ಬಸವರಾಜ ಕುಂಚೂರು
Publisher:
Couldn't load pickup availability
ವೃತ್ತಿಯಿಂದ ಇಂಜನಿಯರಾದ ಬಸವರಾಜ ಕುಂಚೂರವರು ಕುಂಭಕಲಾ ಸಾಹಿತ್ಯಕ್ಕೆ ಈಗಾಗಲೇ ಮೂರು ಕೃತಿಗಳನ್ನು ನೀಡಿದ್ದಾರೆ. ಅವರು ಬರೆದ 'ಕುಂಬಾರ ಜನಾಂಗ' ಕುಂಭಕಲೆ ಮತ್ತು ಜನಾಂಗೀಯ ಅಧ್ಯಯನ ಕುರಿತಂತೆ ಒಂದು ಮಹತ್ತರವಾದ ಕೃತಿ. ಎರಡು ಪ್ರಶಸ್ತಿಗಳನ್ನು ಪಡೆದು ಎರಡನೆ ಮುದ್ರಣ ಕಂಡಿದೆ.
ವಂಶಪಾರಂಪರ್ಯವಾಗಿ ಬೆಳೆದು ಬಂದ ಗ್ರಾಮೀಣ ಕುಲವೃತ್ತಿಗಳು ಆಧುನಿಕ ತಂತ್ರಜ್ಞಾನ ಹಾಗೂ ಜಾಗತೀಕರಣದ ಒತ್ತಡಕ್ಕೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಕುಲಕಸುಬನ್ನು ಅವಲಂಬಿಸಿ ನೆಮ್ಮದಿಯಿಂದ ಬದುಕನ್ನು ಸಾಗಿಸುತ್ತಿದ್ದ ಕರಕುಶಲ ವೃತ್ತಿ ಜೀವಿಗಳ ಬದುಕು ನಂದಿ ಹೋಗಿರುವುದು ಮರೆಯಲಾಗದ ಕಹಿ ಇತಿಹಾಸ. ಅವರ ಬದುಕಿನ ಪರಧಿಯ ಸುತ್ತ ಉಪಭಾಷೆಗಳಂತೆ ಬೆಳೆದು ಬಂದ ವೃತ್ತಿಪದಗಳು ಕೂಡ ಹೇಳ ಹೆಸರಿಲ್ಲ ದಂತಾಗುತ್ತಿವೆ. ಭಾಷಾಶಾಸ್ತ್ರಕ್ಕೆ ಇದೊಂದು ದೊಡ್ಡ ಆಘಾತ! ಈ ಸಂದರ್ಭದಲ್ಲಿ ಬಸವರಾಜ ಕುಂಚೂರವರು ರಚಿಸಿದ 'ಕುಂಬಾರಿಕೆ ವೃತ್ತಿ ಪದಕೋಶ' ವೃತ್ತಿ ಪದಕೋಶ ರಚನಾಕಾರರಿಗೆ ಉಪಯುಕ್ತ ಗಂಥವಾಗಬಲ್ಲದು.
ಪ್ರಕಾಶಕರು - ಕನ್ನಡ ಸಾಹಿತ್ಯ ಪರಿಷತ್ತು
