I. M. Muttanna
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಸುಮಾರು ಮೂರು ಸಾವಿರದೈನೂರಕ್ಕಿಂತ ಹೆಚ್ಚಿನ ಸಂಖ್ಯೆಯ ಕೊಡವಶಬ್ದಗಳು ಅರ್ಥಸಹಿತವಾಗಿ ಇಲ್ಲಿ ದಾಖಲಾಗಿವೆ. ಕನ್ನಡಿಗರ ಸಂಪರ್ಕದಿಂದ ಕೊಡವ ಪದಗಳೊಂದಿಗೆ ಎಷ್ಟೋ ಕನ್ನಡ ಪದಗಳು ಅರ್ಥಸಹಿತವಾಗಿ ಸೇರಿಕೊಂಡು ಅವು ಕೊಡವ ಶಬ್ದಗಳೇ ಎಂಬಷ್ಟರ ಮಟ್ಟಿಗೆ ಬಳಕೆಯಾಗುತ್ತಿರುವುದನ್ನು ಇಲ್ಲಿ ಗಮನಿಸುತ್ತೇವೆ. ಶಬ್ದಗಳಿಗೆ ಅರ್ಥ ಕೊಡುವಾಗಲೇ ಅಲ್ಲಲ್ಲಿ ಆಯಾ ಭಾಗದ ಪದಗಳಿಗೆ ಅನ್ವಯವಾಗುವಂತೆ ಕೊಡವ ಭಾಷೆಯ ಜಾಯಮಾನಕ್ಕೆ ತಕ್ಕ ಕೆಲವು ವಿವರಗಳನ್ನು 'ಸೂಚನೆ'ಯ ಅಡಿಯಲ್ಲಿ ಒದಗಿಸುತ್ತ ಹೋಗಿರುವುದು ಆ ಭಾಷೆಯ ಬಗೆಗೆ ಅವರಿಗಿರುವ ಪಾಂಡಿತ್ಯ ಮತ್ತು ಶ್ರದ್ಧಾಪೂರ್ಣ ಅಭ್ಯಾಸಕ್ಕೆ ಸಾಕ್ಷಿನೀಡುತ್ತವೆ. ಕನ್ನಡ-ಸಂಸ್ಕೃತ ಪದಗಳು ಅಪಭ್ರಂಶವಾಗಿ ಪ್ರಯೋಗವಾಗಿರುವುದು, ಕೊಡವ ಕುಟುಂಬಗಳ ಹೆಸರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರುವುದು ಈ ಕೋಶದ ವೈಶಿಷ್ಟ್ಯವಾಗಿದೆ.
