ಜೋಗಿ
Publisher: ಸಾವಣ್ಣ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
per
Shipping calculated at checkout.
Couldn't load pickup availability
ಉಬಿಸಿಲಿನ ಮಧ್ಯಾಹ್ನ ತುಂತುರು ಮಳೆಯಾಗುತ್ತದೆ. ಕರಿಬೆಟ್ಟದ ತಪ್ಪಲಲ್ಲಿ ಬಿಳಿಹೂವುಗಳು ಅರಳುತ್ತವೆ. ಉಬ್ಬುಹಲ್ಲಿನ ಹುಡುಗಿ ಜೀವ ಹಿಂಡುವಂತೆ ಹಾಡುತ್ತಾಳೆ. ಕಪ್ಪಗಿನ ಹುಡುಗ ಚೆ೦ದದ ಕತೆ ಬರೆಯುತ್ತಾನೆ. ಪ್ರೇಮಿಸಿದ ಹುಡುಗಿಯ ಹೆಸರನ್ನು ಮಗಳಿಗಿಟ್ಟು ಸಂಭ್ರಮಿಸುತ್ತೇವೆ. ಕೈ ಕೊಟ್ಟ ಪ್ರೇಮಿಯನ್ನು ಕಾಲವೇ ಮರೆಸುತ್ತದೆ. ಬತ್ತಿಹೋದ ನದಿಯಲ್ಲೂ ಮತ್ತೆ ನೀರು ಹರಿಯುತ್ತದೆ. ಎತ್ತರದ ಮನೆಯ ಚೆಲುವ ಆಕಾಶಕ್ಕೆ ಬಣ್ಣ ಬಳಿಯುತ್ತಾಳೆ. ಟ್ರಾಫಿಕ್ಕು ಕಿಕ್ಕಿರಿದ ರಸ್ತೆಯನ್ನೂ ಪುಟ್ಟ ಮಗು ಕ್ಷೇಮವಾಗಿ ದಾಟಿಹೋಗುತ್ತದೆ. ಮಿಸ್ ಕಾಲಿನ ಆಚೆತುದಿಯಲ್ಲಿ ಮುಗುಳಗೆಯೊಂದು ಕಾದಿರುತ್ತದೆ. ಮುಂಗಾರು ಮಳೆಯ ಮುಂಜಾನೆ ಬೆಟ್ಟಕ್ಕೆ ಎಳೆಬಿಸಿಲೇ ಹೊದಿಕೆಯಾಗುತ್ತದೆ. ಎಲ್ಲೋ ಕೇಳಿದ ಹಾಡು ಜೀವನಪೂರ್ತಿ ಕಾಯುತ್ತದೆ. ಕತ್ತಲ ರಾತ್ರಿಯಲ್ಲಿ ಅವಳ ನಸುನಗೆ ದಾರಿ ತೋರುತ್ತದೆ. ಬಯಲಿನಲ್ಲಿ ಬಿಳಿಹಕ್ಕಿ ಇಳಿದು ಕಾಮನಬಿಲ್ಲನ್ನು ಕಣ್ಣುಂಬಿಸಿಕೊಳ್ಳುತ್ತವೆ. ಜೋಜಿನಲ್ಲಿ ಬಾಲ್ಯದಲ್ಲಿ ಹೆಚ್ಚಿದ ರಂಜೆ ಹೂವು ಹಾಗೆ ಉಳಿದಿರುತ್ತದೆ. ಪ್ರತಿ ಮಧ್ಯಾಹವೂ ಸವೆದು ಸವೆದು ಅವಳ ನೆನಪಿನಂಥ ಸಂಜೆಯಾಗುತ್ತದೆ. ದೇವರು ದೂರದಲ್ಲೆಲ್ಲೋ ಕೂತು ನೋಡುತ್ತಿರುತ್ತಾನೆ. ನಮ್ಮ ಎದುರಿಗಿರುವ ತಿಳಿಯಾದ ಸರೋವರವನ್ನು ಅವನು ತಪ್ಪಿಯೂ ಕಲಕುವುದಿಲ್ಲ.
ಲೈಫ್ ಇಸ್ ಬ್ಯೂಟಿಫುಲ್
ಲೈಫ್ ಇಸ್ ಬ್ಯೂಟಿಫುಲ್
