Skip to product information
1 of 1

Dr. M. S. S. Murthy

ಅಂಧರ ಜ್ಞಾನಜ್ಯೋತಿ ಲೂಯಿ ಬ್ರೈಲ್

ಅಂಧರ ಜ್ಞಾನಜ್ಯೋತಿ ಲೂಯಿ ಬ್ರೈಲ್

Publisher - ಪಂಚಮಿ ಪಬ್ಲಿಕೇಷನ್ಸ್

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಒಬ್ಬ ವ್ಯಕ್ತಿಯ ಯಶಸ್ಸು ತಾನೇ ಕಟ್ಟಿಕೊಂಡ ಚೌಕಟ್ಟಿನಿಂದ ಹೊರಬಂದ ತನ್ನ ಮುಕ್ತ ಆಲೋಚನೆಯಲ್ಲೇ ಇದೆ. ಆತನ ಸಂಕಲ್ಪ ಛಲ ವಿಶ್ವಾಸಗಳಲ್ಲೇ ಇದೆ. ಆತನ ನಿರಂತರ ಪ್ರಯತ್ನ ಪರಿಶ್ರಮಗಳಲ್ಲೇ ಇದೆ. ಎಂತಹ ಸಂಕಷ್ಟ ಸಂದಿಗ್ಧ ಪರಿಸ್ಥಿತಿಗಳನ್ನೂ ಧೈರ್ಯದಿಂದ ಎದುರಿಸಿ ಮುನ್ನಡೆಯುವುದರಲ್ಲೇ ಇದೆ ಎಂಬುದು ಲೂಯಿ ಬ್ರೈಲ್ ಜೀವನ ಸಾಧನೆಯಲ್ಲಿ ಮನದಟ್ಟಾಗುತ್ತದೆ. ಈ ಪುಸ್ತಕವನ್ನು ಓದುತ್ತಾ ಹೋದಂತೆ ಲೂಯಿಯ ಬದುಕು ಸಾಧನೆ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ, ರೋಮಾಂಚನಗೊಳಿಸುತ್ತದೆ. ಇಲ್ಲಿ ಲೇಖಕರ ಮೂಲ ಉದ್ದೇಶ ಸಾಧಿತವಾಗಿದೆ. ಯಾವುದೋ ದೇಶ, ಯಾವುದೋ ಭಾಷೆ, ಯಾವುದೋ ಧರ್ಮ ಆದರೆ ಲೂಯಿಯ ಇಂತಹ ಸಾಧನೆಯ ಅದ್ಭುತ ಬದುಕು ಲೇಖಕರನ್ನು ರೋಮಾಂಚನಗೊಳಿಸಿದೆ. ಹಾಗೆಯೇ ಮಾನವಕುಲದ ಅಂತಃಸತ್ವವನ್ನೂ ಶ್ರೀಮಂತಗೊಳಿಸುತ್ತದೆ. ಮಹಾನ್ ಸಾಧಕರು ಇಲ್ಲಿಗೂ, ಯಾವುದಕ್ಕೂ ಸೀಮಿತವಲ್ಲ. ಅವರು ಮಾನವಕುಲವನ್ನು ಕೈಹಿಡಿದು ನಡೆಸುವ ನಾಯಕರೇ ಎಂಬುದು ಸಾಬೀತಾಗುತ್ತದೆ. ಒಟ್ಟಿನಲ್ಲಿ ಈ ಪುಸ್ತಕದ ಭಾಷೆ, ಶೈಲಿ ವಿಧಾನಗಳು ಏನೇ ಇರಲಿ ಆದರೆ ಇದರಲ್ಲಿರುವ ಹೂರಣ ಮಾತ್ರ ಅದ್ಭುತ, ರೋಮಾಂಚನಕಾರಿಯೇ! ಇದು ಮಾನವ ಕುಲದ ಪ್ರಗತಿಯ ಹೆಜ್ಜೆ ಗುರುತೇ, ಲೂಯಿ ಬ್ರೈಲ್ ಅವರಂತಹ ಮಹಾನ್ ನಾಯಕರು ಎಂದೆಂದಿಗೂ ಮಾನವಕುಲದ ಪ್ರಗತಿಯ ಮಾರ್ಗದರ್ಶಕರೇ ಆಗಿದ್ದಾರೆ.
View full details