Skip to product information
1 of 2

Dr. A. Madhava Udupa

ಕುಟುಂಬ ಮತ್ತು ಸಂಸ್ಕೃತೀಕರಣ

ಕುಟುಂಬ ಮತ್ತು ಸಂಸ್ಕೃತೀಕರಣ

Publisher -

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 56

Type - Paperback

Gift Wrap
Gift Wrap Rs. 15.00

ಸಂಸ್ಕೃತೀಕರಣ ಸಾಂಗವಾಗುತ್ತಿರಲಿ ಕುಟುಂಬದಿಂದ!

ರಿಲೇ ಓಟದಲ್ಲಿ ದಂಡವನ್ನು ಮುಂದಿನ ಓಟಗಾರನಿಗೆ ಹಸ್ತಾಂತರಿಸುವಂತೆ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಸಾಮಾಜಿಕ ವ್ಯವಸ್ಥೆಯೇ ಕುಟುಂಬ. ಮಕ್ಕಳು ಯಾವಾಗಲೂ ಹಿರಿಯರ ವರ್ತನೆಯನ್ನು ನೋಡಿ, ಹಿರಿಯರ ಮಾತನ್ನು ಕೇಳಿ ಅವುಗಳನ್ನೇ ಅನುಕರಿಸುವ ಮೂಲಕ ಕಲಿಯುವುದರಿಂದ, ಮಕ್ಕಳಿಗೆ ಸಂಸ್ಕೃತಿಪಾಠವನ್ನು ಕಲಿಸಿ ಅವರನ್ನು ಸುಸಂಸ್ಕೃತರನ್ನಾಗಿಸಬೇಕೆಂದು ಬಯಸುವ ರಕ್ಷಕರು ತಾವೇ ಸಂಸ್ಕೃತಿಪಾಠವನ್ನು ಮೈಗೂಡಿಸಿಕೊಂಡು ಸುಸಂಸ್ಕೃತರಾಗಿರಬೇಕಾದ್ದು ತೀರಾ ಅವಶ್ಯ. ಹೀಗೆ ಆಗಿ, ಆಗಿಸುವ ಕೆಲಸ ಅವ್ಯಾಹತವಾಗಿ ನಡೆಯುವಂತಾದಲ್ಲಿ ಮಾತ್ರ ಸಂಸ್ಕೃತೀಕರಣದ ಕಾರ್ಯವೂ ಸಲೀಸೋ ಸಲೀಸು.

ಸಾವಿರ ಉಳಿ ಏಟುಗಳಿಂದ ಸುಂದರ ಶಿಲ್ಪ ಎಂಬಂತೆ ರಕ್ಷಕರ ಕಾಳಜಿಯಿಂದ, ಮುತುವರ್ಜಿಯಿಂದ ದಿನದಿನವೂ ಸಂಸ್ಕೃತೀಕರಣದ ಒಂದೊಂದೇ ಅಂಶ ಮೈಗೂಡುವಂತಾದಲ್ಲಿ, ಮಕ್ಕಳು ಸುಸಂಸ್ಕೃತರಾಗಿ ತಮ್ಮ ಜೀವನ-ಸಾಧನೆಯಿಂದ ರಕ್ಷಕರಿಗೆ ಇನ್ನಿಲ್ಲದ ಸಂತೋಷವನ್ನೂ, ಧನ್ಯತೆಯನ್ನೂ ಉಂಟುಮಾಡದಿರರು. ಕುಟುಂಬದಲ್ಲಿ ಆ ರೀತಿಯಲ್ಲಿ ಸಂತಸದ ಹೊಳೆಯೇ ಹರಿಯುವಂತಾದಲ್ಲಿ ಆ ಕುಟುಂಬ ಸುಖೀ ಕುಟುಂಬವಾಗಿ ಕಂಗೊಳಿಸೀತು. ಸರಪಳಿಯ ಕೊಂಡಿಕೊಂಡಿಯೂ ಬಲವಾಗಿದ್ದಲ್ಲಿ ಸರಪಳಿಯೇ ಬಲಶಾಲಿಯಾಗುವಂತೆ, ಸಮಾಜದ ಕುಟುಂಬಕುಟುಂಬವೂ ಸುಖೀ ಕುಟುಂಬವೇ ಆಗುವಂತಾದಲ್ಲಿ ದೇಶಕ್ಕೆ ದೇಶವೇ ಸ್ವಸ್ಥವೂ, ಸಶಕ್ತವೂ ಆಗದಿರದು. ಅಂದರೆ ರಾಷ್ಟ್ರನಿರ್ಮಾಣದ ತಾಯಿಬೇರೆ ಕುಟುಂಬ. ಮರ ಸೊಂಪಾಗಿರಲು ಬೇರನ್ನು ಪೋಷಿಸಬೇಕಾದಂತೆ, ದೇಶವು ಸುಸಂಸ್ಕೃತವೂ, ಸುಭದ್ರವೂ ಆಗಿರಲು ಸಂಸ್ಕೃತೀಕರಣದ ಸಾರನೀರೆರೆದು ಜತನದಿಂದ ಲಾಲಿಸಿಪಾಲಿಸಬೇಕಾದ್ದೇ ಕುಟುಂಬವನ್ನು.

View full details