ ಕಾಣುತ್ತದೆ. ಒಂದು ಬಡ ಸಮಾಜದಿಂದ ಬರುವ ಪ್ರತಿಭಾಶಾಲಿ, ಮತ್ತೊಂದು ಶ್ರೀಮಂತ ಸಮಾಜದಲ್ಲಿ ತನ್ನ ಕಲಾಸಿದ್ಧಿಯನ್ನು ಕಂಡುಕೊಳ್ಳುವುದು ಆಧುನಿಕ ಕಾಲದ ದುರದೃಷ್ಟಕರ ವ್ಯಂಗ್ಯ. ಈ ಕಥನ, ಕಲಾವಿದನ ಬಾಲ್ಯದಿಂದ ಪ್ರಾರಂಭವಾಗಿ ಇವನ ಕಲೆ ಪರಿಪೂರ್ಣವಾಗುವಲ್ಲಿಗೆ ಮುಗಿಯುತ್ತದೆ. ಹಾಗೆಯೇ, ಇನ್ನೊಂದು ನೆಲೆಯಲ್ಲಿ ಮಾವೋವಾದಿ ಚೀನಾದ ಕ್ರೌರ್ಯ ಹಾಗೂ ಬಂಡವಾಳಶಾಹಿ ಅಮೆರಿಕಾದ 'ಉದಾರವಾದ'ಗಳಿಗೂ ಕನ್ನಡಿ ಹಿಡಿಯುತ್ತದೆ.