Skip to product information
1 of 1

S. R. Bhat

ಮಾರ್ಕ್ಸ್‌ವಾದ ಮತ್ತು ಭಗವದ್ಗೀತೆ

ಮಾರ್ಕ್ಸ್‌ವಾದ ಮತ್ತು ಭಗವದ್ಗೀತೆ

Publisher -

Regular price Rs. 75.00
Regular price Sale price Rs. 75.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00

ಮಾರ್ಕ್ಸ್‌ವಾದ ಮತ್ತು ಭಗವದ್ಗೀತೆ

ಭಗವದ್ಗೀತೆಯು ಹಿಂದುಗಳ ಪವಿತ್ರ ಗ್ರಂಥಗಳಲ್ಲೊಂದು, ಅವರ ಧಾರ್ಮಿಕ – ಸಾಮಾಜಿಕ ಜೀವನದ ಮೇಲೆ ಮತ್ತು ಭಾರತದ ದಾರ್ಶನಿಕ ಪರಂಪರೆಯ ಮೇಲೆ ಅದು ಮಹತ್ತರ ಪ್ರಭಾವವನ್ನು ಬೀರಿದೆ. ಅದರ ಮೇಲೆ ನೂರಾರು ವ್ಯಾಖ್ಯಾನಗಳು ರಚಿತವಾಗಿವೆ. ಆದರೆ ಅದೇ ಸಮಯದಲ್ಲಿ ಗೀತೆಯ ಭಕ್ತರ ಮತ್ತು ಸಮರ್ಥಕರ ನಡುವೆ ಅದರ ಬೋಧನೆಗಳ ಬಗ್ಗೆ ಏಕಾಭಿಪ್ರಾಯವಿಲ್ಲ. ಬೇರೆ ಬೇರೆ ಕಾಲ ಮತ್ತು ಪರಿಸ್ಥಿತಿಗಳಲ್ಲಿ ಬೇರೆ ಬೇರೆ ವ್ಯಾಖ್ಯಾನಕಾರರು ಅದನ್ನು ಬೇರೆ ಬೇರೆ ರೀತಿಗಳಲ್ಲಿ ಅರ್ಥೈಸಿದ್ದಾರೆ. ಇಂದು ಕೂಡ ಅದಕ್ಕೆ ನಾನಾ ವಿಧವಾದ ಅರ್ಥಗಳನ್ನು ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವಂತೂ ಪರಸ್ಪರ ವಿರುದ್ಧವಾಗಿಯೂ ಇವೆ.

ಇದಕ್ಕೆ ಕಾರಣವೇನು ? ಗೀತೆಯ ನಿಜವಾದ ಸಂದೇಶ ಮತ್ತು ಉದ್ದೇಶಗಳು ಯಾವುವು? ಅದರ ಸಾಮಾಜಿಕ – ಐತಿಹಾಸಿಕ ಹಿನ್ನೆಲೆ ಯಾವುದು ? ಅದರ ಕರ್ತೃ ಎನ್ನಲಾದ ಶ್ರೀಕೃಷ್ಣ ನಿಜವಾಗಿಯೂ ಒಬ್ಬ ಚಾರಿತ್ರಿಕ ವ್ಯಕ್ತಿಯಾಗಿದ್ದನೆ? ಅದರ ಬೋಧನೆಗಳಿಂದ ಯಾರಿಗೆ ಪ್ರಯೋಜನವಾಗಿದೆ? ಅದು ಯಾವ ವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ? ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರನ್ನು ಹುರಿದುಂಬಿಸಲು ನಮ್ಮ ಕೆಲವು ನಾಯಕರು ಗೀತೆಯನ್ನು ಏಕೆ ಉಪಯೋಗಿಸಿದರು ಮತ್ತು ಅದರಿಂದಾದ ದುಷ್ಪರಿಣಾಮಗಳೇನು?

ಗೀತೆಯ ಬಗೆಗಿನ ಇಂಥ ಎಲ್ಲ ಪ್ರಶ್ನೆಗಳಿಗೂ ಈ ಪುಸ್ತಕ ಸಮರ್ಪಕವಾದ ಉತ್ತರ ನೀಡುತ್ತದೆ. ಗೀತೆಯನ್ನು ಗೌರವಿಸಲು ತಯಾರಿದ್ದರೂ, ಅದರ 'ಅಲೌಕಿಕ ಜ್ಞಾನಕ್ಕೆ ತಮ್ಮ ಬುದ್ಧಿಮತ್ತೆಯನ್ನು ಒತ್ತೆಯಿಡಲು ಸಿದ್ಧರಿಲ್ಲದ ವಿಚಾರಶೀಲ ವ್ಯಕ್ತಿಗಳಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಇದು ನೆರವು ನೀಡುತ್ತದೆ. ಹಾಗೆಯೇ ಹಿಂದೂ ಧರ್ಮದ ವೈಶಿಷ್ಟ್ಯಗಳೇನು ಮತ್ತು ಗೀತೆಯು ಅದಕ್ಕೆ ನೀಡಿದ ಕೊಡುಗೆ ಯಾವುದು ಎಂಬುದನ್ನೂ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ಈ ಕೃತಿ ವಿಶ್ಲೇಷಿಸುತ್ತದೆ.

ಇದು ಪ್ರತಿಯೊಬ್ಬರೂ ಓದಲೇಬೇಕಾದ ಅತ್ಯಂತ ವಿಚಾರಪ್ರಚೋದಕವಾದ ಪುಸ್ತಕ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

 

View full details