Siddesh. K
ಕೋಲು ದಾರಿ
ಕೋಲು ದಾರಿ
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 144
Type - Paperback
Couldn't load pickup availability
ಒಂದು ಕ್ಷಣ ಊಹಿಸಿ, ಹದಿನೆಂಟರ ಹರೆಯದಲ್ಲಿ, ಇಡೀ ಜಗತ್ತೇ ರಂಗುರಂಗಾಗಿ ಕಾಣುವ ಕಿಶೋರದಲ್ಲಿ ಒಂದು ದಿನ ನೀವು ಏಳುತ್ತೀರಿ, ಲೈಟ್ ಆಫ್ ಮಾಡಿದಂತೆ ಕತ್ತಲು, ಕಗ್ಗತ್ತಲು. ಮತ್ತೆ ಆ ಸ್ವಿಚ್ ಆನ್ ಮಾಡಲಾರಿರಿ, ನಿಮ್ಮ ಜಗತ್ತಿನಿಂದ ಬೆಳಕು ಶಾಶ್ವತವಾಗಿ ನಿರ್ಗಮಿಸಿದೆ. ಅದರೊಡನೆ ಜಗತ್ತೇ ಕಣ್ಮರೆಯಾಗಿದೆ.
ಬದುಕು ಕೆಡವಿ ಬೀಳಿಸಿದ ಇಂತಹ ಹೊತ್ತು, ತಡವರಿಸಿದರೂ ಕುಸಿಯದೆ 'ನಿಮಗೆಂದಿಗೂ ಹೊರೆಯಾಗೋಲ್ಲ' ಎಂಬ ಆತ್ಮವಿಶ್ವಾಸದ ಆಶ್ವಾಸನೆಯನ್ನು ಹೆತ್ತವರಿಗಷ್ಟೇ ಅಲ್ಲ, ತಮಗೇ ಕೊಟ್ಟುಕೊಂಡ ಅದ್ಭುತದ ವ್ಯಕ್ತಿ ಸಿದ್ದೇಶ. ಯೌವನಕ್ಕೆ ಕಾಲಿಡುವ ಹರೆಯದಲ್ಲಿ ಎರಡೂ ಕಣ್ಣು ಕಳೆದುಕೊಂಡ ಪುಟ್ಟ ಹಳ್ಳಿಯೊಂದರ ಬಡ ಹುಡುಗ ಸಿದ್ದೇಶ್ ಸವೆಸಿದ ಆ ಹಾದಿ ಸುಗಮವಿರಲಿಲ್ಲ.
ಕಡು ಕಷ್ಟದ ಬದುಕಿನ ಪರ್ವತಾರೋಹಣ ಮಾಡಿ ಸಂತಸದ ಶಿಖರದಲ್ಲಿ ನೆಮ್ಮದಿಯ ನಿಲ್ದಾಣ ತಲುಪಿದ ವ್ಯಕ್ತಿಯೊಬ್ಬರು ಹಂಚಿಕೊಂಡ ಈ ಕಥನ, ಬಿಡದೆ ಓದಿಸಿಕೊಂಡು ಹೋಗುತ್ತದೆ. ಸಾಧ್ಯತೆಯ ಹೊಸ ಜಗತ್ತನ್ನು ನಮ್ಮೆದುರು ತೆರೆದು ತೋರಿಸುತ್ತದೆ. ತಮ್ಮ ಅನುಭವಗಳ ಬುತ್ತಿ ಬಿಚ್ಚಿಡುವ ಸಿದ್ದೇಶ್ ಅವರ ಬದುಕು ಪ್ರೀತಿಯ ಈ ಕತೆ ಮನಸ್ಸನ್ನು ಆದ್ರ್ರಗೊಳಿಸುತ್ತದೆ; ನಾವು ಕಾಣದ ಜಗತ್ತಿಗೆ ಕಿಂಡಿ ಕೊರೆಯುತ್ತದೆ; ನಮ್ಮ ಕಣ್ಣು ತೆರೆಸುತ್ತದೆ.
-ನೇಮಿಚಂದ್ರ
Share

Subscribe to our emails
Subscribe to our mailing list for insider news, product launches, and more.