Padmanabha Bhat, Shevkara
ಕೇಪಿನ ಡಬ್ಬಿ
ಕೇಪಿನ ಡಬ್ಬಿ
Publisher - ಛಂದ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಕಲಾಪಠ್ಯವೆನ್ನುವುದು ಅನುಭವ ಕಾಣ್ಕೆಗಳ ಅಖಂಡ ಸೃಷ್ಟಿ ಎನ್ನುವುದು ನಿಜ. ಆದರೆ ಅನುಭವಗಳೊಂದಿಗಾಗಲಿ ಕಾಣ್ಕೆಗಳೊಂದಿಗಾಗಲಿ ನಿಷ್ಟುರವಾದ ಅನುಸಂಧಾನಕ್ಕೆ ಬೇಕಾಗುವ - ಮನೋವಿನ್ಯಾಸವನ್ನು ಕಟ್ಟಿಕೊಳ್ಳುವುದು ಮತ್ತು ಅದನ್ನು ಎಲ್ಲ ಕಾಲಕ್ಕೂ ಉಳಿಸಿಕೊಳ್ಳುವುದು ಒಂದು ನಿರಂತರ ಸವಾಲು, ಪದ್ಮನಾಭ ಅವರು ಈ ಸವಾಲನ್ನು ಬಹುದಿಟ್ಟವಾಗಿ ಎದುರಿಸಿದ್ದಾರೆ. ಬರವಣಿಗೆಯ ಆರಂಭದಲ್ಲಿ ಸಹಜವೆನ್ನುವಂತೆ ಕಾಡುವ ಕೆಲವು ಹಿಂಜರಿಕೆ ಮತ್ತು ಅನುಮಾನಗಳನ್ನು ಪದ್ಮನಾಭ ಯಶಸ್ವಿಯಾಗಿ ನಿಭಾಯಿಸಿದ್ದಾರೆಂದೇ ಅವರ ಕಥೆಗಳ ಬಗ್ಗೆ ಅಪಾರ ಆಸಕ್ತಿ ಹುಟ್ಟುತ್ತದೆ.
ಶೈಲಿಯ ಸಂಯಮ, ಅನುಭವದ ಗಟ್ಟಿತನ ಮತ್ತು ಬಿಗಿಯಾದ, ಮೊನಚಾದ ಭಾಷೆ ಪದ್ಮನಾಭರ ಕಥೆಗಳ ಮೂಲ ಲಕ್ಷಣಗಳು. ಆಡಂಬರವಿಲ್ಲದ, ತೋರಿಕೆಯಿಲ್ಲದ, ಜನಪ್ರಿಯತೆಯ ಹಪಾಹಪಿಯಿಲ್ಲದ ಈ ಕಥೆಗಾರ ಕನ್ನಡದ ಮುಖ್ಯ ಕಥೆಗಾರನಾಗುವ ದಾರಿಯಲ್ಲಿದ್ದಾರೆ ಎನ್ನುವುದು ಆಶಯವೂ ಹೌದು,ವಾಸ್ತವವೂ ಹೌದು. ಆಳದನುಭವವನ್ನು ಮಾತು ಕೈ ಹಿಡಿಯುವ ದಾರಿಯಲ್ಲಿ ಈ ಯುವ ಕಥೆಗಾರ ಎಲ್ಲ ಯಶಸ್ಸನ್ನೂ ಕಾಣಲಿ. ಈ ಪ್ರಶಸ್ತಿಯನ್ನು ಹಕ್ಕಿನಿಂದ ಪಡೆದ ಪದ್ಮನಾಭರಿಗೆ ಅಭಿನಂದನೆಗಳು.
-ಎಂ ಎಸ್ ಆಶಾದೇವಿ

Share
Subscribe to our emails
Subscribe to our mailing list for insider news, product launches, and more.