Dr. Gurumurthy Pendakur
ಕೃಷ್ಣದೇವರಾಯನ ಕಾಲದ ಕನ್ನಡ ಶಾಸನಗಳು
ಕೃಷ್ಣದೇವರಾಯನ ಕಾಲದ ಕನ್ನಡ ಶಾಸನಗಳು
Publisher - ಕನ್ನಡ ವಿಶ್ವವಿದ್ಯಾಲಯ
- Free Shipping Above ₹400
- Cash on Delivery (COD) Available*
Pages - 353
Type - Paperback
Couldn't load pickup availability
ವಿಜಯನಗರ ಸಾಮ್ರಾಜ್ಯದ ಪ್ರಸಿದ್ದ ಅರಸ ಕೃಷ್ಣದೇವರಾಯನ ಬದುಕು ವರ್ಣ ರಂಜಿತವಾದುದು. ಈತ ಅಪ್ರತಿಮ ಸಾಹಸಿ, ವೀರ ಯೋಧನಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದರ ಜೊತೆಗೆ ಉತ್ತಮ ಆಡಳಿತಗಾರನಾಗಿ ಪ್ರಜೆಗಳ ಒಳಿತಿಗಾಗಿ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸಿದನು. ತನ್ನ ಆಸ್ಥಾನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗಳ ಏಳಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದನು. ಇವನ ಆಡಳಿತದ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯ ಅತ್ಯಂತ ಸಂಪದ್ಭರಿತವಾಗಿದ್ದು ವೈಭವದಿಂದ ಮೆರೆದಿತ್ತು ಎಂಬ ವಿಚಾರ ಈತನ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರ ಬರಹಗಳಿಂದ ತಿಳಿದುಬರುತ್ತದೆ. ತನ್ನ ಸಾಮ್ರಾಜ್ಯದಲ್ಲಿ ಕೃಷಿ, ವಾಣಿಜ್ಯ, ವಿದೇಶಿ ವ್ಯಾಪಾರ, ಧಾರ್ಮಿಕ ವ್ಯವಸ್ಥೆ ಮುಂತಾದವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಸುಸ್ಥಿರ ಆಡಳಿತ ವ್ಯವಸ್ಥೆ ರೂಪಿಸಿದ್ದ. ಇತಿಹಾಸವನ್ನು ತಿಳಿಯಲು ಶಾಸನಗಳು ಮುಖ್ಯ ಆಕರಗಳಾಗುತ್ತವೆ. ಕೃಷ್ಣದೇವರಾಯನ ಆಡಳಿತದ ಅವಧಿಯಲ್ಲಿ ಬರೆಸಿದ ಅನೇಕ ಶಾಸನಗಳು ದೊರೆತಿವೆ. ಇವುಗಳು ಅಂದಿನ ಕಾಲದ ಜನಜೀವನ, ಸಾಮಾಜಿಕ-ಆರ್ಥಿಕ ಸ್ಥಾನಮಾನ, ಆಡಳಿತ ವ್ಯವಸ್ಥೆ, ಸಂಸ್ಕೃತಿ ಮುಂತಾದವುಗಳನ್ನು ಅರಿಯಲು ನೆರವಾಗುತ್ತವೆ. ಬಳ್ಳಾರಿ ಜಿಲ್ಲೆಯವರೇ ಆದ ಡಾ. ಗುರುಮೂರ್ತಿ ಪೆಂಡಕೂರು ಅವರು ವಿಜಯನಗರ ಸಾಮ್ರಾಜ್ಯ ಹಾಗೂ ಕೃಷ್ಣದೇವರಾಯನ ಮೇಲಿನ ಅಭಿಮಾನದಿಂದ ಈ ಅಧ್ಯಯನದಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆಸ್ಥೆಯಿಂದ ಈ ಕೃತಿಯನ್ನು ರಚಿಸಿದ್ದಾರೆ. ಅವರಿಗೆ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತವೆ.
ಡಾ. ಸ.ಚಿ. ರಮೇಶ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.