Rangaswamy Mookanahalli
ಲಕ್ಷಾಧಿಪತಿಯ ಗುಣಲಕ್ಷಣಗಳು
ಲಕ್ಷಾಧಿಪತಿಯ ಗುಣಲಕ್ಷಣಗಳು
Publisher - ಸಾವಣ್ಣ ಪ್ರಕಾಶನ
- Free Shipping Above ₹300
- Cash on Delivery (COD) Available
Pages - 160
Type - Paperback
Couldn't load pickup availability
ಅಸಾಮಾನ್ಯರು ಎನ್ನಿಸಿಕೊಳ್ಳುವುದಕ್ಕೆ ಮುಂಚೆ ಎಲ್ಲರೂ ಸಾಮಾನ್ಯರೆ! ಹೌದಲ್ವಾ? ನೀವೇ ಯೋಚಿಸಿ ನೋಡಿ, ಅವರಿಗೂ ಅಡೆತಡೆಗಳು ಎಲ್ಲರಿಗೂ ಬಂದಂತೆ ಬಂದಿರುತ್ತವೆ. ಅವರು ಅಡೆತಡೆಗಳ ಬಗ್ಗೆ ಗೊಣಗುತ್ತ ಕೂರುವ ಬದಲು ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆದಿರುತ್ತಾರೆ. ಈ ಧೀಮಂತ ಗುಣವೇ ಅವರನ್ನು ಗುಂಪಿನಿಂದ ಬೇರ್ಪಡಿಸುತ್ತದೆ. ವಿಶೇಷರನ್ನಾಗಿಸುತ್ತದೆ. ಲಕ್ಷಾಧಿಪತಿಯ ಗುಣಲಕ್ಷಣಗಳನ್ನು ನಾವು ಅಳವಡಿಸಿಕೊಳ್ಳಬಹುದೇ? ಅಥವಾ ಅವು ಅನುವಂಶಿಕವಾಗಿ ಬರುವಂತಹ ಗುಣಗಳೆ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಕೆಲವೊಂದು ಹುಟ್ಟಿನಿಂದ ಬಂದಿರುತ್ತದೆ ಎನ್ನುವುದು ನಿಜವಾದರೂ, ಬಹುತೇಕ ಗುಣಗಳನ್ನು ಕಲಿಕೆಯಿಂದ, ಸ್ವ-ಪ್ರಯತ್ನದಿಂದ ಅಳವಡಿಸಿಕೊಳ್ಳಬಹುದು. ಜಗತ್ತಿನ ಮುಕ್ಕಾಲು ಪಾಲು ಶೀಮಂತರು ಸೆಲ್ಫ್ ಮೇಡ್. ಅವರಿಗೂ ಯಾವ ಗಾಡ್ಫಾದರ್ ಇರಲಿಲ್ಲ ಎನ್ನುವುದು ಗೊತ್ತಿರಲಿ.
ನಿಮಗೆಲ್ಲಾ ಒಂದು ಅಚ್ಚರಿಯ ವಿಷಯವನ್ನು ಹೇಳುವೆ. ಅಚಾನಕ್ಕಾಗಿ ಅಂದರೆ ಲಾಟರಿ ಮೂಲಕ ಹಣ ಗಳಿಸಿದವರಲ್ಲಿ 70ಕ್ಕೂ ಹೆಚ್ಚು ಪ್ರತಿಶತ ಜನ ಒಂದೆರಡು ವರ್ಷಗಳಲ್ಲಿ ದಿವಾಳಿ ಎದ್ದು ಹೋಗುತ್ತಾರೆ ಎನ್ನುತ್ತದೆ ಸಂಶೋಧನೆ. ಅಮೆರಿಕನ್ ಬಾಂಕ್ರಾಫ್ಟ್ಸಿ ಇನ್ಸ್ಟಿಟ್ಯೂಟ್ ನಡೆಸಿದ ಸಂಶೋಧನೆಯಲ್ಲಿ ಲಾಟರಿ ಗೆದ್ದವರಲ್ಲಿ ಮೆಜಾರಿಟಿ 2ರಿಂದ 5 ವರ್ಷಗಳಲ್ಲಿ ದಿವಾಳಿ ಘೋಷಿಸಿಕೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿದೆ. ಇದರರ್ಥ ಸುಲಭವಾಗಿ ಬಂದದ್ದು ಸುಲಭವಾಗಿ ಹೋಗುತ್ತದೆ. ನಮಗ್ಯಾವುದೂ ಪುಕ್ಕಟೆ ಬೇಡ. ಸುಲಭವಾಗುವುದೂ ಬೇಡ. ಕ್ಷಮತೆ ಹೆಚ್ಚಿಸಿಕೊಳ್ಳೋಣ, ಇಲ್ಲಿನ ಗುಣಗಳನ್ನು ಅಳವಡಿಸಿಕೊಳ್ಳೋಣ. ಅವು ನಿಜಕ್ಕೂ ನಮ್ಮೊಂದಿಗೆ ಕೊನೆಯವರೆಗೂ ಬರುತ್ತವೆ.
Share
Subscribe to our emails
Subscribe to our mailing list for insider news, product launches, and more.