Dr. Sukanya Soonagahalli
ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ
ಲಾಲ್ ಬಾಗ್ ಕಲ್ಲಿನೊಂದಿಗೆ ಸಲ್ಲಾಪ
Publisher - ಹರಿವು ಬುಕ್ಸ್
- Free Shipping Above ₹250
- Cash on Delivery (COD) Available
Pages - 432
Type - Paperback
Couldn't load pickup availability
ಲಾಲ್‌ಬಾಗ್‌ನ ನಿತ್ಯ ಸಂತೆಯಲ್ಲಿ ನೀವೂ ಧ್ಯಾನಾಸಕ್ತರಾಗಬಹುದು. ಗೋಪುರದಲ್ಲಿ ಚಿತ್ರಿಸಿರುವ ಪುರಾಣ ಪ್ರಸಿದ್ಧರನ್ನು ನೆನೆದೋ ಅಥವಾ ಕಲಿಯುಗವನ್ನು ತೊರೆದು ದ್ವಾಪರವನ್ನೂ ದಾಟಿ ತ್ರೇತಾಯುಗವನ್ನೂ ಮೀಟಿ ಹಿಂದೆ ಸರಿಯಬಹುದು. ಈ ಲೋಕದ ರಂಪಗಳು ನಿಮ್ಮ ಏಕಾಂತತೆಗೆ ಭಂಗತಂದರೆ ಬೇಸರಪಡಬೇಡಿ, ಗುಡ್ಡದ ಯಾವ ಭಾಗದಲ್ಲಾದರೂ ಕಾಲು ಚೆಲ್ಲಿ, ನಿಮ್ಮ ಕಾಲಡಿಯಿರುವುದು ಈ ಯುಗ ಯುಗಗಳನ್ನೂ ಮೀರಿದ ಕಲ್ಲು, ಮನುಕುಲ ಹುಟ್ಟುವ ಸುಳಿವೂ ಇರದಿದ್ದ, ಭೂಮಿಯ ಆದಿ ಪರ್ವತದ ಒಂದು ತುಣುಕನ್ನೇ ಎತ್ತಿ ತಂದು ಇಲ್ಲಿ ಬಿಸುಟಿದ ಕಲ್ಲಿನ ಮೇಲೆ. ದೋಸೆ ಹೊಯ್ದು ಒಂದರ ಮೇಲೆ ಒಂದರಂತೆ ಪೇರಿಸಿದಂತೆ ಕಾಣುತ್ತದೆ ಸುತ್ತೆಲ್ಲ.
-ಲಾಲ್‌ಬಾಗ್ ಕಲ್ಲಿನೊಂದಿಗೆ ಸಲ್ಲಾಪ
ವಿಜ್ಞಾನವಿಲ್ಲದೆ ತಂತ್ರಜ್ಞಾನವಿಲ್ಲ, ವಿಜ್ಞಾನ 'ಜಾತೆ'ಯಾದರೆ, ತಂತ್ರಜ್ಞಾನ ಅದರ 'ತನುಜಾತೆ'. ಮುಂದೆ ಸ್ಮಾರ್ಟ್ ಫೋನ್‌ಗಳು ಏನಾಗುತ್ತವೆ? ಎತ್ತ ಸಾಗುತ್ತವೆ? ಮುಂದಿನ 20 ವರ್ಷಗಳಲ್ಲಿ ಅದು ಯಾವ ರೂಪದಲ್ಲಿರುತ್ತದೆ? ಒಂದಂತೂ ನಿಜ, ಆ ಹೊತ್ತಿಗೆ ನಮ್ಮ ಇಂದಿನ ಸ್ಮಾರ್ಟ್ ಫೋನ್‌ಗಳು ಓಬಿರಾಯನ ಕಾಲದವು ಎನ್ನಿಸಿದರೆ ಅದೇನೂ ಅವಾಸ್ತವವಾಗಲಾರದು. ನಿಮ್ಮ ಒಂದು ಕಣ್ಣನೋಟ, ಅಷ್ಟೇ ಏಕೆ ಬರೀ ಧ್ವನಿ ಸಾಕು, ನಿಮಗೆ ಬೇಕಾದ ಆ್ಯಪ್ ನಿಮ್ಮ ಫೋನಲ್ಲಿ ಕೂತುಬಿಡುತ್ತದೆ. ಬರೀ ನಿಮ್ಮ ನೋಟದಿಂದಲೇ ಚಿತ್ರಗಳನ್ನು ಎಡಿಟ್ ಮಾಡಬಹುದು. ತಲೆಯೊಳಗೆ ಒಂದು ಐಡಿಯಾ ಬಂದರೆ ಸಾಕು, ಅಲ್ಲಿ ಅದು ಪ್ರತ್ಯಕ್ಷವಾಗಿ ನಿಮ್ಮ ಸೇವೆಗೆ ಸಿದ್ಧ.
-ವಿಜ್ಞಾನದ ಭವಿಷ್ಯವೊ - ಭವಿಷ್ಯದ ವಿಜ್ಞಾನವೊ?
ಜಗತ್ತಿನ ಮೇಲೆ ಕಂಪ್ಯೂಟರ್ ಬೀರಿರುವ ಪರಿಣಾಮ ಅನೂಹ್ಯ. ಶಿಕ್ಷಿತರು ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ಅನಕ್ಷರಸ್ಥರ ಗುಂಪಿಗೆ ಸೇರಿಬಿಡುತ್ತಾರೆ. ಇದು ಕಂಪ್ಯೂಟರ್ ಸಾಕ್ಷರತೆಯ ಯುಗ 'ಸಾವಿಲ್ಲದ ಮನೆಯಿಂದ ಸಾಸಿವೆ ತಾ' ಎಂದು ಬುದ್ಧ, ಮಗುವನ್ನು ಕಳೆದುಕೊಂಡ ತಾಯಿಗೆ ಸಾಂತ್ವನ ಕೊಡಲು ಹೇಳಿದ ಮಾತು. ಇದನ್ನು ಕಂಪ್ಯೂಟರ್ ಲೋಕಕ್ಕೂ ವಿಸ್ತರಿಸಬಹುದು. 'ಸರ್ವಂ ಕಂಪ್ಯೂಟರ್ ಮಯಂ ಜಗತ್' ಎಂಬುದು ಉಪ್ಪೇಕ್ಷೆಯಲ್ಲ.
-ವಿಜ್ಞಾನದ ಪ್ರಭಾವದಲ್ಲಿ ಆಧುನಿಕ ಬದುಕಿನ ಪ್ರವಾಹ
Share


Subscribe to our emails
Subscribe to our mailing list for insider news, product launches, and more.