Basavaraj Kattimani
Publisher -
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಶೋಷಣೆ, ಅನ್ಯಾಯಗಳೆಂದರೆ ಸಿಡಿದೇಳುವ ಚೇತನ ಬಸವರಾಜ ಕಟ್ಟಿಮನಿ, ಆಧುನಿಕ ಕನ್ನಡ ಸಾಹಿತ್ಯದ ಪ್ರಗತಿಶೀಲ ಯುಗದ ಅತಿರಥ, ಮಹಾರಥರಲ್ಲಿ ಅವರೊಬ್ಬರು. ಸ್ವತಃ ಬಡತನವನ್ನು ಅನುಭವಿಸಿ, ಸ್ವಾತಂತ್ರ್ಯದ ಹೋರಾಟದಲ್ಲಿ ಸೆರಮನ ಕಂಡವರು, ಮೂಳೆ ಮುರಿಯುವಂಥ ನಿರುದ್ಯೋಗ ಸಮಸ್ಯೆಯ ಅನುಭವವನ್ನು ದಾಟಿ ಬಂದವರು. ಪತ್ರಿಕಾ ರಂಗದಲ್ಲಿನ ಶೋಷಣೆಯನ್ನು ಸ್ವತಃ ಅನುಭವಿಸಿದರು. ಕಾಲೇಜು ಮೆಟ್ಟಿಲು ಹತ್ತದಿದ್ದರೂ ಕಾಲೇಜುಗಳ ಸಾಹಿತ್ಯ ಅಧ್ಯಾಪಕರಿಗಿಂತ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಪ್ರತಿಭಟನಾ ಸಾಹಿತ್ಯವನ್ನು ಮೆಲಕು ಹಾಕಿದರು. ಕತ್ತಿಯ ಮೊನೆಯಂತಹ ಶಕ್ತಿಯುತವಾದ, ಹರಿತವಾದ ಶೈಲಿಯ ಪ್ರಭು. ಹೃದಯವಂತಿಕೆಯ ಪ್ರತಿಭಟನಕಾರ, ಬಾಳಿನ ಅನುಭವವನ್ನು ಸಮೃದ್ಧವಾಗಿ ರಕ್ತಗತ ಮಾಡಿಕೊಂಡವರು. ಯೌವನದ ದಿನಗಳಲ್ಲಿ ನಿರುದ್ಯೋಗದಿಂದ ಬಳಲಿದವರು. ಕಡೆಗೆ ಶಾಸಕರಾದವರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬಸವರಾಜ ಕಟ್ಟಿಮನಿ ವಿಶಿಷ್ಟ ವ್ಯಕ್ತಿತ್ವದ, ಓದಲೇಬೇಕಾದ ಸಣ್ಣ ಕತೆಗಳ ಬರಹಗಾರರು, ಕಾದಂಬರಿಕಾರರು.
-ಪ್ರೊ. ಎಲ್.ಎಸ್. ಶೇಷಗಿರಿ ರಾವ್
-ಪ್ರೊ. ಎಲ್.ಎಸ್. ಶೇಷಗಿರಿ ರಾವ್
