Skip to product information
1 of 1

M. R. Kamala

ಮಾರಿಬಿಡಿ

ಮಾರಿಬಿಡಿ

Publisher -

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages -

Type -

ಅಭಿವ್ಯಕ್ತಿಯಲ್ಲಿನ ಅಪ್ಪಟ ಪ್ರಾಮಾಣಿಕತೆ, ಒಂದಿನಿತೂ ಕಾಣದ ಕೃತಕತೆ ಹಾಗೂ ಸಹಜ ನೀರಿನ ಹರಿವಿನ ಹಾಗೆ ಕಾಣಿಸಿಕೊಳ್ಳುವ ಪ್ರಯೋಗಶೀಲತೆಗಳಿಂದ ಕನ್ನಡದ ಬಹುಮುಖ್ಯ ಕವಿಗಳಲ್ಲಿ ಒಬ್ಬರೆಂದು ಹಿರಿಯ ವಿದ್ವಾಂಸರು, ವಿಮರ್ಶಕರಿಂದ ಗುರುತಿಸಿಕೊಂಡಿರುವ ಕವಿ ಎಂ ಆರ್ ಕಮಲ ಇದೀಗ ತಮ್ಮ ನಾಲ್ಕನೆಯ ಕಾವ್ಯ ಸಂಗ್ರಹ ಪ್ರಕಟಿಸುತ್ತಿದ್ದಾರೆ.

ಸಿದ್ಧ ಮಾದರಿ, ಮಂದಿ ಮೆಚ್ಚುವ ಶೈಲಿ, ಧ್ರುವೀಕರಣದ ಅಬ್ಬರದಲ್ಲಿ ಸ್ವಂತಿಕೆ ಕಳೆದುಕೊಂಡು ತಬ್ಬಿಬ್ಬಾದ ಲೋಕದಲ್ಲಿ ಕಮಲ ಅವರ ಕವಿತೆಗಳು ಭಿನ್ನವಾಗಿ ನಿಲ್ಲುವುದಕ್ಕೆ ಕಾರಣ ಅವು ಭ್ರಮಾಲೋಕದಿಂದ ಮುಕ್ತವಾಗಿರುವುದು ಹಾಗೂ ಪರಿಮಿತಿಗಳನ್ನು ಮೀರಲು ಇರುವ ಏಕೈಕ ದಾರಿ ಸಹಜತೆ ಮತ್ತು ಸರಳತೆಗಳೇ ಆಗಿವೆ ಎಂದು ಅರಿತಿರುವುದು.

ಆತಂಕ, ತಲ್ಲಣ, ಭರವಸೆ, ಭಾವುಕತೆ, ಸಂಭ್ರಮ, ನಿರಪೇಕ್ಷತೆ ಹೀಗೆ ಎಲ್ಲವನ್ನೂ ಏಕಕಾಲದಲ್ಲಿ ಅಭಿವ್ಯಕ್ತಿಸಬಲ್ಲಷ್ಟು ಈ ಕವಿತೆಗಳು ಸಮರ್ಥವಾಗಿವೆ. ಏಕಮುಖತೆಯೇ ಸರ್ವಸ್ವವೂ ಆಗಿರುವ, ಮತ್ತು ಅದನ್ನು ಎಲ್ಲರೂ ಒಪ್ಪಬೇಕು ಎಂದು ನಿರೂಪಿಸುವ ಇಂದಿನ ಸಂದಿಗ್ಧ ಸನ್ನಿವೇಶದಲ್ಲಿ ಈ ಕವಿತೆಗಳು ಸಂವಾದ ಪ್ರಕ್ರಿಯೆಯಲ್ಲಿ ಅಪಾರ ನಂಬಿಕೆಯನ್ನು ತೋರುತ್ತವೆ. ಇದು ಅತ್ಯಂತ ಮಹತ್ವದ ಅಂಶವಾಗಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)