Prashantha Adur
ಕುಟ್ಟವಲಕ್ಕಿ
ಕುಟ್ಟವಲಕ್ಕಿ
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 140
Type - Paperback
Couldn't load pickup availability
ಹಿಂಗ ಯಾಕ ಆಗೆದ ಅಂದರ ಎಲ್ಲಾರಿಗೂ ತಮ್ಮ ಅಳಿಯಾ ಕಂಪ್ಯೂಟರ್ ಇಂಜಿನಿಯರ್ ಬೇಕ್ರಿಪಾ, ಫಾರೆನ್ನಾಗ್ ಇರಬೇಕು, ಮುಂದ ಹೆಂಡತಿನ್ನೂ ಕರಕೊಂಡ್ ಹೋಗಬೇಕು. ಒಂದನೇ ಬಾಣಂತನಕ ಇವರೂ ಫಾರೆನ್ ಗೆ ಹೋಗೋರು. ಒಂದ ಕಾರು, ಬೆಂಗಳೂರ ಅಥವಾ ಪುಣೆ ಒಳಗ ಒಂದ ಅಪಾರ್ಟಮೆಂಟ್ ಅಂತೂ ಇದ್ದ ಇರತದ ಅಂತ ಇವರಿಗೆ ಖಾತ್ರಿ ಇವರ ಬೀಗತನ ಏನಿದ್ರು ನಾರಾಯಣಮೂರ್ತಿ, ಅಜಿಮ್ ಪ್ರೇಮಜಿ ಅಥವಾ ರತನ ಟಾಟಾ ಅಂಥಾವರ್ ಜೊತೀನ. ಇನ್ಫೋಸಿಸ್, ವಿಪ್ರೊ. ಟಿ.ಸಿ.ಎಸ್. ಇವೆಲ್ಲಾ ಗೋತ್ರಕ್ಕಿಂತಾ ಇಂಪಾರ್ಟೆಂಟ್ ಆಗೇದ. ಅದರಾಗ ಬ್ಯಾರೆ ಹುಡುಗಿನೂ ಏನರ ಜರ ಕರತಾ ಐ.ಟಿ. ಇಂಡಸ್ಟ್ರಿ ಒಳಗ ಇದ್ದರ ಮುಗದ ಹೋತ, ಆವಾಗ ಸ್ವ-ಗೋತ್ರನ ಬೇಕ (ಐ.ಟಿ. ಅನ್ನೊ ಗೋತ್ರ). ಇನ್ನೊಂದ ಸ್ವಲ್ಪ ದಿವಸ ತಡೀರಿ, ಬರಬರತ ಈ ಐ.ಟಿ ಕಂಪನಿ ಎಚ್.ಆರ್. ಡಿಪಾರ್ಟ್ಮೆಂಟ್ನವರು ವರ್ಷಕ್ಕೆ ಎರಡ-ಮೂರ ಸಲ ವದ್ದು-ವರರ ಸಮಾವೇಶ ಮಾಡತಾರ. 'ಇನ್ಫೋಸಿಸ್ ವಧು-ವರರ ಸಮಾವೇಶ' 'ವಿಪ್ರೊ ವಿವಾಹ ಕೇಂದ್ರ' ಅಂತೆಲ್ಲಾ ಹುಟ್ಟಲಿಲ್ಲಾ ಅಂದರ ಹೇಳಿ ನಂಗ, ಬ್ರಾಹ್ಮಣರಿಗೆ 'ರೆಡ್ಯೂಮ್' ಜೊತಿ 'ಕುಂಡ್ಲಿ' ಅಟ್ಯಾಚ ಮಾಡ್ರಿ ಅಂತ ಹೇಳ್ತಾರ.
Share

Subscribe to our emails
Subscribe to our mailing list for insider news, product launches, and more.