Skip to product information
1 of 2

Mangala C.

ಕೃಷ್ಣಮುದ್ರಿಕೆ

ಕೃಷ್ಣಮುದ್ರಿಕೆ

Publisher - ಅಹರ್ನಿಶಿ ಪ್ರಕಾಶನ

Regular price Rs. 310.00
Regular price Rs. 310.00 Sale price Rs. 310.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಬಹುಮಟ್ಟಿಗೆ ಮಧ್ಯ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ವಾಸವಾಗಿರುವ ಕಾಡುಗೊಲ್ಲ ಸಮುದಾಯಗಳ ಬಲವಾದ ನಂಬಿಕೆ, ಆಚರಣೆ ಮತ್ತು ದೈವಸಂಗತಿಗಳಿಂದ ಕೂಡಿರುವ ಹೋರಾಟದ ಬದುಕನ್ನು ಚಿತ್ರಿಸಲು టీమిర్ మంగళ ఆవరు 'కృష్ణముదికి శాదంబరియల్లి ಪ್ರಯತ್ನಿಸಿದ್ದಾರೆ. ಬುಡಕಟ್ಟು ಸಮುದಾಯವೆನಿಸುವ ಈ ಗೊಲ್ಲರು ತಮ್ಮ ಸಂಪ್ರದಾಯಗಳನ್ನು ಅನುಸರಿಸುತ್ತಲೇ ಅವುಗಳು ಸೃಷ್ಟಿಸುವ ಸಮಸ್ಯೆಗಳನ್ನು ಎದುರು ಹಾಕಿಕೊಂಡು ಬದುಕಿದ ಮುಗ್ಧರು, ಅಂಥದೊಂದು ಸಂಸಾರವನ್ನು ಕೇಂದ್ರವಾಗಿರಿಸಿ ಮಂಗಳ ಮೂರು ತಲೆಮಾರಿನ ಕಥೆಯನ್ನು ಕಟ್ಟಿ ಕೊನೆಯಲ್ಲಿ ಆಧುನಿಕತೆ ಅವರನ್ನು ತಕ್ಕ ಮಟ್ಟಿಗಾದರೂ ಒಂದು ನೆಲೆಗೆ ತಂದಿರುವುದನ್ನು ನಿರೂಪಿಸುತ್ತಾರೆ. ಈ ಬಗೆಯ ಬುಡಕಟ್ಟು ಜೀವನಕ್ಕೆ ಶತಮಾನಗಳಿಂದ ಕಡೆಯಿಂದಲೂ, ಯಾವ ನಾಗರಿಕತೆಯಿಂದಲೂ ಪರಿಹಾರವಿರುವುದಿಲ್ಲ ಇದೀಗ ಸರ್ಕಾರದಿಂದಲೂ ಕೂಡ ಇಂಥ ಅದೆಷ್ಟೋ ತಳಸಮುದಾಯಗಳು ಕರ್ನಾಟಕದಲ್ಲಿ ತಂತಮ್ಮ ನಂಬಿಕೆಗಳು, ಸಮಸ್ಯೆಗಳ ನಡುವೆ ಇನ್ನೂ ನೆಲೆ ಕಾಣದೆ ಹೋರಾಟ ಮಾಡುತ್ತಲೇ ಇವೆಯೋ ಎಂಬ ಯೋಚನೆಗೆ ಈಡು ಮಾಡುವಂತೆ ಈ ಕಾದಂಬರಿಯ ಸಂಗತಿಗಳಿರುತ್ತವೆ. ಯಾರ

ಆ ಕೃಷ್ಣಮೂರ್ತಿ ಹನೂರು

'ಕೃಷ್ಣಮುದ್ರಿಕೆ'ಯ ಕಥನವೃತ್ತಾಂತ ಆರಂಭದಲ್ಲೇ, ಗಂಡ ಸತ್ತ ಮೇಲೆ ಗರ್ಭಿಣಿಯಾದ ಈರಮ್ಮ ಸತ್ಯ ರುಜುವಾತು ಪಡಿಸಲಾಗದೆ ದಂಡನೆಗೊಳಗಾಗಿ ಹಾಲುಕುಡಿಯುವ ಕಂದನನ್ನು ತಂದೆ ತಾಯಿಯ ಬಳಿ ಬಿಟ್ಟು ಮತ್ತೆಂದೂ ಹಿಂದಿರುಗಿ ಬರುವ ಅವಕಾಶವಿರದ 'ಕೆಟ್ಟೋರಟ್ಟಿಗೆ' ಹೋಗಿ ಸೇರುವ ವಿದ್ಯಮಾನ ನಡೆಯುತ್ತದೆ. ಹಾಗೇ ಗರ್ಭಿಣಿಯಾಗಿದ್ದರೆ ಅವಳಿಗೆ ದಂಡನೆಯಾಗುತ್ತದೆಯೇ ಹೊರತು कर्म ಗರ್ಭಿಣಿಯಾಗುವುದಕ್ಕೆ ಕಾರಣನಾದ ಗಂಡಸಿನ ಬಗ್ಗೆ ಯಾವುದೇ ದಂಡನಾಕ್ರಮ ಕೈಗೊಳ್ಳದೇ ಹೋಗುವುದು ಕಣ್ಣಿಗೆ ರಾಚುತ್ತದೆ. ಹೆರಿಗೆಯಾದಾಗ ಇಡೀ ಹೆರಿಗೆಯ ನೂತಕವನ್ನು ಬಾಣಂತಿಯೊಬ್ಬಳೇ ಹೊರಬೇಕು. ಹಟ್ಟಿ ಹೊರಗಿನ ತಾತ್ಕಾಲಿಕ ಗುಡ್ಡುನಲ್ಲಿ ಗಾಳಿ, ಮಳೆ ಲೆಕ್ಕವಿಲ್ಲದಂತೆ ಅವಳು ತನ್ನ ಕಂದನನ್ನ ಸಲಹಿ, ತಿಂಗಳ ಕಾಲದ ಸೂತಕ ಕಳೆದ ಮೇಲೆ ಜನಿಗೆ ಹಾಲು ಹಾಕಿಸಿಕೊಂಡು ಹಟ್ಟಿಯ ಒಳಕ್ಕೆ ಬರಬೇಕು.

 

View full details

Talk about your brand

Share information about your brand with your customers. Describe a product, make announcements, or welcome customers to your store.