Skip to product information
1 of 2

Swami Sivaatmaananda Puri

ಕೇದಾರನ ಕಾಶಿ

ಕೇದಾರನ ಕಾಶಿ

Publisher - ವಂಶಿ ಪಬ್ಲಿಕೇಷನ್ಸ್

Regular price Rs. 320.00
Regular price Rs. 320.00 Sale price Rs. 320.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 368

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕಾಶೀಕ್ಷೇತ್ರವು ಪ್ರಸಿದ್ಧ ಯಾತ್ರಾಸ್ಥಲವಷ್ಟೇ ಅಲ್ಲ, ಭಾರತೀಯ ಯೋಗಾಧ್ಯಾತ್ಮ ಚೈತನ್ಯದ ಮೂಲಕೇಂದ್ರವೂ ಹೌದು! ಕಾಶಿಯ ವಿಶ್ವೇಶ್ವರ ಜ್ಯೋತಿರ್ಲಿಂಗವು ಭಾರತೀಯ ಯೋಗಾಧ್ಯಾತ್ಮ ಶಕ್ತಿಯನ್ನು ಯುಗ ಮನ್ವಂತರಗಳನ್ನೂ ದಾಟಿದ ಕಲ್ಪಾಂತ್ಯದವರೆಗೂ ಸಂರಕ್ಷಿಸುವ ಕಲ್ಪಜ್ಯೋತಿ/ ವಿಶ್ವೇಶ್ವರ ಜ್ಯೋತಿರ್ಲಿಂಗದ ಅವಯವಗಳಾಗಿವೆ ಕಾಶಿಯಲ್ಲಿರುವ ಉಳಿದ ಅಂಗಗಳು! ಗಂಗಾ ನದಿಯು ವಿಶ್ವೇಶ್ವರ ಜಟೆಯ ಚಂದ್ರಕಳೆಯಂತೆ ಕಾಶಿಯಲ್ಲಿ ಶೋಭಿಸುತ್ತ ಚಂದ್ರ ಬೆಳಗಿನ ಪ್ರಭೆ ಪೂಸುತ್ತಿದ್ದಾಳೆ! ಕಾಶಿಕ್ಷೇತ್ರದ ತಳಹದಿಯು ಒಂದೊಂದು ಯುಗದಲ್ಲಿಯೂ ಒಂದೊಂದು ಆಕಾರದಲ್ಲಿ ಭದ್ರಗೊಳ್ಳುತ್ತದೆ!

ಭಾರತ ದೇಶವು ಒಬ್ಬ ಯೋಗಸಾಧಕನಂಥ ಯೋಗಶರೀರವನ್ನು ಒಳಗೊಂಡಿದೆ,ಯೋಗಸಾಧಕನ ಶರೀರದೊಳಗೆ ಕುಂಡಲಿನೀ ಸ್ಥಾನಗಳಿರುವಂತೆ ಭರತಭೂಮಿಗೂ ಯೋಗಶರೀರವಿದೆ! ಹೀಗಾಗಿಯೇ ಭಾರತವನ್ನು ಯೋಗಭೂಮಿ ಎಂದಿದೆ.ಭರತಭೂಮಿಯ ಈ ಯೋಗಶರೀರದೊಳಗಿನ ಕುಂಡಲಿನೀ ಶಕ್ತಿಯನ್ನು ಪೂಜ್ಯ ಸ್ವಾಮಿ ವಿವೇಕಾನಂದರು ಜಾಗೃತಗೊಳಿಸಿದರು! 

