S. R. Sulakode
Publisher -
Regular price
Rs. 140.00
Regular price
Rs. 140.00
Sale price
Rs. 140.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡ ನೆಲದಲ್ಲಿ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಸಮರ ಹಲವು ನಿಟ್ಟಿನಿಂದಲೂ ಗಮನಾರ್ಹವಾಗಿದೆ. ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕಾಗಿ ಸಮರ ಹೂಡಿದ್ದು, ವೀರ ಮಹಿಳೆಯಾದ ರಾಣಿ ಚೆನ್ನಮ್ಮನ ನೇತೃತ್ವದಲ್ಲಿ ಮತ್ತು ಯಾವುದೇ ಅಳುಕಿಲ್ಲದೆ, ಬಲಾಡ್ಯ ಸೈನ್ಯವನ್ನು ಎದುರಿಸಿ ಗೆಲುವು ಸಾಧಿಸಿದ್ದು ಹಾಗೂ ಸಂಸ್ಥಾನದ ಪ್ರತಿ ಪ್ರಜೆಯು ಸ್ವಾತಂತ್ರ್ಯಕ್ಕಾಗಿ ಪಣ ತೊಟ್ಟು ಸ್ವಾತಂತ್ರ್ಯ ಸಮರವನ್ನು ಮುಂದುವರಿಸಿಕೊಂಡು ನಾಡಿನ ಅಭಿಮಾನಕ್ಕೆ ಪ್ರಾಶಸ್ತ್ರವನ್ನು ಪಸರಿಸಿದ್ದು, ಮುಖ್ಯವೆಂದು ಹೇಳಬಹುದು. ಕಿತ್ತೂರು ಸಂಸ್ಥಾನದ ವೀರರಾಣಿ ಕಿತ್ತೂರು ಚೆನ್ನಮ್ಮಾಜಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೂಡಿದ ಸಮರವು ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೆಜ್ಜೆ ಎಂದು ಗುರುತಿಸಲಾಗಿದೆ. ಬ್ರಿಟಿಷರ ಕುತಂತ್ರ ಮತ್ತು ಸಂಸ್ಥಾನಗಳ ಕಬಳಿಕೆಯನ್ನು ಸಾರ್ವಜನಿಕರು ಒಗ್ಗಟ್ಟಿನಿಂದ ಎದುರಿಸಿದ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ಸಂಗ್ರಾಮವು, ಭಾರತ ಸ್ವಾತಂತ್ರ್ಯಕ್ಕೂ ಸ್ಮರಣೀಯ ಕೊಡುಗೆಯನ್ನು ನೀಡಿದ್ದು ಹೆಮ್ಮೆಯ ಸಂಗತಿಯೇ ಆಗಿದೆ. ಕಿತ್ತೂರು ಸಂಸ್ಥಾನವು ಸ್ವಾತಂತ್ರ್ಯ ಸಂಗ್ರಾಮಕ್ಕೆ ದಿಟ್ಟ ನೆಲೆಯಾಗಿ ಸ್ಫೂರ್ತಿಯಾಗಿ, ಪರಾಕ್ರಮದ ಸೆಲೆಯಾಗಿ ನಿಂತದ್ದು ಐತಿಹಾಸಿಕ ಸತ್ಯವಾಗಿದೆ. ಈ ನಾಡಿನ ಅಸಂಖ್ಯಾತ ಸ್ವಾತಂತ್ರ್ಯ ಪ್ರೇಮಿಗಳು, ಯೋಧರು ಭಾಗವಹಿಸಲು, ಕಿತ್ತೂರು ಸಂಸ್ಥಾನದ ರಾಣಿಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಬಂಟರು ಸ್ಫೂರ್ತಿಯಾಗಿ ನಿಂತಿದ್ದುದನ್ನು ಎಂದೂ ಮರೆಯಲಾಗದ ಸ್ವದೇಶಿತನಕ್ಕೆ ಸಾಕ್ಷಿಯಾಗಿದೆ.
- ಸಂಪಾದಕರು
- ಸಂಪಾದಕರು
