S. Shadakshari
ಕ್ಷಣ ಹೊತ್ತು ಆಣಿ ಮುತ್ತು ಭಾಗ- 1
ಕ್ಷಣ ಹೊತ್ತು ಆಣಿ ಮುತ್ತು ಭಾಗ- 1
Publisher - ರಮಣಶ್ರೀ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 170
Type - Paperback
Couldn't load pickup availability
ವಿಜಯ ಕರ್ನಾಟಕದಲ್ಲಿ ಎಸ್. ಷಡಕ್ಷರಿ ಅವರು 'ಕ್ಷಣ ಹೊತ್ತು ಆಣಿಮುತ್ತು' ಅಂಕಣ ಬಹಳ ಜನಪ್ರಿಯ, ಪ್ರತಿದಿನವೂ ಅಂಕಣ ಬರೆಯುವುದು ಕಷ್ಟ ವೃತ್ತಿನಿಷ್ಠ ಬರಹಗಾರರೂ ದೈನಂದಿನ ಅಂಕಣಕ್ಕೆ ಒಪ್ಪುವುದಿಲ್ಲ. ಷಡಕ್ಷರಿಯವರು ಮೂಲತಃ ಬರಹಗಾರರಲ್ಲ. ಅವರು ಹೋಟೆಲ್ ಉದ್ಯಮಿಗಳು. ಅವರ ವ್ಯವಹಾರಗಳಲ್ಲಿ ಪುರುಸೊತ್ತಿಲ್ಲದಷ್ಟು ಕೆಲಸಗಳಿವೆ. ಅದರ ಜತೆ ಅವರು ಬಹಳ ಬೇಡಿಕೆಯಲ್ಲಿರುವ ಭಾಷಣಕಾರರು. ಶಾಲೆ-ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಆಗಾಗ ನಡೆಸಿಕೊಡುತ್ತಾರೆ. ಒಮ್ಮೆ ಕಾಲೇಜಿನಲ್ಲಿ ಷಡಕ್ಷರಿಯವರ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ, ಅವರಿಂದ ಈ ರೀತಿಯ ಅಂಕಣ ಬರೆಯಿಸಬೇಕೆಂದು ಅನಿಸಿತು. 'ಕ್ಷಣ ಹೊತ್ತು ಆಣಿಮುತ್ತು' ಎಂಬ ಹೆಸರಿಗೆ ಅನ್ವರ್ಥವಾಗಿ ಅಂಕಣ ಹೊರಹೊಮ್ಮುತ್ತಿರುವುದು ವಿಶೇಷ. ಎಲ್ಲ ವಯಸ್ಸಿನ ಓದುಗರಿಗೆ ಇಷ್ಟವಾಗುವ ಈ ಅಂಕಣ ನಮ್ಮ ಪತ್ರಿಕೆಯ ಬಹುಮೆಚ್ಚಿನ, ಬಹುತೇಕ ಎಲ್ಲ ಓದುಗರು ಕಾತರಿಸುವ ಬರಹ ಷಡಕ್ಷರಿಯವರದು 'ಕ್ಷಣ ಹೊತ್ತು ಆಣಿಮುತ್ತು' ಅಂಕಣದಲ್ಲಿ ಕಾಣಿಸಿಕೊಳ್ಳುವ ಅನೇಕ ಪ್ರೇರಣಾದಾಯಕ ವ್ಯಕ್ತಿಗಳ ಸಂಗಮ. ಅವರು ಬೇಸರದಲ್ಲಿದ್ದಿದ್ದನ್ನು, ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದನ್ನು ನಾನಂತೂ ಕಂಡಿಲ್ಲ. ಕಳೆದ ಮೂರು ವರ್ಷಗಳಿಂದ ನಾನು ಅವರೊಂದಿಗೆ ಹೆಚ್ಚಕಮ್ಮಿ ಪ್ರತಿದಿನ ಕನಿಷ್ಠ ಹತ್ತು ನಿಮಿಷಗಳಾದರೂ ಮಾತಾಡುತ್ತೇನೆ ಹಾಗೂ ಹತ್ತೂ ನಿಮಿಷ ನಗುತ್ತೇನೆ. ಜತೆಯಲ್ಲಿ ಅವರ ನಗುವೂ ಇರುತ್ತದೆ. ಷಡಕ್ಷರಿಯವರ ಅಂಕಣದಿಂದ ಅನೇಕರಿಗೆ ಸ್ಫೂರ್ತಿ ಸಿಕ್ಕಿದೆ. ವ್ಯವಹಾರದಲ್ಲಿ ಸೋತು ಎಲ್ಲ ಮುಗಿದೇ ಹೋಯಿತು ಎಂದು ಕೈಹೊತ್ತು ಕುಳಿತವರು ಈ ಬರಹ ಓದಿ ಎದ್ದು ನಿಂತಿದ್ದಾರೆ, ಆತ್ಮಹತ್ಯೆಗೆ ಪ್ರಯತ್ನಿಸಿದವರು ಹೊಸ ಭರವಸೆ ಪಡೆದಿದ್ದಾರೆ. ಪರೀಕ್ಷೆಯಲ್ಲಿ ಫೇಲಾದವರು, ಜೀವನದಲ್ಲಿ ಅವಮಾನ, ಹಿಂಸೆ ಅನುಭವಿಸಿ ಕುಗ್ಗಿದವರು, ಪದೇ ಪದೆ ಸೋಲನ್ನುಂಡವರು, ಬದುಕಲು ಸಾಧ್ಯವೇ ಇಲ್ಲವೆಂದು ನಿರ್ಧರಿಸಿದ ಹತಭಾಗ್ಯರು... ಷಡಕ್ಷರಿಯವರ ಬರಹ ಓದಿ ಆಶಾಕಿರಣ ಕಂಡವರಂತೆ, ಪುನಃ ನೆಮ್ಮದಿಯ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಅವರ ಬರಹ ಇಂಥ ಅನೇಕರಿಗೆ ಸಂಜೀವಿನಿಯಾಗಿದೆ.
- ವಿಶ್ವೇಶ್ವರ ಭಟ್ ಪ್ರಧಾನ ಸಂಪಾದಕರು, ವಿಜಯ ಕರ್ನಾಟಕ
Share

Subscribe to our emails
Subscribe to our mailing list for insider news, product launches, and more.