Devanoora Mahadeva
Publisher -
- Free Shipping
- Cash on Delivery (COD) Available
Couldn't load pickup availability
ದೇವನೂರ ಮಹಾದೇವ
ಹುಟ್ಟಿದ್ದು ೧೯೪೮ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ, ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ. ಕೆಲಕಾಲ ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಕೆಲಸ ಮಾಡಿ ಅಲ್ಲಿಯ ವೃತ್ತಿಗೆ ರಾಜೀನಾಮೆ ನೀಡಿ ವ್ಯವಸಾಯದಲ್ಲಿ ತೊಡಗಿದ್ದಾರೆ.
ಇವರ 'ಒಡಲಾಳ' ಕೃತಿಯನ್ನು ಕಲ್ಕತ್ತಾದ ಭಾರತೀಯ ಪರಿಷತ್ ೧೯೮೪ರ ಅತ್ಯುತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿತು. ೧೯೯೧ರಲ್ಲಿ ಇವರ 'ಕುಸುಮಬಾಲೆ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿತು. ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ (೧೯೯೫), ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ವಿ.ಎಂ. ಇನಾಂದಾರ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದಿರುವ ದೇವನೂರ ಮಹಾದೇವ ೧೯೮೯ರಲ್ಲಿ ಅಮೆರಿಕಾದಲ್ಲಿ ನಡೆದ 'ಇಂಟರ್‌ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ'ನಲ್ಲಿ ಭಾಗವಹಿಸಿದ್ದರು.
ಪ್ರಕಟಿತ ಕೃತಿಗಳು: ಕಥೆ: ದ್ಯಾವನೂರು (೧೯೭೩), ಕಾದಂಬರಿ: ಒಡಲಾಳ (೧೯೮೧), ಕುಸುಮಬಾಲೆ (೧೯೮೮). ವಿಚಾರ: ನೋಡು ಮತ್ತು ಕೊಡು. ಎದೆಗೆ ಬಿದ್ದ ಅಕ್ಷರ (೨೦೧೨).
