Meghana Kanetkar
ಲೈಫ್‌ನಲ್ಲೊಂದು ಯೂ ಟರ್ನ್
ಲೈಫ್‌ನಲ್ಲೊಂದು ಯೂ ಟರ್ನ್
Publisher - ಹರಿವು ಬುಕ್ಸ್
- Free Shipping Above ₹250
- Cash on Delivery (COD) Available
Pages - 144
Type - Paperback
Couldn't load pickup availability
ಕನ್ನಡ ಕಥೆಗಳ ಸುಗ್ಗಿ ಕಾಲದಲ್ಲಿ ಅನಿರೀಕ್ಷಿತಗಳ ಹೂರಣ, ವಾಸ್ತವವನ್ನು ಮುಖಕ್ಕೆ ರಾಚುವಂತೆ ತೆರೆದಿಡುತ್ತಾ, ಭಾವಾನುಭೂತಿಗಳ ಹಿಂದೆ ಅಡಗಿರಬಹುದಾದ ಕಹಿಸತ್ಯಗಳನ್ನು ನಮಗೆ ಅನುಸಂಧಾನ ಮಾಡಿಸುತ್ತಾ ಸಾಗುವ ಕತೆಗಳ ಲೇಖಕಿ ಮೇಘನಾ ಕಾನೇಟ್ಕರ್ ಕನ್ನಡದ ಸುಲಲೀತ ಬಳಕೆಯಲ್ಲಿ ಗೆದ್ದಿದ್ದರೆ, ನಮ್ಮೊಂದಿಗೆ ಸಾಗುತ್ತಲೇ ಇರುವ ನೈಜ ಘಟನಾವಳಿಗಳನ್ನು ಕತೆಯ ರೂಪಕ್ಕೆ ತಿರುಗಿಸುತ್ತಾ ಓದುಗರನ್ನು ಹಿಡಿದಿಡುವ ತಂತ್ರ ಇಲ್ಲಿನ ಹೆಚ್ಚುಗಾರಿಕೆ.
ಕಥನ ಪ್ರಕಾರದಲ್ಲಿ ಕಥನ ಶೈಲಿ ಮತ್ತು ವಸ್ತು ಪ್ರಮುಖ ಪಾತ್ರವಹಿಸುವಾಗ ಅವನ್ನೆಲ್ಲ ತಕ್ಕಷ್ಟೇ ಗಣಿಸುತ್ತಲೇ ಸಾಂದರ್ಭಿಕವಾಗಿ ಕತೆ ಹೆಣೆಯುವ ಲೇಖಕಿ, ಎಲ್ಲೋ ಮಸ್ತಿಷ್ಕದಲ್ಲಿದ್ದ ಪಾತ್ರವೊಂದಕ್ಕೆ ಚಕ್ಕನೆ ಜೀವ ತುಂಬಿ ನಿಲ್ಲಿಸುವ ಪರಿ ವಿಭಿನ್ನ. ಶೈಲಿ ಮತ್ತು ವಸ್ತುವನ್ನು ಬಳಸಿಕೊಳ್ಳುವುದರ ಜತೆಗೆ ಫ್ಯಾಂಟಸ್ಸಿಯನ್ನು ಬೆರೆಸುವ ಕಥನಗಾರಿಕೆ ಕನ್ನಡದಲ್ಲಿ ಆಗೀಗ ಸದ್ದು ಮಾಡಿದೆಯಾದರೂ ಆದನ್ನು ತಾಂತ್ರಿಕವಾಗಿ ದುಡಿಸಿಕೊಂಡವರು ಕಡಿಮೆ. ಬರೆಯುತ್ತಲೇ ಅಂಥದ್ದೊಂದು ಸಾಧ್ಯತೆಯತ್ತ ಪ್ರಯತ್ನ ನಡೆಸಿದ ಪ್ರಾಯೋಗಿಕ ಅಂಶ ಎದ್ದು ಕಾಣುತ್ತದೆ.