ಕಾಶಿಯಲ್ಲಿದ್ದ ಕೇದಾರನೆಂಬ ಹುಡುಗನು ತನ್ನ ದೇಹದಿಂದ ಹೊರಬಂದು ಲೋಕಾಂತರಗಳಲ್ಲಿ ಸಂಚರಿಸಿ ಮರಳುತ್ತಿದ್ದ! ಹಿಮಾಲಯದಲ್ಲಿ ದ್ವಾಪರ ಯುಗದಲ್ಲಿ ಸಮಾಧಿಯಲ್ಲಿ ಮುಳುಗಿದ ಮಹಾಯೋಗಿವರ್ಯರು ಈಗಲೂ ಆ ಸಮಾಧಿಯಿಂದ ಭಂಗಗೊಳ್ಳದಂತಿದ್ದಾರೆ! ಎಂದೋ ದೇಹ ಬಿಟ್ಟ ಯೋಗಿವರ್ಯ ತನ್ನ ಶಿಷ್ಯನ ಹುಡುಕಾಟದಲ್ಲಿ ಆತನಿಗೆ ದರ್ಶನ ನೀಡಲು ದೇಹ ತಾಳಿ ಬರುತ್ತಾರೆ ! ಈ ಭೂಮಿಗೆ ಮಳೆ ಸುರಿಯುವುದು ಪ್ರಕೃತಿಶಕ್ತಿಯ ಲೀಲಾವಿಲಾಸವಷ್ಟೇ ಹೌದೇ?.

-ಓದಲಾರಂಭಿಸಿದರೆ ಭಾರತೀಯ ಯೋಗಾಧ್ಯಾತ್ಮದ ಬಹಳಷ್ಟು ನಿಗೂಡ ವಿಚಾರಗಳು ಕಂಗಳೆದುರು ಮಿಂಚಿ ಹೊಳೆಯುತ್ತ, ಬೆರಗಿನಲ್ಲಿ ಮುಳುಗಿಸುತ್ತ ಜ್ಞಾನದ ಬೆಳಗನ್ನು ಸೂಸುತ್ತವೆ.

ಮೂರು ಭಾಗಗಳಲ್ಲಿರುವ ಈ ಗ್ರಂಥವು ಮೊದಲ ಭಾಗದಲ್ಲಿ ಕಾಶೀಯಾತ್ರೆಯ ಅನುಭವದಲ್ಲಿ ಇದುವರೆಗೂ ಗುಪ್ತವಾಗಿರುವ ಬಹಳಷ್ಟು ಗಹನ ವಿಚಾರಗಳನ್ನು ನಿರೂಪಿಸಿದೆ; ಎರಡನೆಯ ಭಾಗದಲ್ಲಿ ಲೋಕಜೀವಿತದೊಳಗೆ ಮಿನುಗುವ ಯೋಗಾಧ್ಯಾತ್ಮದ ಘಟನೆಗಳಿವೆ: ಮೂರನೆಯ ಭಾಗದಲ್ಲಿ ಭಾರತೀಯ ಯೋಗಾಧ್ಯಾತ್ಮದ ಚಿಂತನ ಮಂಥನದ ವಿವೇಚನೆಯಿದೆ. ಕಣ್ಮರೆಯಾಗಿರುವ ಭಾರತೀಯ ಕಾಲಮಾನದ ಯುಗಚಕ್ರ ವಿಚಾರವೂ ಇಲ್ಲಿ ಮಥನಗೊಂಡಿದೆ. ಈ ಕೃತಿಯು ಭಾರತೀಯ ಯೋಗಮಾರ್ಗದ ಸಾಧನಾಪಥದಲ್ಲಿರುವ ಸಾಧಕನೊಬ್ಬನ ಸಾಧನೆ. 

ಈ ಕೃತಿಯು ಭಾರತೀಯ ಯೋಗಮಾರ್ಗದ ಸಾಧನಾಪಥದಲ್ಲಿರುವ ಸಾಧಕನೊಬ್ಬನ ಸಾಧನೆ. ಸ್ವಾಧ್ಯಾಯ ಹಾಗೂ ಸತ್ಸಂಗದ ಫಲವಾಗಿ ಪ್ರಕಟಗೊಂಡಿದೆ.

View full details