ಗುರುಪ್ರಸಾದ್ ಕಾಗಿನೆಲೆ
Publisher: ಅಂಕಿತ ಪುಸ್ತಕ
Regular price
Rs. 350.00
Regular price
Sale price
Rs. 350.00
Unit price
per
Shipping calculated at checkout.
Couldn't load pickup availability
ಮನುಷ್ಯ ತನ್ನ ಬದುಕಿನ ಆಯುಷ್ಯವನ್ನು ಎಳೆದಂತೆ ತನ್ನ ಸೌಂದರ್ಯದ ಆಯುಷ್ಯವನ್ನೂ ಹೆಚ್ಚಿಸುವ ಕಾರ್ಯಕ್ಕೆ ಇಳಿದಿರುವುದು ತೀರಾ ಹೊಸದೇನೂ ಅಲ್ಲವಾದರೂ ಸಿನೆಮಾ ತಾರೆಯರಿಗೋ, ಜಾಹೀರಾತಿನ ರೂಪದರ್ಶಿಗಳಿಗೋ ಸೀಮಿತವಾಗಿದ್ದ ಸೌಂದರ್ಯವರ್ಧಕ ಸೌಂದರ್ಯೋಪಾಸಕ ಚಿಕಿತ್ಸೆಗಳು ಸಾಮಾನ್ಯ ಜನರಿಗೂ ಎಟುಕುವಂತಾಗಿ ಅವರದಕ್ಕೆ ಹಾತೊರೆಯುವಂತಾಗಿದ್ದು ಅಚ್ಚರಿಯ ವಿಷಯ. ತನ್ನ ಇಗೋ ಸರ್‌ಪ್ರೈವಲ್ಲಿಗಾಗಿ ಸೋಶಿಯಲ್ ಅಕ್ಸೆಪೆನಿಗಾಗಿ ತನ್ನ ಅಸ್ತಿತ್ವವನ್ನು ಬದಲಾಯಿಸಿಕೊಳ್ಳುವ ಅವನ ಮಾನಸಿಕ ಸ್ಥಿತಿ, ಪಡುವ ಪ್ರಯಾಸಗಳು ಬೆರಗು, ಹೆದರಿಕೆ ಎರಡೂ ಹುಟ್ಟಿಸಿದವು. ಅಯ್ಯೋ ಮನುಷ್ಯ ಪ್ರಾಣಿಯೇ, ಅದೆಷ್ಟು ಸಂಕೀರ್ಣ ಬದುಕು, ಅಂತೆಯೇ ತಾನೇ ಅಮರಶಿಲ್ಪಿ ಜಕಣಾಚಾರಿಯ ಪುನರ್ಜನ್ಮ ಎಂದು ಭ್ರಮೆಗೆ ಬಿದ್ದ ಮಲೀಕನಂಥಹ ವೈದ್ಯನ ಬದುಕು, ಆತನ ಕೈಗೆ ಸಿಕ್ಕ ಸಮಂತಾಳ ಕಾಯ ಪಲ್ಲಟ, ಕಸ್ತೂರಿ, ಪರಿ, ಹನಿ, ಸಿದ್ದಿಕಿ ಎಲ್ಲಾ ಪಾತ್ರಗಳೂ ವಿಚಿತ್ರ ಸಂವೇದನೆ ಹುಟ್ಟಿಸಿದವು. ಕಪ್ಪು ಬಿಳುಪಿನ ಮಧ್ಯೆಯೇ ಸುಳಿದಾಡುವ ಇವರೆಲ್ಲರೂ ನನಗೆ ವೈಯಕ್ತಿಕವಾಗಿ ಬದುಕು ದೊಡ್ಡದು, ಯಾವುದೇ ತಪ್ಪುಗಳಾದರೂ ಸುಧಾರಿಸಿಕೊಳ್ಳುವ ಅವಕಾಶವನ್ನು ಕೊಟ್ಟೇ ಕೊಡುತ್ತದೆಯೆಂಬ ನಂಬಿಕೆಯನ್ನು ಹುಟ್ಟಿಸಿದರು. ಎಷ್ಟು ಬಗೆಯ ಶೇಡ್ಸ್ ಬೂದು ಬಣ್ಣದಲ್ಲಿ ಕಪ್ಪಾಗುವವರೆಗೂ ಬದುಕನ್ನು ಮತ್ತೆ ಮತ್ತೆ ಕಟ್ಟಿಕೊಳ್ಳಲೇಬೇಕು.
ಸೌಮ್ಯ ಕಲ್ಯಾಣ್‌ಕರ್
ಸೌಮ್ಯ ಕಲ್ಯಾಣ್‌ಕರ್