ಒಂದಷ್ಟು ಭಾವಪೂರಿತ ಜಿಜ್ಞಾಸೆ, ಮತ್ತಿಷ್ಟು ನೈಜತೆ ಜತೆಗೆ ಜೀವನದ ಕಹಿಸತ್ಯಗಳ ಅನಾವಣರಗೊಳಿಸುತ್ತಾ, ಇದೆಲ್ಲ ನಮ್ಮದೇನಾ ಎನ್ನುವಂತೆ ಬರೆಯುವ ಲೇಖಕಿಯಿಂದ ಕನ್ನಡ ಸಾಹಿತ್ಯಕ್ಕೆ ಇನ್ನಿಷ್ಟು ಸಮರ್ಥ ಬರಹಗಳು ಸಲ್ಲಲಿ ಎಂದು ಹಾರೈಸುತ್ತಾ,
- ಸಂತೋಷಕುಮಾರ ಮೆಹೆಂದಳೆ
ಕಾದಂಬರಿಕಾರ ಮತ್ತು ಅಂಕಣಕಾರ.
Author's Interview: https://youtu.be/P7ALKI3w9b4
Share


ಹಲವು ದಿನಗಳ ನಂತರ ಏಕಾಂತವಾಗಿ ಕುಳಿತು ಮೇಘನಾ ರವರು ಬರೆದಿರುವ ಲೈಫ್ ನಲ್ಲೊಂದು ಯೂ ಟರ್ನ್ ಪುಸ್ತಕವನ್ನು ಓದಿದೆ.
ಮೊದಲಿಗೆ ನನ್ನನ್ನು ಆಕರ್ಷಿಸಿದ್ದು ಈ ಪುಸ್ತಕದ ಮುಖಪುಟದ ಚಿತ್ರ. ಏನೋ ಒಂದು ಕುತೂಹಲಕಾರಿ ವಿಷಯ ಈ ಪುಸ್ತಕದಲ್ಲಿ ಅಡಗಿದೆ ಎಂಬಂತೆ ಭಾಸವಾಗುತ್ತದೆ. ಮುಖಪುಟದಲ್ಲಿ ಕುಳಿತಿರುವ ವಾಹನದ ಚಾಲಕಿ ಮೇಘನ ಅವರು ಓದುಗರು ಅದರ ಹಿಂದಿನ ಸೀಟಿನಲ್ಲಿ ಕುಳಿತು ಪಯಣದ ಆನಂದ ಸವಿಯುವ ಪ್ರಯಾಣಿಕರಾಗಿರುತ್ತಾರೆ. ಲೇಖಕಿ ಪ್ರತಿಯೊಂದು ಕಥೆಗೂ ಅದರ ಪಾತ್ರಕ್ಕೂ ಉತ್ತಮವಾದ ಕೊಡುಗೆ ನೀಡಿದ್ದಾರೆ. ಜೊತೆಗೆ ಈ ಕಥೆಗಳಿಗೆ ನ್ಯಾಯಯುತವಾದ ಮುಕ್ತಾಯವನ್ನು ನೀಡಿದ್ದಾರೆ. ಕೆಲವು ಕಡೆ ಪಾತ್ರ ನಾವಾದರೆ, ಇನ್ನೂ ಹಲವು ಕಡೆ ನಮ್ಮ ಸುತ್ತಲೂ ಗೊಂದಲದಲ್ಲಿ ಬದುಕುತ್ತಿರುವ ಪ್ರತಿ ಹೆಣ್ಣು ಅನುಭವಿಸುತ್ತಿರುವ ಸಾಮಾಜಿಕ ಸಮಸ್ಯೆಗಳ ಚಿತ್ರಣ ಕೆಲವು ಪಾತ್ರವಾಗಿ ಕಾಡಿತು.
ಕೆಲವು ಕಥೆಗಳು ಇನ್ನಷ್ಟು ನಮ್ಮನ್ನು ಕಾಡಿಸಬಹುದಾಗಿತ್ತು. ಪಾತ್ರವೂ ಇನ್ನಷ್ಟು ನಮ್ಮ ಜೊತೆ ಮಾತಾಡಬೇಕಾಗಿತ್ತು ಎಂಬ ಹತಾಶೆ ಕೂಡ ಓದುಗಳಾಗಿ ನನ್ನನ್ನು ಕಾಡಿತು. ಒಟ್ಟಿನಲ್ಲಿ ಖಂಡಿತವಾಗಲೂ ಕೊಂಡು ಓದಬಹುದಾದ ಪುಸ್ತಕ. ಲೇಖಕಿ
ಮೇಘನ ಕಾನೇಟ್ಕರ್ ಅವರು ಇನ್ನಷ್ಟು ಕಥೆ ಕವನ ಕಾದಂಬರಿಗಳನ್ನು ನೀಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯಲಿ ಶುಭವಾಗಲಿ.
Subscribe to our emails
Subscribe to our mailing list for insider news, product launches, and more.