Skip to product information
1 of 1

Dr. Hebbale K. Nagesh

ಕೊಡವ ಪರಂಪರೆಯ ಸಾಂಸ್ಕೃತಿಕ ಪದಕೋಶ

ಕೊಡವ ಪರಂಪರೆಯ ಸಾಂಸ್ಕೃತಿಕ ಪದಕೋಶ

Publisher - ಕನ್ನಡ ವಿಶ್ವವಿದ್ಯಾಲಯ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping

- Cash on Delivery (COD) Available

ಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ. ಹೀಗಾಗಿ ಏಕಕಾಲಕ್ಕೆ ಕನ್ನಡದ ಜಗತ್ತಿನ ಜ್ಞಾನವನ್ನು ವಿಶ್ವಕ್ಕೆ ನೀಡುವ ಮತ್ತು ವಿಶ್ವದ ಜ್ಞಾನವನ್ನು ಕನ್ನಡದ ಮೂಲಕ ಪಡೆಯುವ ಸ್ಥಾಯಿ ಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ಕಾರ್ಯ ಮಾಡುತ್ತಿದೆ.

ಕನ್ನಡ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಲು ಅದರ ಉಪಭಾಷೆಗಳೂ ಕಾರಣವಾಗಿವೆ. ಸರ್ವಜನಾಂಗಗಳಿರುವಂತೆ ಸರ್ವಭಾಷೆಗಳು ನಮ್ಮಲ್ಲಿವೆ. ಒಂದೊಂದು ಜನಾಂಗವೂ ತನ್ನ ಅಸ್ಮಿತೆಯನ್ನು ಸಾಂಸ್ಕೃತಿಕವಾಗಿ ರೂಪಿಸಿಕೊಳ್ಳುತ್ತಲೇ ಇರುತ್ತದೆ. ಪ್ರತಿಯೊಂದು ಜನಾಂಗಕ್ಕೂ ಪರಂಪರೆ ಇರುವಂತೆ ಭಾಷೆಯ ಸಾಂಸ್ಕೃತಿಕ ರೂಪವೂ ಇದೆ. ಆದರೆ ಪ್ರಧಾನ ಭಾಷೆಯ ಸಾಂಸ್ಕೃತಿಕ ದಾಳಿಯಿಂದ ಅನೇಕ ಉಪಭಾಷೆ ಇಂದು ಅಳಿವಿನಂಚಿನಲ್ಲಿವೆ. ಪ್ರಭುತ್ವದ ಭಾಷೆಯೂ, ಜನರ ದೈನಂದಿನ ಭಾಷೆಯಾಗಿದೆಯೇ ? ಎನ್ನುವ ಪ್ರಶ್ನೆಗಳು ನಮ್ಮ ಮುಂದಿವೆ. ಇದನ್ನು ಒಂದು ಗ್ರಹಿಕೆಯನ್ನಾಗಿಸಿಕೊಂಡು ಡಾ. ಹೆಬ್ಬಾಲೆ ಕೆ. ನಾಗೇಶ್ ಅವರು ಈ ಸಾಂಸ್ಕೃತಿಕ ಪದಕೋಶವನ್ನು ರಚಿಸಿದ್ದಾರೆ. ಅವರೇ ಹೇಳುವಂತೆ “ಕನ್ನಡ ಭಾಷೆಯು ಪ್ರಾಚೀನ ಕಾಲದಿಂದಲೂ ರಾಜಭಾಷೆಯಾಗಿ ರಾಜರಿಂದ ಮನ್ನಣೆ ಗಳಿಸುತ್ತಾ ಲಿಖಿತ ಆಕಾರವಾಗಿ ಭಾಷೆ ವೃದ್ಧಿಯಾಯಿತು. ಇದರ ಭರಾಟೆಯಲ್ಲಿ ಕೊಡವ ಭಾಷೆಯು ಸೀಮಿತ ಚೌಕಟ್ಟಿಗೆ ಒಳಪಟ್ಟಿದ್ದು ಜಾಗತಿಕ ವಿದ್ಯಮಾನದಿಂದ ದೂರ ಉಳಿದಿದೆ.” ಅಳಿವಿನಂಚಿನಲ್ಲಿರುವ ಕೊಡವ ಶಬ್ದಗಳನ್ನು ದಾಖಲಿಸಿದ್ದಲ್ಲದೆ, ಕನ್ನಡದ ಸಹ ಸಂಬಂಧವನ್ನು ಸಹ ವಿವರಿಸಲಾಗಿದೆ.

ಡಾ. ಮಲ್ಲಿಕಾ, ಎಸ್. ಘಂಟಿ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)