Prashanth Beechi
ಕಿಲಿಮಂಜಾರೋ
ಕಿಲಿಮಂಜಾರೋ
Publisher - ಛಂದ ಪ್ರಕಾಶನ
- Free Shipping Above ₹350
- Cash on Delivery (COD) Available*
Pages - 90
Type - Paperback
Couldn't load pickup availability
"ಆಫ್ರಿಕಾದಲ್ಲಿ ಸಿಕ್ಕಾಪಟ್ಟೆ ಬಿಸಿಲಂತೆ, ಅದೇ ಕಾರಣಕ್ಕೆ ಅಲ್ಲಿಯ ಜನ ಕಪ್ಪಗಿರ್ತಾರೆ, ಆದಷ್ಟು ಬಿಳಿ ಕಲರ್ ಶರ್ಟ್ ತಗೊಂಡು ಹೋಗು" ಅಂತ ಹೇಳಿದವರು ಒಂದು ಕಡೆ. "ಆಫ್ರಿಕಾದಲ್ಲಿ ಸಖತ್ ಚಳಿ ಅಂತೆ. ಅಲ್ಲಿ ಸೂರ್ಯ ಕಾಣೋದೆ ಅಪರೂಪ ಅಂತೆ. ಅದಕ್ಕೆ ಸ್ವೆಟರು ಮತ್ತು ಉಣ್ಣೆ ಬಟ್ಟೆ ಇಡ್ಕೊಳ್ಳೋದು ಮರಿಬ್ಯಾಡ" ಎಂದು ಎಚ್ಚರಿಸಿದವರು ಮತ್ತೊಂದು ಕಡೆ. ಹೀಗೆ ತದ್ವಿರುದ್ಧ ಉಪದೇಶಗಳ ಸುರಿಮಳೆ ನನ್ನ ಮೇಲಾಗಿತ್ತು. ಈ ತರಹದ ಮಾತು-ಕತೆ ಕೇವಲ ಚಳಿ-ಬಿಸಿಲಿಗಷ್ಟೆ ಅಲ್ಲ, ಹತ್ತು ಹಲವಾರು ವಿಷಯಗಳ ಮೇಲೆ ನಡೆದಿತ್ತು. ಇದೆಲ್ಲ ಸುಳ್ಳು ಎಂದು ಹೇಳದಿದ್ದರೂ ನಿಜವಂತೂ ಅಲ್ಲ ಎಂದು ನಾನು ತಾನ್ಜಾನಿಯಾಗೆ ಬಂದ ಮೇಲೆ ಗೊತ್ತಾಗಿದ್ದು, ಸೂರ್ಯ ಕಾಣದಿರುವ, ಬಿಸಿಲು ಬೀಳದಿರುವ ಕೆಲವು ಪ್ರದೇಶಗಳು ಇನ್ನೂ ಆಫ್ರಿಕಾದಲ್ಲಿ ಇವೆ. ಆದರೆ ಅವು ಕ್ಷೀಣಿಸುತ್ತಿವೆ. ಪೂರ್ತಿ ಆಫ್ರಿಕಾದ ಬಗ್ಗೆ ತಿಳಿಸಲು ಆಗದ ಕಾರಣ, ನಾ ಕಂಡ ತಾನ್ಜಾನಿಯಾದ ಬಗ್ಗೆ ತಿಳಿಸುತ್ತೇನೆ.
Share

Subscribe to our emails
Subscribe to our mailing list for insider news, product launches, and more.